ಮಳೆಯಿಂದ 6 ಮನೆಗೆ ಹಾನಿ, 4.50 ಲಕ್ಷ ನಷ್ಟ  

blank

ದಾವಣಗೆರೆ  : ಜಿಲ್ಲೆಯಲ್ಲಿ ಬುಧವಾರ ಸರಾಸರಿ 12.9 ಮಿ.ಮೀ. ಮಳೆಯಾಗಿದೆ. 6 ಮನೆಗಳಿಗೆ ಹಾನಿಯಾಗಿದ್ದು ಒಟ್ಟು 4.50 ಲಕ್ಷ ರೂ. ನಷ್ಟವಾಗಿದೆ.  ಚನ್ನಗಿರಿ ತಾಲೂಕಿನಲ್ಲಿ 3, ಹರಿಹರ 2 ಮತ್ತು ದಾವಣಗೆರೆ ತಾಲೂಕಿನಲ್ಲಿ 1 ಮನೆಗೆ ಹಾನಿಯಾಗಿದೆ.  ಚನ್ನಗಿರಿ ತಾಲೂಕಿನಲ್ಲಿ 7.1 ಮಿ.ಮೀ, ದಾವಣಗೆರೆ-13.7 ಮಿ.ಮೀ, ಹರಿಹರ-15 ಮಿ.ಮೀ, ಹೊನ್ನಾಳಿ-27.7 ಮಿ.ಮೀ, ಜಗಳೂರು-11.5 ಮಿ.ಮೀ, ನ್ಯಾಮತಿ ತಾಲೂಕಿನಲ್ಲಿ 11.9 ಮಿ.ಮೀ. ಮಳೆಯಾಗಿದೆ.  ದಾವಣಗೆರೆ ನಗರದಲ್ಲಿ ಬೆಳಗ್ಗೆಯಿಂದ ನಿರಂತರ ಮಳೆ ಸುರಿಯಿತು. ಕೆಲವು ರಸ್ತೆಗಳಲ್ಲಿ ನೀರು ನಿಂತು ಹಳ್ಳದಂತಾಗಿದ್ದವು. ಮಳೆಯ ನಡುವೆಯೇ ಸಂಚರಿಸಿದ ಬೈಕ್ ಸವಾರರು ಜರ್ಕಿನ್‌ಗಳ ಮೊರೆ ಹೋಗಿದ್ದರು. ಕೆಲವರು ಹಿಂಬದಿ ಸವಾರರು ತಲೆಯ ಮೇಲೆ ಟವಲ್ ಹಾಕಿಕೊಂಡು ಮಳೆಯಿಂದ ರಕ್ಷಣೆ ಪಡೆದರು.  ಪಾದಚಾರಿಗಳು ತೊಯ್ದು ತೊಪ್ಪೆಯಾದರು. ಕೆಲವರು ಕೊಡೆ ಹಿಡಿದು ನಡೆದರು. ಮಹಿಳೆಯರು, ಮಕ್ಕಳು, ವೃದ್ಧರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಆಸ್ಪತ್ರೆಗೆ ಹೊರಟ ರೋಗಿಗಳು ಪರದಾಡಿದರು. ಬೇರೆ ಊರುಗಳಿಗೆ ಹೋಗಬೇಕಾದವರು ಬಸ್ ನಿಲ್ದಾಣ ತಲುಪುವುದು ಹೇಗೆ ಎಂಬ ಚಿಂತೆಯಲ್ಲಿದ್ದರು. ಹಲವರು ಮನೆ, ಕಚೇರಿ ಸೇರಿಕೊಳ್ಳುವ ಧಾವಂತದಲ್ಲಿರುವುದು ಕಂಡುಬಂದಿತು. ಈ ನಡುವೆ ಆಟೋದವರಿಗೆ ಬೇಡಿಕೆ ಬಂದಿತ್ತು.  ಮಳೆ ನಿರಂತರವಾಗಿ ಸುರಿದಿದ್ದರಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ಡಲ್ ಆಗಿತ್ತು. ಗ್ರಾಹಕರು ಅಂಗಡಿ, ಹೋಟೆಲ್‌ಗಳ ಕಡೆ ಸುಳಿಯಲಿಲ್ಲ. ಮತ್ತೆ ಕೆಲವರು ಮಳೆ ನಿಲ್ಲುವ ವರೆಗೆ ರಸ್ತೆ ಪಕ್ಕದ ಅಂಗಡಿ, ಮುಂಗಟ್ಟುಗಳ ಮುಂದೆ ನಿಂತು ರಕ್ಷಣೆ ಪಡೆದರು. ‘ಇದೇನು ಮಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ’ ಎಂದು ಕೆಲವರು ಗೊಣಗಿದರು.

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…