ದಾವಣಗೆರೆ: ಇಸ್ಕಾನ್ ಸಂಸ್ಥೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸೋಮವಾರ, ಇಲ್ಲಿನ ವಿನೋಬ ನಗರದ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಇಸ್ಕಾನ್ ಸಂಸ್ಥೆಯ ದಾವಣಗೆರೆ ಶಾಖೆಯ ಮುಖ್ಯಸ್ಥ ಅವಧೂತ ಚಂದ್ರದಾಸ್ ಮಹಾರಾಜ್ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಂಜೆ 5ರಿಂದ ರಾತ್ರಿ 12 ಗಂಟೆವರೆಗೆ ಮಹಾ ಮಂಗಳಾರತಿ, ಸಂಕೀರ್ತನೆ, ಭಜನೆ, ಶ್ರೀ ರಾಧಾಕೃಷ್ಣ ಅಭಿಷೇಕ, ನೃತ್ಯ, ಪ್ರವಚನ ಹಾಗೂ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಂದ ಬೆಣ್ಣೆ, ಮೊಸರು ತುಂಬಿದ ಮಡಕೆ ಒಡೆಯುವ ಕಾರ್ಯಕ್ರಮ ನಡೆಯಲಿದೆ ಎಂದು ಎಂದು ಹೇಳಿದರು. ಆ. 27ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಶ್ರೀಲ ಪ್ರಭುಪಾದರ ವ್ಯಾಸ ಪೂಜಾ ಮಹೋತ್ಸವ ನಡೆಯಲಿದ್ದು, ಈ ಸಂದರ್ಭ ಕೀರ್ತನೆ, ಭಜನೆ, ನುಡಿನಮನ, ಪ್ರವಚನ, ಪುಷ್ಪಾಂಜಲಿ, ಆರತಿ ಕಾರ್ಯಕ್ರಮವಿದೆ ಎಂದು ವಿವರಿಸಿದರು. ಪಿ. ಸತ್ಯನಾರಾಯಣ ರೆಡ್ಡಿ, ಗೌರ ಹರಿದಾಸ್, ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿದ್ದರು.
ಇಸ್ಕಾನ್ ಸಂಸ್ಥೆಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ

ಕ್ರೆಡಿಟ್ ಕಾರ್ಡ್ ಬಳಸುತ್ತೀರಾ? ಹಾಗಿದ್ರೆ ಈ ವಿಷಯಗಳು ನಿಮಗೆ ಗೊತ್ತಿರಲಿ, ಇಲ್ಲದಿದ್ರೆ… | Credit Cards
Credit Cards: ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕರು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಾರೆ. ಪಡೆಯುವ ಉದ್ದೇಶ…
ಐಸ್ಕ್ಯೂಬ್ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ ನಿಮ್ಮ ಸೌಂದರ್ಯ ಹೆಚ್ಚುತ್ತದೆ! ತಜ್ಞರು ಏನು ಹೇಳುತ್ತಾರೆ? Ice cube Remedy
Ice cube Remedy : ಮುಖ ಸುಂದರವಾಗಿ ಕಾಣಲು ಅನೇಕ ಜನರು ವಿವಿಧ ಸಲಹೆಗಳನ್ನು ಅನುಸರಿಸುತ್ತಾರೆ.…
ಈ ನಕ್ಷತ್ರದಲ್ಲಿ ಹುಟ್ಟಿದ ಗಂಡಸರು ತಮ್ಮ ಪತ್ನಿಯರನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ! Birth of Stars
Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…