ದಾವಣಗೆರೇಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಅರವಟ್ಟಿಗೆ ವಿತರಣೆ

ದಾವಣಗೆರೆ: ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಏ. 1ರಿಂದ 30ರ ವರೆಗೆ ನಗರದ ನಾಲ್ಕು ಸ್ಥಳಗಳಲ್ಲಿ ಮಜ್ಜಿಗೆ, ನೀರಿನ ಉಚಿತ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಏಪ್ರಿಲ್ 1ರಂದು ಬೆಳಗ್ಗೆ 11ಕ್ಕೆ ನಗರದ ಜಯದೇವ ವೃತ್ತದಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ. ವಿರಕ್ತಮಠದ ಬಸಪ್ರಭು ಸ್ವಾಮೀಜಿ ಚಾಲನೆ ನೀಡುವರು ಎಂದು ಟ್ರಸ್ಟ್‌ನ ನಿರ್ದೇಶಕ ಎಂ. ಶಿವಣ್ಣ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರದ ಜಯದೇವ ವೃತ್ತ, ಚಿಗಟೇರಿ ಜಿಲ್ಲಾಸ್ಪತ್ರೆ, ರಾಂ ಅಂಡ್ ಕೋ ಸರ್ಕಲ್, ಹಳೇ ಹೆರಿಗೆ ಆಸ್ಪತ್ರೆ ಬಳಿ ಮಜ್ಜಿಗೆ, ನೀರು ವಿತರಿಸಲಾಯಿತು. ಒಂದು ಸ್ಥಳದಲ್ಲಿ 300ರಂತೆ ನಾಲ್ಕು ಕಡೆ 1200 ಜನರಿಗೆ ಅರವಟ್ಟಿಗೆ ವಿತರಿಸಲಾಗುವುದು ಎಂದು ಹೇಳಿದರು.

ಒಂದು ದಿನ ಮಜ್ಜಿಗೆ ವಿತರಿಸಲು 5ಸಾವಿರ ರೂ., ನೀರಿಗೆ 1250 ರೂ. ವೆಚ್ಚ ತಗಲುತ್ತದೆ. ಆಸಕ್ತ ದಾನಿಗಳು ದೇಣಿಗೆ ನೀಡಿದರೆ ಅವರ ಹೆಸರು ಹಾಕಿ ಹಂಚಲಾಗುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 93531 35050ಕ್ಕೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೀಣಾ ಕುಮಾರ್, ಶಶಿಕಲಾ, ಲಿಂಗರಾಜ್ ಇತರರಿದ್ದರು.