ಸಿನಿಮಾ

ಮಳೆ ಆರ್ಭಟ, ನೂರಾರು ಎಕರೆ ಬೆಳೆ ನಾಶ

ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಆರ್ಭಟಿಸಿದ ಮಳೆಯಿಂದ ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿದೆ. ಅಡಕೆ, ಬಾಳೆ, ಅವರೆ ಬೆಳಗಳಿಗೂ ಹಾನಿಯಾಗಿದ್ದು 1 ಹಸು ಮೃತಪಟ್ಟಿದ್ದು 2.51 ಕೋಟಿ ರೂ.ಗಳ ನಷ್ಟ ಸಂಭವಿಸಿದೆ.
 ದಾವಣಗೆರೆ ತಾಲೂಕು ಮುದಹದಡಿ ಗ್ರಾಮದಲ್ಲಿ 31 ಅಡಕೆ ಮರಗಳಿಗೆ ಹಾನಿಯಾಗಿದ್ದು 1 ಲಕ್ಷ ರೂ. ನಷ್ಟ ಸಂಭವಿಸಿದೆ.
 ಹರಿಹರ ತಾಲೂಕು ದೇವರಬೆಳಕೆರೆ ಗ್ರಾಮದಲ್ಲಿ 100 ಎಕರೆ, ಕಡ್ಲೆಗುಂದಿಯಲ್ಲಿ 200 ಎಕರೆ, ಮಿಟ್ಲಕಟ್ಟೆಯಲ್ಲಿ 25 ಎಕರೆ, ಕುಣೆಬೆಳಕೆರೆ ಗ್ರಾಮದಲ್ಲಿ 50 ಎಕರೆ ಸೇರಿ ಒಟ್ಟು 375 ಎಕರೆ ಭತ್ತದ ಬೆಳೆಗೆ ಹಾನಿಯಾಗಿದ್ದು 2.26 ಕೋಟಿ ರೂ. ನಷ್ಟವಾಗಿದೆ. ಇದೇ ತಾಲೂಕಿನಲ್ಲಿ ಹಸುವೊಂದು ಮೃತಪಟ್ಟಿದೆ.
 ಜಗಳೂರು ತಾಲೂಕಿನಲ್ಲಿ 8 ಎಕರೆ ಬಾಳೆ, 4 ಎಕರೆ ಅವರೆ ಬೆಳೆ ಹಾನಿಯಾಗಿದ್ದು 3 ಲಕ್ಷ ರೂ. ನಷ್ಟವಾಗಿದೆ. ಚನ್ನಗಿರಿ ತಾಲೂಕಿನಲ್ಲಿ 200 ಎಕರೆ ಭತ್ತ ಹಾನಿಗೊಳಗಾಗಿದ್ದು 20 ಲಕ್ಷ ರೂ. ನಷ್ಟವಾಗಿದೆ. ಹೊನ್ನಾಳಿ ತಾಲೂಕಿನಲ್ಲಿ 1 ಎಕರೆ ಭತ್ತಕ್ಕೆ ಹಾನಿಯಾಗಿದೆ.
 

Latest Posts

ಲೈಫ್‌ಸ್ಟೈಲ್