ದಾವಣಗೆರೆಯಲ್ಲಿ ಬಿಸಿಯೂಟ ಕಾರ್ಯಕರ್ತರ ಪ್ರತಿಭಟನೆ

ದಾವಣಗೆರೆ: ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ, ಖಾಸಗಿ ಸಂಸ್ಥೆಗೆ ಬಿಸಿಯೂಟ ವಿತರಣೆ ಹೊಣೆ ಹಿಂಪಡೆಯಲು ಆಗ್ರಹಿಸಿ ಅಕ್ಷರದಾಸೋಹ ಬಿಸಿಯೂಟ ಕಾರ್ಯಕರ್ತರು ಗುರುವಾರ ಧರಣಿ ನಡೆಸಿದರು.

ಎಐಟಿಯುಸಿ ನೇತೃತ್ವದ ಅಕ್ಷರದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ನ ಅಡಿಯಲ್ಲಿ ಪ್ರತಿಭಟನೆ ನಡೆಸಿ, ಡಿಸಿ ಡಾ.ಬಗಾದಿ ಗೌತಮ್ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನಿಗೆ ಮನವಿಪತ್ರ ಸಲ್ಲಿಸಲಾಯಿತು.

ರಾಜ್ಯ ಗೌರವಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ, ಪ್ರ.ಕಾರ್ಯದರ್ಶಿ ಆವರಗೆರೆ ಚಂದ್ರು, ರುದ್ರಮ್ಮ ಬೆಳಲಗೆರೆ, ಜ್ಯೋತಿಲಕ್ಷ್ಮಿ, ಜಯಮ್ಮ, ಪುರವಂತರ ಪರಮೇಶ್ವರಪ್ಪ, ಪುಷ್ಪಾ, ಚನ್ನಮ್ಮ, ವಿಶಾಲಮ್ಮ, ಪ್ರಮೀಳಾ, ವನಜಾಕ್ಷಿ, ಜಯಮ್ಮ, ಸರೋಜಾ, ನೇತ್ರಾವತಿ, ನೇತ್ರಾವತಿ ಮತ್ತಿತರರಿದ್ದರು.