ಗುರುಗಳು ಭಕ್ತರಿಗೆ ತೋರಲಿ ಪ್ರೀತಿ, ವಾತ್ಸಲ್ಯ

ದಾವಣಗೆರೆ : ಮಠದ ಗುರುಗಳು ಭಕ್ತರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೇ ಹೊರತು ಅಂತರ ಕಾಯ್ದುಕೊಳ್ಳಬಾರದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.  ನಗರದ ಅಪೂರ್ವ ರೆಸಾರ್ಟ್‌ನಲ್ಲಿ ಭಾನುವಾರ ನಡೆದ ತರಳಬಾಳು ಮಠದ ಭಕ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಹೆದರಿಕೆಯ ವಾತಾವರಣ ನಿರ್ಮಾಣವಾಗಬಾರದು ಎಂದು ಅಭಿಪ್ರಾಯಪಟ್ಟರು.  ಪೀಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಿ ಅವರಿಗೆ ಸಂಸ್ಕಾರ ಹೇಳಿಕೊಡಬೇಕಾಗುತ್ತದೆ. ಮಠದ ಪರಂಪರೆಯನ್ನು ಅವರು ಅರ್ಥ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಆದರೂ ಮುಂದಿನ ಪೀಠಾಧಿಪತಿಯನ್ನು ಏಕೆ ನೇಮಕ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.  ನಾವು ‘ರೆಸಾರ್ಟ್ ರಾಜಕಾರಣ’ ಮಾಡುತ್ತಿದ್ದೇವೆ ಎಂದು ಸಮಾಜದ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಈ ಸಭೆಗೆ ತೆರಳದಂತೆ ಕೆಲವರಿಗೆ ಸೂಚನೆಯನ್ನೂ ನೀಡಿದ್ದಾರೆ ಎಂದು ತಿಳಿಸಿದರು.  ನಾನು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವನಿದ್ದಾಗ ಸಾಣೇಹಳ್ಳಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎನ್ನುವ ಕಾರಣಕ್ಕೆ ಸಿರಿಗೆರೆ ಗುರುಗಳು ನನ್ನನ್ನು ದೂರವಿಟ್ಟರು ಎಂದರು.  ನಾಡಿನ ವಿವಿಧ ಸಮುದಾಯದ ಮಠಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಬೆಳವಣಿಗೆ ಹೊಂದುತ್ತಿವೆ. ಈ ವಿಚಾರದಲ್ಲಿ ನಾವು ಹಿಂದುಳಿದಿದ್ದೇವೆ ಎಂದು ಬೇಸರಿಸಿದರು.  ಒಂದು ಕಾಲಕ್ಕೆ ಎಲ್ಲರಿಗೂ ಬುದ್ಧಿ ಹೇಳುವ ಸ್ಥಿತಿಯಲ್ಲಿದ್ದೆವು. ಈಗ ಬೇರೆಯವರು ನಮಗೆ ಹೇಳುವ ಪರಿಸ್ಥಿತಿ ಬಂದಿದೆ. ಈಗಲೂ ಧ್ವನಿ ಎತ್ತದಿದ್ದರೆ ಮಠ ಹಾಳಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.  ಮತ್ತೊಬ್ಬ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಈ ವಿಚಾರದಲ್ಲಿ ಸಮಾಜ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಮಠದ ವಿಚಾರಗಳ ಬಗ್ಗೆ ಚರ್ಚಿಸುವುದನ್ನು ನಿಲ್ಲಿಸಬೇಕು ಎಂದು ಎಂಎಲ್ಸಿ ರುದ್ರೇಗೌಡ ಮನವಿ ಮಾಡಿದರು.  ಮುಖಂಡ ಚಟ್ನಳ್ಳಿ ಮಹೇಶ್ ಮಾತನಾಡಿ, ಗುರುಗಳು ನಾಳೆಯೇ ಎಲ್ಲರನ್ನೂ ಕರೆದು ಮಾತನಾಡಿ ಗೊಂದಲಗಳಿಗೆ ತೆರೆ ಎಳೆಯಲಿ ಎಂದರು. ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ್, ಆನಗೋಡು ನಂಜುಂಡಪ್ಪ, ಓಂಕಾರಪ್ಪ, ಬೆನಕಪ್ಪ ಇತರರು ಮಾತನಾಡಿದರು.  ಹರಿಹರ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಟಿ. ಗುರುಸಿದ್ಧನಗೌಡ ಇದ್ದರು. ಐಗೂರು ಚಂದ್ರಶೇಖರ್ ನಿರ್ಣಯ ಮಂಡಿಸಿದರು.  …    (ಬಾಕ್ಸ್)  ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯ  ತರಳಬಾಳು ಮಠಕ್ಕೆ ಹೊಸ ಪೀಠಾಧಿಪತಿ ನೇಮಕ ಆಗಲೇಬೇಕು. ವಾರದೊಳಗೆ ಏಕ ವ್ಯಕ್ತಿ ಡೀಡ್ ರದ್ದುಪಡಿಸಲೇಬೇಕು. ನನ್ನಂತಹ ಸಾವಿರಾರು ಭಕ್ತರ ಈ ಆಗ್ರಹಕ್ಕೆ ಗುರುಗಳು ಸ್ಪಂದಿಸದಿದ್ದರೆ ಹೋರಾಟದ ಹಾದಿ ತುಳಿಯುವುದು ಅನಿವಾರ್ಯ ಎಂದು ಅಪೂರ್ವ ರೆಸಾರ್ಟ್ ಮಾಲೀಕ ಅಣಬೇರು ರಾಜಣ್ಣ ಹೇಳಿದರು.  ಹದಿನೈದು ದಿನಗಳ ಹಿಂದೆ ಬೆಂಗಳೂರಿನಲ್ಲಿ ಡಾ.ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ್ರು, ಬೆನಕಪ್ಪ ಮತ್ತಿತರರು ಸೇರಿ ಮಠದ ಕುರಿತು ಸಮಾಲೋಚಿಸಿದ ಬಳಿಕ ಭಕ್ತರ ಸಭೆ ಕರೆಯಲು ನಿರ್ಧರಿಸಿದೆವು ಎಂದು ತಿಳಿಸಿದರು.  ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಸ್ವಾಮೀಜಿ ಸ್ಪಂದಿಸಬೇಕು. ಸಮಾಜದ ಗಣ್ಯರನ್ನು ಕರೆದು ಗೊಂದಲ ಸರಿಪಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಸಾಸಲು ಗ್ರಾಮದಿಂದ ಸಿರಿಗೆರೆ ಮಠದ ವರೆಗೆ 50 ಸಾವಿರ ಜನರನ್ನು ಸೇರಿಸಿ ಪಾದಯಾತ್ರೆ ಮಾಡುತ್ತೇವೆ ಎಂದರು.  ಮಠದ ಶಾಲಾ, ಕಾಲೇಜುಗಳ ನಿರ್ವಹಣೆ ಕುಸಿದಿದೆ. ಇಂಜಿನಿಯರಿಂಗ್ ಕಾಲೇಜು ಮುಚ್ಚಿದೆ. ಕೆಲ ಕಲ್ಯಾಣ ಮಂ

Share This Article

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…