More

    ಜಿಲ್ಲೆಯಲ್ಲಿ ನೆಲಕಚ್ಚಿದ ಭತ್ತ, ತೋಟಗಾರಿಕೆ ಬೆಳೆಗಳು

    ದಾವಣಗೆರೆ : ಜಿಲ್ಲೆಯಲ್ಲಿ ಭಾನುವಾರ ರಾತ್ರಿ 13.6 ಮಿ.ಮೀ. ಮಳೆಯಾಗಿದ್ದು, ನೂರಾರು ಎಕರೆ ಭತ್ತ ಮತ್ತು ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. 1 ಎತ್ತು ಮೃತಪಟ್ಟಿದ್ದು 15 ಮನೆಗಳಿಗೆ ಹಾನಿಯಾಗಿದೆ. ಒಟ್ಟಾರೆ 79.40 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ.
     ದಾವಣಗೆರೆ ತಾಲೂಕಿನ ಹೊನ್ನಮರಡಿ, ಗೋಣಿವಾಡ, ಲೋಕಿಕೆರೆ, ಚಿಕ್ಕತೊಗಲೇರಿ ಮತ್ತಿತರ ಗ್ರಾಮಗಳಲ್ಲಿ ಭತ್ತದ ಬೆಳೆ ನೆಲಕಚ್ಚಿದೆ. ಇದುವರೆಗೆ 150 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, 30.60 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ಶಿರಗಾನಹಳ್ಳಿಯಲ್ಲಿ 2 ಮನೆಗಳಿಗೆ ಹಾನಿಯಾಗಿದೆ.
     ಹರಿಹರ ತಾಲೂಕು ವ್ಯಾಪ್ತಿಯಲ್ಲಿ 295 ಎಕರೆ ಭತ್ತದ ಬೆಳೆ ನೆಲಕಚ್ಚಿದ್ದು 2 ಮನೆಗೆ ಹಾನಿಯಾಗಿದೆ. ಒಟ್ಟು 18.93 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ.
     ಜಗಳೂರು  ತಾಲೂಕಿನಲ್ಲಿ 1 ಎತ್ತು ಮೃತಪಟ್ಟಿದೆ. 30 ಎಕರೆ ಅಡಕೆ, 38 ಎಕರೆ ಬಾಳೆ, 20 ಎಕರೆ ಪಪ್ಪಾಯಿ ಬೆಳೆ ಹಾನಿಯಾಗಿದೆ. 11 ಮನೆಗಳಿಗೆ ಹಾನಿಯಾಗಿದೆ.
     ಭಾನುವಾರ ರಾತ್ರಿ ಚನ್ನಗಿರಿ ತಾಲೂಕಿನಲ್ಲಿ 9.5 ಮಿ.ಮೀ. ಮಳೆಯಾಗಿದೆ. ದಾವಣಗೆರೆ 19.5 ಮಿ.ಮೀ, ಹರಿಹರ 17.2 ಮಿ.ಮೀ, ಹೊನ್ನಾಳಿ 9 ಮಿ.ಮೀ, ಜಗಳೂರು 13.7 ಮಿ.ಮೀ, ನ್ಯಾಮತಿ ತಾಲೂಕಿನಲ್ಲಿ 14.1 ಮಿ.ಮೀ. ಮಳೆಯಾಗಿದೆ.
     ಮಳೆ, ಗಾಳಿಯ ಹೊಡೆತಕ್ಕೆ ದಾವಣಗೆರೆ ವಿಭಾಗದಲ್ಲಿ 58 ವಿದ್ಯುತ್ ಕಂಬಗಳು ಧರೆಗುರುಳಿವೆ.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts