ದಾವಣಗೆರೆ : ಪಿಕ್ಸೆಲ್ ಆರ್ಟ್ ಎಂಬ ಕಲೆಯಲ್ಲಿ ಭಾವಚಿತ್ರ ರಚಿಸುವ ಮೂಲಕ ನಗರದ ಕಲಾವಿದೆ ಪಿ. ಸ್ನೇಹಾ 2024ನೇ ಸಾಲಿನ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಸ್ನೇಹಾ ಅವರು ಪಿಕ್ಸೆಲ್ ಆರ್ಟ್‌ನಲ್ಲಿ ಸುಮಾರು 25 ಗ್ರಾಫ್ ಶೀಟ್ ಬಳಸಿ, 8 ದಿನಗಳ ಕಾಲ ಶ್ರಮವಹಿಸಿ, 3.93*2.95 ಅಡಿಗಳ ಅಳತೆಯಲ್ಲಿ ನಟ ಡಾ.ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರ ರಚಿಸಿರುವುದು ದಾಖಲೆಗೆ ಪಾತ್ರವಾಗಿದೆ. ಹರಿಯಾಣ ರಾಜ್ಯದ ಫರಿದಾಬಾದ್ ನಗರದ ಇಂಡಿಯಾ ಬುಕ್ಸ್ ಆಫ್ ರೆಕಾರ್ಡ್ಸ್‌ನಲ್ಲಿ ಈ ದಾಖಲೆ ನಿರ್ಮಿಸಿದ್ದು, ಈ ಕಲಾಕೃತಿಯನ್ನು ‘ಲಾರ್ಜೆಸ್ಟ್ ಪಿಕ್ಸೆಲ್ ಆರ್ಟ್ ಪೋರ್ಟ್ರೇಟ್’ ಎಂದು ಪ್ರೋತ್ಸಾಹಿಸಿ, ಉತ್ತಮ ಪ್ರಶಂಸೆಯೊಂದಿಗೆ ಪ್ರಶಸ್ತಿ ಪ್ರಮಾಣ ಪತ್ರ, ಪದಕ ಹಾಗೂ ರೆಕಾರ್ಡ್ ಬುಕ್ ನೀಡಿ ಅಭಿನಂದಿಸಲಾಗಿದೆ. ದಾವಣಗೆರೆ ವಿದ್ಯಾನಗರ ವಾಸಿ ಪತ್ರಿಕಾ ವಿತರಕ ಪಿ.ಪ್ರಕಾಶ್ ಹಾಗೂ ಲಕ್ಷ್ಮಿ ಪ್ರಕಾಶ್ ಇವರ ಪುತ್ರಿ ಪಿ.ಸ್ನೇಹಾ ಇಂಜಿನಿಯರಿಂಗ್ ವೃತ್ತಿಯ ಜತೆಗೆ ಪ್ರವೃತ್ತಿಯಾಗಿ ಪೆನ್ಸಿಲ್ ಸ್ಕೆಚ್, ಪೇಯಿಂಟಿಂಗ್, ಸ್ಟ್ರಿಂಗ್ ಆರ್ಟ್, (ನೂಲು ಚಿತ್ರ) ಪಿಕ್ಸೆಲ್ ಆರ್ಟ್, ರೆಸಿನ್ ಆರ್ಟ್ ಸೇರಿ ವಿವಿಧ ಕಲಾಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿವಿಧ ಪ್ರಕಾರದ ರಂಗೋಲಿ ಬಿಡಿಸುವ ಸ್ನೇಹಾ ಮನೆಯಲ್ಲಿ ಗೌರಿ ಗಣೇಶ, ಲಕ್ಷ್ಮೀ ಪೂಜೆ ಇತ್ಯಾದಿ ಸಂದರ್ಭದಲ್ಲಿ ದೇವರ ಮಂಟಪವನ್ನು ವಿಭಿನ್ನವಾಗಿ ಅಲಂಕರಿಸುವಲ್ಲಿ ಎತ್ತಿದ ಕೈ. ಇದಲ್ಲದೆ ವಿಭಿನ್ನ ಬಗೆಯ ಗಿಫ್ಟ್ ಪ್ಯಾಕ್, ಕೀ ಚೈನ್, ಗ್ಲಾಸ್ ವಾಸ್‌ಗಳನ್ನು ತಯಾರಿಸುವ ಕಲೆ ಇವರಿಗೆ ಕರಗತವಾಗಿದೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ನೇಹಾ ದಾಖಲೆ
ಬಹಳ ಇಷ್ಟಪಟ್ಟು ಪನೀರ್ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips
ನಾನ್ವೆಜ್ ಇಷ್ಟಪಡದವರು ಪ್ರೋಟೀನ್ಗಾಗಿ ಪನೀರ್ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…
ಅಂಗಾಲಿನಲ್ಲಿ ಪದೇ ಪದೆ ನೋವು ಕಾಣಿಸಿಕೊಳ್ಳುತ್ತಿದೆಯೇ; ಅಪಾಯ ತಪ್ಪಿದ್ದಲ್ಲ ಎಚ್ಚರದಿಂದಿರಿ | Health Tips
ಅನೇಕ ಜನರು ಪಾದದ ಕೆಳಭಾಗದಲ್ಲಿ ಅಂದರೆ ಅಂಗಾಲಿನಲ್ಲಿ ನೋವನ್ನು ಅನುಭವಿಸುತ್ತಿರುತ್ತಾರೆ. ಈ ನೋವು ಸಾಮಾನ್ಯ ನೋವಿನಂತೆ…
Spirituality: ಇರುವೆಗಳಿಗೆ ಆಹಾರ ನೀಡಿದರೆ ಶನಿದೇವನ ಪ್ರಭಾವ ಇರುವುದಿಲ್ಲವೇ?
Spirituality: ನಮ್ಮಲ್ಲಿರುವ ವಸ್ತು ಅಥವಾ ಯಾವುದೇ ಪದಾರ್ಥವನ್ನು ಇಲ್ಲದವರಿಗೆ ದಾನ ಮಾಡಿದರೆ ದೇವರ ಅನುಗ್ರಹ ಸದಾ…