ದಾವಣಗೆರೆ : ದೇಶ ದೇಶಗಳ ಮಧ್ಯೆ ನಡೆಯುವ ಯುದ್ಧಗಳ ಹಿಂದೆ ಲಾಭದ ಕುತಂತ್ರ ಅಡಗಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಹೇಳಿದರು. ಎಡ ಪಕ್ಷಗಳ ರಾಷ್ಟ್ರೀಯ ಸಮಿತಿಗಳ ಕರೆಯ ಮೇರೆಗೆ ದಾವಣಗೆರೆ ಎಡ ಪಕ್ಷಗಳ ನೇತೃತ್ವದಲ್ಲಿ ಮಂಗಳವಾರ ಜಯದೇವ ವೃತ್ತದಲ್ಲಿ ನಡೆದ ರಾಷ್ಟ್ರೀಯ ಸೌಹಾರ್ದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಾಜಾದಲ್ಲಿ ನಡೆದ ಇಸ್ರೇಲ್ ದಾಳಿಯನ್ನು ಖಂಡಿಸಿ ಪ್ಯಾಲೆಸ್ತೈನ್‌ಗೆ ಬೆಂಬಲಿಸಿ ಮಾತನಾಡಿದ ಅವರು, ಬಲಾಢ್ಯ ದೇಶಗಳ ಲಾಭಕೋರತನಕ್ಕೆ ಕುತಂತ್ರಗಳಿಂದ ನಡೆಯುವ ಈ ಯುದ್ಧಗಳು ಮಾನವ ಕುಲವನ್ನು ನಾಶ ಮಾಡುವತ್ತ ಹೊರಟಿವೆ ಎಂದರು. ಸಿಪಿಐಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಆನಂದರಾಜ್ ಮಾತನಾಡಿ, ದೇಶ ದೇಶಗಳ ಮಧ್ಯೆ ನಡೆಯುವ ಈ ಯುದ್ಧಗಳು ಮಾನವೀಯತೆಯನ್ನು ಮರೆತು ರಾಕ್ಷಸರಂತೆ ವರ್ತಿಸುವ ಮನೋಭಾವ ಕೈಬಿಡಬೇಕೆಂದರು. ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಕೈದಾಳೆ ಮಂಜುನಾಥ್ ಮಾತನಾಡಿ, ಯುದ್ಧಗಳು ಅಗತ್ಯ ಇಲ್ಲದಿದ್ದರೂ ಅಮೇರಿಕದಂತಹ ಬಲಾಢ್ಯ ದೇಶಗಳು ಜಗತ್ತನ್ನು ತಮ್ಮ ಕೈಗೊಂಬೆಯಾಗಿರಿಸಿಕೊಂಡು ತಾವು ತಯಾರಿಸುವ ಯುದ್ಧ ಸಾಮಗ್ರಿಗಳನ್ನು ಮಾರಾಟ ಮಾಡುವ ಹುನ್ನಾರವನ್ನು ನಿರಂತರವಾಗಿ ನಡೆಸುತ್ತಿವೆ ಎಂದು ತಿಳಿಸಿದರು. ತಮ್ಮ ತೆವಲಿಗಾಗಿ ನಡೆಸುವ ಈ ಯುದ್ಧಗಳು ಒಟ್ಟಾರೆ ಅಮಾಯಕ ಜನರನ್ನು ಬಲಿ ಪಡೆಯುತ್ತಿವೆ ಎಂದು ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಎಚ್.ಜಿ. ಉಮೇಶ್ ಹೇಳಿದರು. ರಾಷ್ಟ್ರೀಯ ಸೌಹಾರ್ದ ದಿನವನ್ನು ಉದ್ದೇಶಿಸಿ ಎಡ ಪಕ್ಷಗಳ ಮುಖಂಡರಾದ ಕುಕ್ಕವಾಡ ಮಂಜುನಾಥ್, ಅಣಬೇರು ತಿಪ್ಪೇಸ್ವಾಮಿ, ಕೆಜೆಎಸ್‌ನ ಪವಿತ್ರಾ ಮಾತನಾಡಿದರು. ಮುಖಂಡರಾದ ಮಹಮದ್ ರಫೀಕ್, ಜಿ. ಯಲ್ಲಪ್ಪ, ಇ. ಶ್ರೀನಿವಾಸ, ನರೇಗಾ ರಂಗನಾಥ್, ಶ್ರೀನಿವಾಸಮೂರ್ತಿ, ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಸರೋಜಾ, ರುದ್ರಮ್ಮ, ಐರಣಿ ಚಂದ್ರು, ಟಿವಿಎಸ್ ರಾಜು, ಕೆ. ಭಾರತಿ, ಅನಿಲ್ ಕುಮಾರ್, ಸತೀಶ್ ಅರವಿಂದ, ವಿ. ಲಕ್ಷ್ಮಣ, ಎ. ತಿಪ್ಪೇಶ್, ಎಚ್.ಎಸ್. ಚಂದ್ರು, ಇ.ಎಸ್. ಉಮೇಶ್, ಶೇಖರ ನಾಯಕ, ಶಿವಾಜಿ ರಾವ್, ಸುಷ್ಮಾ, ಚಿನ್ನಪ್ಪ, ಯರಗುಂಟೆ ಸುರೇಶ್, ಗಜೇಂದ್ರ ಇತರರು ಭಾಗವಹಿಸಿದ್ದರು.
ಯುದ್ಧಗಳ ಹಿಂದೆ ಲಾಭದ ಕುತಂತ್ರ

ರೊಟ್ಟಿ, ಚಪಾತಿಗೆ ತುಪ್ಪ ಹಚ್ಚಿ ತಿನ್ನುತ್ತೀರಾ? ಹಾಗಾದ್ರೆ ಈ ಸಮಸ್ಯೆ ಬರಬಹುದು ಎಚ್ಚರ! Health Tips
Health Tips: ಚಪಾತಿ ಎಲ್ಲರಿಗೂ ಅಚ್ಚುಮೆಚ್ಚಿನ ಆಹಾರ. ಪಲ್ಯ, ಸಾಗು, ಜಾಮ್, ತುಪ್ಪ ಹೀಗೆ ಎಲ್ಲದರ…
ಯಾರಾದರೂ ನಿಮ್ಮ ಮುಂದೆ ಹಠಾತ್ ಕುಸಿದುಬಿದ್ರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ… Suddenly Collapsed
Suddenly Collapsed : ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರಾದರು ಒಬ್ಬರು ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು…