ಎಲ್ಲ ಶಾಸ್ತ್ರಗಳಲ್ಲಿ ಮಹಾಭಾರತ ಶ್ರೇಷ್ಠ ಗ್ರಂಥ

blank

ದಾವಣಗೆರೆ : ಎಲ್ಲ ಶಾಸ್ತ್ರಗಳಲ್ಲಿ ಮಹಾಭಾರತ ಶ್ರೇಷ್ಠ ಗ್ರಂಥ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ನುಡಿದರು.  ನಗರದ ಪಿ.ಜೆ. ಬಡಾವಣೆ ರಾಯರ ಮಠದಲ್ಲಿ ಬುಧವಾರ, ವಿಶ್ವ ಮಧ್ವ ಮಹಾ ಪರಿಷತ್ ದಾವಣಗೆರೆ ಕೇಂದ್ರದ ರಜತ ಮಹೋತ್ಸವ ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು.  ಮಹಾಭಾರತವು ಧರ್ಮದ ಮಹತ್ವವನ್ನು ಸಾರಿದೆ. ಕಾರ್ತಿಕ ಮಾಸದಲ್ಲಿ ದೀಪ ಹಚ್ಚಬೇಕು ಎಂಬ ವಿಚಾರದಿಂದ ಹಿಡಿದು, ನೂರಾರು ವರ್ಷ ಘೋರ ತಪಸ್ಸು ಮಾಡಿದ ಸಾಧಕರ ಬಗ್ಗೆಯೂ ಹೇಳಿದೆ ಎಂದು ತಿಳಿಸಿದರು.  ಅನ್ನದಾನ, ಜಲದಾನ, ತೀರ್ಥಯಾತ್ರೆಯ ಮಹತ್ವದ ಬಗ್ಗೆ ಗ್ರಂಥದಲ್ಲಿ ತಿಳಿಸಲಾಗಿದೆ. ದಾನವನ್ನು ಶ್ರದ್ಧೆಯಿಂದ ಮಾಡಬೇಕು. ನಾವೇ ತಿಳಿದು ದಾನ ಮಾಡಿದರೆ ಹೆಚ್ಚಿನ ಪುಣ್ಯ ಪ್ರಾಪ್ತಿಯಾಗುತ್ತದೆ. ದೇಹ ಹಾಗೂ ಮನೋ ಶುದ್ಧಿಯಿಂದ ತೀರ್ಥಯಾತ್ರೆ ಮಾಡಬೇಕು ಎಂದು ಹೇಳಿದರು.  ಮಹಾಭಾರತ ಎಂದರೆ ಕೇವಲ ಕೌರವ-ಪಾಂಡವರ ಜಗಳ ಎಂದು ಸೀಮಿತವಾಗಿ ಅರ್ಥೈಸಬೇಕಿಲ್ಲ. ಹಲವು ಮಹತ್ವದ ವಿಚಾರಗಳು ಅಡಕವಾಗಿವೆ. ಧರ್ಮ, ಸಾಧನೆಯ ಮಾರ್ಗವನ್ನು ತೋರಿಸಿಕೊಟ್ಟಿದೆ. ಸತ್ಯವನ್ನು ನುಡಿದರೆ ಅದೇ ತಪಸ್ಸು ಎಂಬ ಸಂದೇಶವನ್ನು ನೀಡಿದೆ. ಧರ್ಮ ಮಾರ್ಗದಲ್ಲಿ ಹಣ ಗಳಿಸಬೇಕು. ಅದನ್ನು ಧರ್ಮಕ್ಕಾಗಿ ವಿನಿಯೋಗಿಸಬೇಕು. ನಾವು ಮಾಡುವ ಕರ್ಮ ನಿಸ್ಪಹವಾಗಿರಬೇಕು ಎಂದು ಈ ಗ್ರಂಥ ಹೇಳಿಕೊಟ್ಟಿದೆ ಎಂದರು.  ಧರ್ಮ, ಸಂಸ್ಕಾರ, ಆರೋಗ್ಯ ಮುಂತಾದವುಗಳು ಎಲ್ಲರಿಗೂ ದೊರೆಯಬೇಕೆಂಬ ಉದ್ದೇಶದಿಂದ ವಿಶ್ವ ಮಧ್ವ ಮಹಾ ಪರಿಷತ್ ಎಂಬ ಬೃಹತ್ತಾದ ಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಇದು ಕೇಂದ್ರಗಳನ್ನು ಹೊಂದಿದೆ. ಅನೇಕ ಜ್ಞಾನಸತ್ರಗಳು, ವೈದ್ಯಕೀಯ ಶಿಬಿರಗಳು, ಸಾಮಾಜಿಕ ಕಾರ್ಯಗಳು ನಡೆದು ಸಾವಿರಾರು ಜನರಿಗೆ ಲಾಭವಾಗಿದೆ ಎಂದು ತಿಳಿಸಿದರು.  ರಜತ ಮಹೋತ್ಸವದ ಅಂಗವಾಗಿ 2025 ರ ನವೆಂಬರ್ ವರೆಗೆ ಪ್ರತಿ ತಿಂಗಳು ಶ್ರೇಷ್ಠ ವಿದ್ವಾಂಸರಿಂದ ಮಹಾಭಾರತದ ಪ್ರವಚನ, ಹಾಗೂ ಅನೇಕ ಹೋಮ, ಹವನಗಳನ್ನು ಹಮ್ಮಿಕೊಳ್ಳಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀಗಳು ತಿಳಿಸಿದರು.  ದಾವಣಗೆರೆ ಕೇಂದ್ರದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಉತ್ತರಾದಿ ಮಠದ ಭಕ್ತರು ಪಾಲ್ಗೊಂಡಿದ್ದರು.  

Share This Article

ಚಳಿಗಾಲದಲ್ಲಿ ಎಳನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Tender coconut

Tender coconut : ನೈಸರ್ಗಿಕವಾಗಿ ಹೇರಳವಾಗಿ ದೊರೆಯುವ ಎಳನೀರು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಎಲೆಕ್ಟ್ರೋಲೈಟ್ಸ್​, ವಿಟಮಿನ್ಸ್​,…

Clay Pots : ಹೊಸ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವ ಮುನ್ನ ಈ 3 ವಿಷಯಗಳನ್ನು ನೆನಪಿನಲ್ಲಿಡಿ

Clay Pots : ಈಗ ಸ್ಟೀಲ್, ಕಬ್ಬಿಣ, ನಾನ್ ಸ್ಟಿಕ್ ಪಾತ್ರೆಗಳಲ್ಲಿ ಅಡುಗೆ ಮಾಡಲು ಆರಂಭಿಸಿದ್ದಾರೆ.…

Hair care : ಸ್ನಾನ ಮಾಡುವಾಗ ಈ ಟಿಪ್ಸ್ ಪಾಲಿಸಿದರೆ ಕೂದಲು ಉದುರುವುದಿಲ್ಲ..!

Hair care : ಕೂದಲು ಉದುರುವ ಸಮಸ್ಯೆಯಿಂದ ಬಹಳಷ್ಟು ಜನರು ಬಳಲುತ್ತಿದ್ದಾರೆ. ಇಂದಿನ ಆಧುನಿಕ ಜೀವನಶೈಲಿ…