ಬೆಳಗಾವಿ ಘಟನೆ ತನಿಖೆಗೆ ವಚನಾನಂದ ಶ್ರೀ ಆಗ್ರಹ

blank

ದಾವಣಗೆರೆ  : ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟದ ವೇಳೆ ನಡೆದ ಕಲ್ಲು ತೂರಾಟ, ಲಾಠಿ ಪ್ರಹಾರದಲ್ಲಿ ಅಮಾಯಕರು ಗಾಯಗೊಂಡಿದ್ದು ಈ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಒತ್ತಾಯಿಸಿದರು.  ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆಯಲ್ಲಿ ಕಲ್ಲು, ಪಾದರಕ್ಷೆಗಳನ್ನು ಕಿಡಿಗೇಡಿಗಳು ಎಸೆದಿದ್ದಾರೆ. ಪೊಲೀಸರೂ ಗಾಯಗೊಂಡಿದ್ದಾರೆ. ಸಂಬಂಧಪಟ್ಟ ವಿಡಿಯೋಗಳಿವೆ. ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.  ಈ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆಯಬೇಕು. ಗಾಯಗೊಂಡಿರುವ ಅಮಾಯಕರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಇಂಥ ಘಟನೆ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.  ನಮ್ಮದು ಸೈಲೆಂಟ್ ಆದ, ಕಾನೂನಾತ್ಮಕ ಹೋರಾಟ. ಸಮುದಾಯಕ್ಕೆ ಮೀಸಲಾತಿ ಕೊಡಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿದಿದೆ ಎಂದು ತಿಳಿಸಿದರು.  ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಇನ್ನೊಂದು ಸಮುದಾಯದ ಮೀಸಲಾತಿ ತೆಗೆದು 2ಡಿ, 2ಸಿ ಮೀಸಲಾತಿ ಘೋಷಣೆ ಮಾಡಿದರು. ನಾವು ಅದನ್ನು ಒಪ್ಪಲಿಲ್ಲ ಎಂದರು.  ಬೇರೆ ರಾಜ್ಯಗಳಲ್ಲಿ ಇರುವಂತೆ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿ ನಮ್ಮ ಬೇಡಿಕೆ ಈಡೇರಿಸಬೇಕು. ಆಗ ಯಾವುದೇ ಸಮಸ್ಯೆ ಇರುವುದಿಲ್ಲ. ಕೇಂದ್ರದ ಒಬಿಸಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.  ಈ ವಿಚಾರವನ್ನು ಸರ್ಕಾರ ಮತ್ತು ವಿಪಕ್ಷಗಳು ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತಿವೆ. ಕೆಲವರು ಲೀಡರ್ ಆಗಲು ಇದರಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ನಮ್ಮ ಹೋರಾಟ ರಾಜಕೀಯ ರಹಿತವಾಗಿ, ಸಾತ್ವಿಕವಾಗಿರಬೇಕು ಎಂದರು. ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಇದ್ದರು.    

Share This Article

Tips For Men : ಪುರುಷರೇ.. ನೀವು ಚೆನ್ನಾಗಿ ಕಾಣಬೇಕೆಂದರೆ ಹೀಗೆ ಮಾಡಿ ಸಾಕು! ಎಲ್ಲರೂ ನಿಮ್ಮತ್ತ ನೋಡುತ್ತಾರೆ..

Tips For Men : ಹುಡುಗಿಯರಿಗೆ ಹೋಲಿಸಿದರೆ ಹುಡುಗರು ಈ ಸೌಂದರ್ಯದ ಕಡೆ ಗಮನ ಕೊಡುವುದು…

Psychology : ಪ್ಯಾಂಟ್ ಜೇಬಿನಲ್ಲಿ ಕೈ ಹಾಕಿಕೊಂಡು ನಡೆಯುವ ಅಭ್ಯಾಸ ನಿಮಗಿದೆಯೇ? ಇದು ನಿಮ್ಮ ವ್ಯಕ್ತಿತ್ವ

Psychology: ಸಾಮಾನ್ಯವಾಗಿ ನೀವು ಅನೇಕ ಜನರು ತಮ್ಮ ಜೇಬಿನಲ್ಲಿ ಕೈ ಹಾಕಿಕೊಂಡು ತಿರುಗಾಡುವುದನ್ನು ನೋಡುತ್ತೀರಿ. ಇದು…

Health Benefits : ಕೆಮ್ಮು, ನೆಗಡಿ ಕೇವಲ ಎರಡೇ ನಿಮಿಷದಲ್ಲಿ ಗುಣವಾಗುತ್ತದೆ..ಹೀಗೆ ಮಾಡಿ ನೋಡಿ

Health Benefits : ಕೆಲವು ಜನರು ಕೆಮ್ಮು ಮತ್ತು ಶೀತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ವಾರಗಟ್ಟಲೆ…