ದಾವಣಗೆರೆ : ಕಾವೇರಿ ಮಾತಾ ಪ್ಲಂಬರ್ ಕಾರ್ಮಿಕರ ಸಂಘದ 13ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಪ್ಲಂಬರ್ ದಿನಾಚರಣೆಯನ್ನು ಮಾ. 23ರಂದು ಬೆಳಗ್ಗೆ 10.30ಕ್ಕೆ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಬಿ. ರುದ್ರೇಶ್ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 60 ವರ್ಷ ಪೂರೈಸಿದ ಮೇಸ್ತ್ರಿಗಳನ್ನು ಸಮಾರಂಭದಲ್ಲಿ ಗೌರವಿಸಲಾಗುವುದು ಎಂದು ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಡಿ.ಶೆಟ್ಟರ್, ಉಪಾಧ್ಯಕ್ಷ ಎಸ್.ಎಂ. ಸಿದ್ದಲಿಂಗಪ್ಪ, ಖಜಾಂಚಿ ಕೆ.ಜಿ.ಡಿ. ಬಸವರಾಜ್, ಕಾರ್ಯದರ್ಶಿ ಎಸ್.ಹೊಳೆಬಸಪ್ಪ, ಎಸ್.ಚಂದ್ರಶೇಖರ್, ಅಣ್ಣಪ್ಪ, ಎಚ್.ರಂಗಸ್ವಾಮಿ ಇದ್ದರು.
