ದಾವಣಗೆರೆ : ರೌಡಿಶೀಟರ್ ಸಂತೋಷ ಕುಮಾರ್ ಅಲಿಯಾಸ್ ಕಣುಮನ ಹತ್ಯೆ ಪ್ರಕರಣಕ್ಕೆ ರಿಯಲ್ ಎಸ್ಟೇಟ್ ವ್ಯವಹಾರವೇ ಕಾರಣವಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣ ಸಂಬಂಧ ಒಟ್ಟು 20 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಂತೋಷ ಚಾವಳಿ, ನವೀನ್ ಅಲಿಯಾಸ್ ಸೈಲೆಂಟ್ ನವೀನ್, ನವೀನ್ ಅಲಿಯಾಸ್ ಬ್ರಾಕಿ ನವೀನ್, ಎ. ಕಾರ್ತಿಕ್, ರಾಜ ಅಲಿಯಾಸ್ ತಾರಕ್, ಬಸವರಾಜ್ ಅಲಿಯಾಸ್ ಪಿಂಗಿ, ಮಾರುತಿ, ಪ್ರಭು, ಜಯಸೂರ್ಯ ಪಿ.ಟಿ, ಭರತ್ ಅಲಿಯಾಸ್ ಸ್ಲಂ, ಸಂದೀಪ್, ಸುರೇಶ್ ಆರ್ ಸೂರ್ಯಪ್ರಕಾಶ್, ಶಿವಪ್ಪ ಎ.ಕೆ ಅಲಿಯಾಸ್ ಕಬ್ಬಡಿ ಶಿವು ಅಲಿಯಾಸ್ ಚಿಕ್ಕನಹಳ್ಳಿ ಶಿವು, ವಿಜಯ ನಾಯ್ಕ್ ಅಲಿಯಾಸ್ ಗಡ್ಡ ವಿಜಿ, ವಿನಯ, ಧನಂಜಯ ಅಲಿಯಾಸ್ ಧನು, ರವಿ ಅಲಿಯಾಸ್ ಹದಡಿ ರವಿ, ಕಡ್ಡಿ ರಘು, ಮಂಜುನಾಥ್ ಎಂ. ಅಲಿಯಾಸ್ ಕಾರದಪುಡಿ ಮಂಜ, ಸಂತೋಷ್ ಕುಮಾರ್ ಅಲಿಯಾಸ್ ಇಟಗಿ ಸಂತು ಬಂಧಿತರು. ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ್ದ ಆಟೋ, ಬೈಕ್, ಲಾಂಗ್, ಚಾಕು, ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕೆಲವು ಆರೋಪಿತರು ಈ ಪ್ರಕಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ತನಿಖೆ ಮುಂದುವದಿದೆ ಎಂದು ಎಸ್ಪಿ ಹೇಳಿದರು.
