ಕೆರೆಗಳನ್ನು ಉಳಿಸಲು ಕಾಮೇಗೌಡ ಮನವಿ

ದಾವಣಗೆರೆ: ಕೆರೆಗಳನ್ನು ಉಳಿಸುವ ಅಭಿಯಾನಕ್ಕೆ ಚಾಲನೆ ನೀಡುವಂತೆ ಮಂಡ್ಯ ಜಿಲ್ಲೆಯ ಚೆಕ್‌ಡ್ಯಾಂಗಳ ರೂವಾರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲ್ಮನೆ ಕಾಮೇಗೌಡ ಶುಕ್ರವಾರ ಚಿತ್ರದುರ್ಗದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರಿಗೆ ಮನವಿ ಪತ್ರ ಸಲ್ಲಿಸಿದರು.

ಲಿಂ. ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಗಳ 62 ನೇ ಸ್ಮರಣೋತ್ಸವ ನಿಮಿತ್ತ ನಡೆದ ವಿದ್ಯಾರ್ಥಿ ಸಂವಾದದ ನಡುವೆ ಮನವಿ ಸಲ್ಲಿಸಿದರು. ಪ್ರಾಣಿ, ಪಕ್ಷಿ ಹಾಗೂ ಜನರಿಗೆ ವಿವಿಧೆಡೆ ನೀರಿನ ಹಾಹಾಕಾರವಿದೆ. ನಾನೊಬ್ಬನೇ ಚೆಕ್‌ಡ್ಯಾಂ ನಿರ್ಮಿಸಿದರೆ ಸಾಲದು. ಎಲ್ಲರೂ ಕೈಜೋಡಿಸಬೇಕು. ಬಸವಕೇಂದ್ರ, ವಿರಕ್ತಮಠಗಳ ಮೂಲಕ ಕೆರೆಗಳನ್ನು ಉಳಿಸಲು ಮುಂದಾಗಬೇಕು ಎಂದು ಭಿನ್ನವಿಸಿಕೊಂಡರು.

ಹೆಚ್ಚಿನ ವಿವರಗಳಿಗೆ ವಿಜಯವಾಣಿ ಓದಿ