ದಾವಣಗೆರೆ : ಶ್ರೀ ರಾಘವೇಂದ್ರ ಗುರು ಸಾರ್ವಭೌಮರು ಪ್ರಾತಃ ಸಂಕಲ್ಪ ಗದ್ಯದಲ್ಲಿ ವಾಯುದೇವರ ತರುವಾಯ ಭಗವಂತನ ವಿಶೇಷ ಮಹಿಮೆ ಕೊಂಡಾಡಿದ್ದಾರೆ ಎಂದು ಪಂಡಿತ ಕೃಷ್ಣಾಚಾರ್ಯ ಮಣ್ಣೂರು ಹೇಳಿದರು. ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರಯಕ್ತ ನಗರದ ಪಿ.ಜೆ.ಬಡಾವಣೆಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ‘ಪ್ರಾತಃ ಸಂಕಲ್ಪ ಗದ್ಯ’ದ ಪಾರಾಯಣ ಪೂರ್ವಕ ಪ್ರವಚನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ದೇವರು ಜಗತ್ತಿನ ಸೃಷ್ಟಿ, ಸ್ಥಿತಿ ಹಾಗೂ ಲಯಗಳಿಗೆ ಕಾರಣೀಭೂತನಾದವನು. ಇದಕ್ಕಾಗಿ ಅನಿರುದ್ಧ, ಪ್ರದ್ಯುಮ್ನ ಸಂಕರ್ಷಣ, ವಾಸುದೇವ ಮೊದಲಾದ ರೂಪ ತೆಗೆದುಕೊಂಡಿದ್ದಾನೆ ಎಂದು ತಿಳಿಸಿದರು. ಜಗತ್ತಿನ ಪರಮಾಣುವಿನಲ್ಲಿ ಭಗವಂತ ತಾನಿದ್ದು, ಸಂಸಾರದ ಸಾಗರ ದಾಟಿ ಮುಕ್ತಿ ಹೊಂದುವ ಜೀವಗಳಿಗೆ ಭಗವಂತ ವಾಸುದೇವ ರೂಪದಿಂದ ಮುಕ್ತಿ ಕೊಟ್ಟು ಅಲ್ಲಿಯೂ ಆ ಜೀವರಾಶಿಗಳನ್ನು ತಾನೇ ನಿಯಮಿಸುತ್ತಾನೆ ಎಂದರು. ಭಗವಂತನ ಗುಣಗಳ ವರ್ಣನೆ ಮಾಡುತ್ತಾ ಕೊನೆಯಲ್ಲಿ ಮತ್ತೆ ವಾಯುದೇವರ ಚಿಂತನೆ ಮಾಡಿ ಗ್ರಂಥದ ಸಮಾಪ್ತಿ ಮಾಡಿದ್ದಾರೆ. ನಿರಂತರ ಭಗವಂತನ ಧ್ಯಾನದಲ್ಲಿ ತತ್ಪರರಾದ ವಾಯುದೇವರೇ ನಮ್ಮ ಒಳಗಡೆಯೂ ಇದ್ದು ಕೆಲಸ ಮಾಡುವರು ಎಂಬುದನ್ನು ತಿಳಿಸಿದ್ದಾರೆ. ಜೀವನದಲ್ಲಿ ನಾವು ಸ್ವತಂತ್ರರಲ್ಲ. ನಮ್ಮದೇನು ಇಲ್ಲ ಎನ್ನುವ ಭಾವನೆಯಿಂದ ಪ್ರತಿನಿತ್ಯದ ಕರ್ಮಗಳು ಪ್ರಾರಂಭವಾಗಬೇಕು. ಈ ಅನುಸಂಧಾನ ಪೂರ್ವಕವಾಗಿ ಮಾಡುವ ಕರ್ಮಗಳಿಗೆ ಭಗವಂತ ವಾಯುದೇವರು ಅನುಗ್ರಹಿಸಿ ನಮಗೆ ಬೇಕಾದ ಎಲ್ಲ ಇಷ್ಟಾರ್ಥಗಳನ್ನು ಕೊಟ್ಟು ಸಂಸಾರದಲ್ಲಿಯೂ ಸುಖ ಕಾಣುವ ಹಾಗೆ ಮಾಡುತ್ತಾರೆ ಎಂದು ಮಂತ್ರಾಲಯ ಪ್ರಭುಗಳು ತಿಳಿಸಿ ನಮ್ಮನ್ನು ಉದ್ದರಿಸಿದ್ದಾರೆ. ನಾವು ಇನ್ನೂ ಹೆಚ್ಚು ಜ್ಞಾನ ಪಡೆಯಬೇಕಾಗಿದೆ. ಅದು ನಮಗೆ ಸಿಗಬೇಕಾದರೆ ಈ ರಾಯರ ಪಾದಗಳೇ ನಮಗೆ ಗತಿ ಎಂದು ತಿಳಿದು ನಾವು ಅವರಿಗೆ ತಲೆ ಬಾಗಿ ಭಕ್ತಿಯಿಂದ ನಮಿಸಿ ಜ್ಞಾನ ಸಂಪಾದಿಸೋಣ ಎಂದು ಹೇಳಿದರು.
ಭಗವಂತನ ಮಹಿಮೆ ಕೊಂಡಾಡಿದ ಗುರು ಸಾರ್ವಭೌಮರು
ಪೋಷಕರೇ ಹುಷಾರ್! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ
ಬೆಂಗಳೂರು: ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
30 ದಿನಗಳಲ್ಲೇ ಸ್ಲಿಮ್ ಆ್ಯಂಡ್ ಫಿಟ್ ಆಗಬೇಕಾ? ಪ್ರತಿದಿನ ಇಡ್ಲಿ ತಿನ್ನಿ
ಬೆಂಗಳೂರು: ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…