ಪರಿಸರ ಕಾಪಾಡಲು ಗುಬ್ಬಚ್ಚಿಗಳ ಪಾತ್ರ ಪ್ರಮುಖ  

blank

ದಾವಣಗೆರೆ : ಪರಿಸರ ಸಮತೋಲನ ಕಾಪಾಡುವಲ್ಲಿ ಜೀವ ಸಂಕುಲದ ಅತಿ ಸಣ್ಣ ಪಕ್ಷಿಯಾದ ಗುಬ್ಬಚ್ಚಿಗಳ ಪಾತ್ರ ಬಹಳ ಮಹತ್ವದ್ದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ಗೋಪ್ಯಾ ನಾಯಕ್ ಹೇಳಿದರು.  ರೋಟರಿ ಕ್ಲಬ್ ವಿದ್ಯಾನಗರದ ವತಿಯಿಂದ ನಗರದ ಮಾಗನೂರು ಬಸಪ್ಪ ಪ್ರೌಢಶಾಲೆಯಲ್ಲಿ ಗುರುವಾರ, ವಿಶ್ವ ಗುಬ್ಬಚ್ಚಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಅಳಿದು ಹೋಗುತ್ತಿರುವ ಗುಬ್ಬಚ್ಚಿಗಳ ಸಂತತಿ ಕಾಪಾಡಲು ಶ್ರಮಿಸೋಣ. ಅವುಗಳ ಉಳಿವಿಗಾಗಿ ಜನಜಾಗೃತಿ ಮೂಡಿಸೋಣ. ಅವುಗಳ ಚಿಲಿಪಿಲಿ ಗಾನವನ್ನು ಮುಂದಿನ ಪೀಳಿಗೆಗಾಗಿ ಉಳಿಸೋಣ ಎಂದು ತಿಳಿಸಿದರು.  ಇದೇ ಸಂದರ್ಭದಲ್ಲಿ ವಿದ್ಯಾನಗರ ರೋಟರಿ ಕ್ಲಬ್ ಅಡಿಯಲ್ಲಿ ಮಾಗನೂರು ಬಸಪ್ಪ ಪ್ರೌಢಶಾಲೆಯಲ್ಲಿ ಇಂಟರಾಕ್ಟೃ್ ಕ್ಲಬ್ ಸ್ಥಾಪಿಸಲಾಯಿತು. ಕ್ಲಬ್ನ ಉದ್ಘಾಟನೆಯನ್ನು ರೋಟರಿ ವಿದ್ಯಾನಗರ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಂ.ಬಿ. ಸಂಗಮೇಶ್ವರ ಗೌಡ ನೆರವೇರಿಸಿದರು.  ಇಂಟರಾಕ್ಟೃ್ ಅಧ್ಯಕ್ಷೆ ಯುಕ್ತಾ ಹಾಗೂ ಕಾರ್ಯದರ್ಶಿ ಸುಮಾ ಪಾಟೀಲ್ ಅವರಿಗೆ ರೋಟರಿ ಜಿಲ್ಲೆ, 3160 ರೋಟರ‌್ಯಾಕ್ಟೃ್ ಪ್ರತಿನಿಧಿ ಎ. ಉಮರ್ಶಾದ್ ಪದಗ್ರಹಣ ನೆರವೇರಿಸಿ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾನಗರ ರೋಟರಿ ಅಧ್ಯಕ್ಷ ಎಸ್.ಎನ್. ಮಳವಳ್ಳಿ ವಹಿಸಿದ್ದರು. ರೋಟರಿ ಅಸಿಸ್ಟಂಟ್ ಗವರ್ನರ್ ಎಂ.ಎನ್. ಬಿಲ್ಲಳ್ಳಿ ಹಾಗೂ ಆಡಳಿತ ಅಧಿಕಾರಿ ಎಸ್.ಆರ್. ಸಿರಗಂಬಿ, ರೊಟೇರಿಯನ್‌ಗಳಾದ ಮಹೇಶ್ವರಪ್ಪ, ಪ್ರಕಾಶ್, ವೀರಣ್ಣ, ಇನ್ನರ್‌ವ್ಹೀಲ್ ಸದಸ್ಯರು ಭಾಗವಹಿಸಿದ್ದರು.  ಕೆ.ಜಿ. ಭಾರತಿ ಸ್ವಾಗತಿಸಿದರು. ಜೆ.ಆರ್. ಶೃತಿ ವಂದಿಸಿದರು. ಎಂ.ಬಿ. ಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಎಚ್.ಎಂ. ಚಂದ್ರಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಬಿ. ಮೃತ್ಯುಂಜಯಪ್ಪ ಅತಿಥಿಗಳನ್ನು ಪರಿಚಯಿಸಿದರು.  

blank
Share This Article

Toilet ಬಳಸಿದ ನಂತರ ಈ ತಪ್ಪು ಎಂದಿಗೂ ಮಾಡಬೇಡಿ: ಅಪಾಯ ಕಾದಿದೆಯಂತೆ!

Toilet : ನಮಲ್ಲಿ ಹಲವರು ಶೌಚಾಲಯ (ಪಾಶ್ಚಾತ್ಯ ಶೌಚಾಲಯ) ಬಳಸಿದ ನಂತರ ಟಾಯ್ಲೆಟ್​ನ ಮುಚ್ಚುಳ ಮುಚ್ಚದೇ…

ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips

  Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…