More

  ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಮುಕ್ತಾಯ

  ದಾವಣಗೆರೆ : ನಗರದ ಡಿ.ಎ.ಆರ್. ಮೈದಾನದಲ್ಲಿ ನ.20 ರಿಂದ ಮೂರು ದಿನಗಳ ಕಾಲ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ದಾವಣಗೆರೆ ನಗರ ಉಪ ವಿಭಾಗವು ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.
   ಬುಧವಾರ ಹಮ್ಮಿಕೊಂಡಿದ್ದ ಕ್ರೀಡಾಕೂಟ ಸಮಾರೋಪ ಕಾರ್ಯಕ್ರಮದಲ್ಲಿ ಪೂರ್ವ ವಲಯ ಐಜಿಪಿ ಕೆ.ತ್ಯಾಗರಾಜನ್ ವಿಜೇತರಿಗೆ ಬಹುಮಾನ ವಿತರಿಸಿದರು.
   ಪುರುಷರ ವಿಭಾಗದಲ್ಲಿ ನಗರ ಉಪ ವಿಭಾಗದ ಅಜೊಳ ಉಮೇಶ ಹಾಗೂ ಮಹಿಳೆಯರ ವಿಭಾಗದಲ್ಲಿ ಬಡಾವಣೆ ಠಾಣೆಯ ಮಾಲತಿಬಾಯಿ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.
   ಪುರುಷರ ಗುಂಪು ಆಟ ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ರಿಲೇ, ಹಗ್ಗಜಗ್ಗಾಟ ಸ್ಪರ್ಧೆಗಳಲ್ಲಿ ದಾವಣಗೆರೆ ನಗರ ಉಪವಿಭಾಗ ಪ್ರಥಮ ಹಾಗೂ ಡಿ.ಎ.ಆರ್. ಘಟಕ ದ್ವಿತೀಯ ಸ್ಥಾನ ಪಡೆದವು. ಕ್ರಿಕೆಟ್‌ನಲ್ಲಿ ನಗರ ಉಪ ವಿಭಾಗ ತಂಡ ಪ್ರಥಮ, ಡಿ.ಎ.ಆರ್ ತಂಡ ದ್ವಿತೀಯ ಸ್ಥಾನ ಗಳಿಸಿದೆ.
   ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕವಿತಾ ಅವರ ತಂಡ ಪ್ರಥಮ, ಮಾಲತಿಬಾಯಿ ಅವರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡರೆ ರಿಲೇ ಸ್ಪರ್ಧೆಯಲ್ಲಿ ಮಾಲತಿಬಾಯಿ ತಂಡ ಪ್ರಥಮ ಹಾಗೂ ಕವಿತಾ ಅವರ ತಂಡ ದ್ವಿತೀಯ ಸ್ಥಾನಕ್ಕೆ  ಭಾಜನವಾಗಿವೆ.
   ಮಹಿಳೆಯರ ಥ್ರೋಬಾಲ್ನಲ್ಲಿ ಮಲ್ಲಮ್ಮ ಚೌಬೆ ಅವರ ತಂಡ ಪ್ರಥಮ, ಪ್ರಭಾವತಿ ಅವರ ತಂಡ ದ್ವಿತೀಯ. ವಾಲಿಬಾಲ್‌ನಲ್ಲಿ ಪ್ರಭಾವತಿ ತಂಡ ಪ್ರಥಮ, ಮಲ್ಲಮ್ಮ ಚೌಬೆ ತಂಡ ದ್ವಿತೀಯ ಬಹುಮಾನ ಪಡೆದಿವೆ. ಪೊಲೀಸ್ ಹಾಗೂ ಪ್ರೆಸ್‌ಕ್ಲಬ್ ತಂಡಗಳ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಪ್ರೆಸ್‌ಕ್ಲಬ್ ತಂಡ ಜಯಗಳಿಸಿದೆ.
   ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಎಎಸ್‌ಪಿ ವಿಜಯ್‌ಕುಮಾರ್ ಎಂ. ಸಂತೋಷ್, ಡಿವೈಎಸ್‌ಪಿಗಳು, ಇನ್‌ಸ್ಪೆಕ್ಟರ್‌ಗಳು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts