ಹರಿಹರ : ನಗರಸಭೆ ವ್ಯಾಪ್ತಿಯ ಗುತ್ತೂರು ಗ್ರಾಮದ ದಲಿತ ಸಮುದಾಯದವರಿಗೆ ಸ್ಮಶಾನ ಭೂಮಿ ಮಂಜೂರಾತಿಗೆ ಆಗ್ರಹಿಸಿ ಗ್ರಾಮದ ದಲಿತ ಸಮುದಾಯದವರು ನಗರಸಭಾಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅವರಿಗೆ ಬುಧವಾರ ಮನವಿ ನೀಡಿದರು. ಗ್ರಾಮದ ಮುಖಂಡ ಅಜ್ಜಪ್ಪ ದೊಡ್ಮನಿ ಮಾತನಾಡಿ, ಈವರೆಗೂ ನದಿ ದಡದಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತಿದೆ. ಮಳೆಗಾಲದಲ್ಲಿ ನದಿಯಲ್ಲಿ ಪ್ರವಾಹ ಬಂದಾಗ ಅಂತ್ಯಸಂಸ್ಕಾರ ಮಾಡುವುದು ಕಷ್ಟಕರವಾಗುತ್ತಿದೆ ಎಂದರು. ನದಿಯಲ್ಲಿ ಗುಂಡಿಗಳು ಬಹಳ ಇರುವುದರಿಂದ ನೀರಲ್ಲಿ ಶವಗಳನ್ನು ಹೊತ್ತೊಯ್ಯುವುದು ಅಪಾಯಕಾರಿ ಆಗಿದೆ. ಈ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅನೇಕ ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ಎಚ್.ಬಿ.ಸಿ. ನಾಗರಾಜ ಮಾತನಾಡಿ, ಗ್ರಾಮದಲ್ಲಿ ಸರ್ಕಾರಿ ಜಮೀನಿದೆ. ಅದರಲ್ಲಿ 2 ಎಕರೆ ಜಮೀನನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಲು ಅವಕಾಶವಿದೆ. ಅಂತ್ಯ ಸಂಸ್ಕಾರ ಮಾಡಲು ಸೂಕ್ತ ವ್ಯವಸ್ಥೆ ಇಲ್ಲದಿದ್ದಾಗ ಕುಟುಂಬಸ್ಥರಿಗೆ ತೀವ್ರ ನೋವಾಗುತ್ತದೆ. ಮಳೆಗಾಲದಲ್ಲಿ ಗ್ರಾಮದಲ್ಲಿ ಯಾರಿಗೂ ಸಾವು ನೀಡದಂತೆ ದೇವರಲ್ಲಿ ಪ್ರಾರ್ಥಿಸುವ ದುಸ್ಥಿತಿ ಇದೆ ಎಂದು ಅಳಲು ತೋಡಿಕೊಂಡರು. ನಗರಸಭಾಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ, ಸ್ಮಶಾನದ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಈ ಕುರಿತು ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ಶೀಘ್ರವೇ ಸ್ಮಶಾನದ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ನಗರಸಭೆ ಉಪಾಧ್ಯಕ್ಷ ಜಂಬಣ್ಣ, ಸದಸ್ಯ ಪಿ.ಎನ್. ವಿರೂಪಾಕ್ಷಿ, ಜೆಡಿಎಸ್ ಮುಖಂಡ ಮಾರುತಿ ಬೇಡರ್, ಗ್ರಾಮಸ್ಥರಾದ ಮರಿಯಪ್ಪ, ಹನುಮಂತಪ್ಪ, ನಿಂಗಪ್ಪ, ರಾಜಶೇಖರ, ಬಸವರಾಜಪ್ಪ, ಎಲ್.ಬಿ. ಚೌಡಪ್ಪ, ಬಿ. ಬಸವರಾಜಪ್ಪ, ಹಾಲಪ್ಪ, ಪ್ರಕಾಶ, ಪರಶುರಾಮ, ಹೊನ್ನಪ್ಪ, ಕೆಂಚಪ್ಪ, ಅಂಜನಪ್ಪ, ಮಾರ್ತಾಂಡಪ್ಪ, ನಾಗಪ್ಪ, ರಾಮಪ್ಪ, ರಘು, ಮೈಲಪ್ಪ ಇತರರಿದ್ದರು.
ಸ್ಮಶಾನ ಭೂಮಿ ಮಂಜೂರಾತಿಗೆ ದಲಿತರ ಆಗ್ರಹ
Spirituality: ಇರುವೆಗಳಿಗೆ ಆಹಾರ ನೀಡಿದರೆ ಶನಿದೇವನ ಪ್ರಭಾವ ಇರುವುದಿಲ್ಲವೇ?
Spirituality: ನಮ್ಮಲ್ಲಿರುವ ವಸ್ತು ಅಥವಾ ಯಾವುದೇ ಪದಾರ್ಥವನ್ನು ಇಲ್ಲದವರಿಗೆ ದಾನ ಮಾಡಿದರೆ ದೇವರ ಅನುಗ್ರಹ ಸದಾ…
2025ರಲ್ಲಿ ಸಾಲದ ಸುಳಿಗೆ ಸಿಲುಕಲಿದ್ದಾರಂತೆ ಈ 3 ರಾಶಿಯವರು!? ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರ | Money
Money : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…
30 ನೇ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆಯೇ? White Hair ಆಗಿದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ
White Hair : ಇಂದಿನ ಕಾಲದಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆ. ಇನ್ನು ಕೆಲವರು…