ರಮೇಶ ಜಹಗೀರದಾರ್ ದಾವಣಗೆರೆ : ದಾವಣಗೆರೆಯಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ನಡೆಯುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ 4ನೇ ರಾಜ್ಯ ಅಧಿವೇಶನದ ಅಧ್ಯಕ್ಷರಾಗಿರುವ ಬಾಗಲಕೋಟೆಯ ಸಾಹಿತಿ ಎಸ್.ಜಿ. ಕೋಟಿ ಅವರು ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಅಧಿವೇಶನದ ಆಶಯಗಳು, ರಾಷ್ಟ್ರೀಯತೆ, ಭಾವೈಕ್ಯತೆ, ದೇಶಪ್ರೇಮದಂಥ ವಿಷಯಗಳ ಕುರಿತು ಮನಬಿಚ್ಚಿ ಮಾತನಾಡಿದರು. ಪ್ರಸಕ್ತ ಸನ್ನಿವೇಶದಲ್ಲಿ ‘ಸ್ವತ್ವ’ದ ಅವಶ್ಯಕತೆ ಎಷ್ಟಿದೆ ಎಂಬುದನ್ನು ವಿವರಿಸಿದರು. ವಿಶೇಷವಾಗಿ ಯುವಜನರು ದೇಶದ ಇತಿಹಾಸ, ಸಂಸ್ಕೃತಿ, ಪರಂಪರೆಯ ಬಗ್ಗೆ ಅಭಿಮಾನ ತಾಳಬೇಕು. ಅವರಲ್ಲಿ ದೇಶಭಕ್ತಿ ಜಾಗೃತವಾಗಬೇಕು ಎಂದು ಕಿವಿಮಾತು ಹೇಳಿದರು. ಸಾಹಿತ್ಯದ ಆದ್ಯತೆ, ಓದಿನ ಮಹತ್ವದ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು. … * ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ, ಹೇಗನ್ನಿಸುತ್ತಿದೆ? – ನಾನು ಶಿಕ್ಷಣ ಇಲಾಖೆಯಲ್ಲಿ ಆಡಳಿತ ವಿಭಾಗದಲ್ಲಿ ಕೆಲಸ ಮಾಡಿಕೊಂಡು ಸಾಹಿತ್ಯದ ಕೃಷಿ ಮಾಡುತ್ತ ಬಂದಿರುವೆ. ನನಗೆ ಅಧಿವೇಶನದ ಅಧ್ಯಕ್ಷತೆ ನೀಡಿರುವುದು ಕೇಳಿ ಸಂತೋಷವಾಯಿತು, ಇದೊಂದು ದೊಡ್ಡ ಜವಾಬ್ದಾರಿಯಾಗಿದೆ. * ಈ ಅಧಿವೇಶನದ ಆಶಯಗಳೇನು? – ರಾಷ್ಟ್ರೀಯತೆ ಮತ್ತು ಭಾವೈಕ್ಯತೆ ನಮಗೆ ಮುಖ್ಯವಾಗಿದೆ. ಯುವಜನರಿಗೆ ಒಳ್ಳೆಯ ದಾರಿಯನ್ನು ತೋರಿಸಬೇಕಿದೆ. ಸ್ವಾತಂತ್ರೃ ಹೋರಾಟದ ಸಂದರ್ಭದಲ್ಲಿ ತ್ಯಾಗ, ದೇಶಾಭಿಮಾನ ಮೆರೆದವರ ಹಲವು ಉದಾಹರಣೆಗಳಿವೆ. ಆದರೆ ಈಗ ಪರಿಸ್ಥಿತಿ ಚಿಂತಾಜನಕವಾಗಿದೆ. ಇದರ ನಡುವೆಯೂ ಈಗಲೂ ಅನೇಕ ಪ್ರಜ್ಞಾವಂತರಿದ್ದಾರೆ. ಅಂಥವರಿಂದ ಯುವಜನರಿಗೆ ಮಾರ್ಗದರ್ಶನ ಸಿಗಬೇಕಿದೆ. * ಸ್ವತ್ವದ ನೆಲೆಯ ಕುರಿತು ಹೇಳಿ. – ಸ್ವತ್ವ ಎಂದರೆ ನಮ್ಮತನ, ನಮ್ಮ ಅಸ್ಮಿತೆಯಾಗಿದೆ. ಭಾರತಕ್ಕೆ ಪ್ರಾಚೀನ ಇತಿಹಾಸವಿದೆ. ಅನೇಕ ಅರಸರು ಆಳ್ವಿಕೆ ನಡೆಸಿ ಹೋಗಿದ್ದಾರೆ. ರಾಮಾಯಣ, ಮಹಾಭಾರತದಂಥ ಮಹಾಕಾವ್ಯಗಳು ಈ ಮಣ್ಣಿನಲ್ಲಿ ಹುಟ್ಟಿವೆ. ವೇದಗಳ ಸತ್ವ, ಮಂತ್ರಗಳ ಶಕ್ತಿ ಹೀಗೆ ಅನೇಕ ಮಹತ್ವದ ವಿಚಾರಗಳಿವೆ. ಯುವಜನರು ಈ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. * ಪ್ರಸ್ತುತ ಸನ್ನಿವೇಶದಲ್ಲಿ ಸಾಹಿತ್ಯದ ಆದ್ಯತೆ ಏನಾಗಿರಬೇಕು? – ದೇಶದ ಪ್ರಸ್ತುತ ಸನ್ನಿವೇಶದಲ್ಲಿ ಜಾತಿ, ಧರ್ಮದಂಥ ವಿಚಾರಗಳ ಗೊಂದಲವಿದೆ. ಸಂಕುಚಿತ ಮನೋಭಾವ, ಸ್ವಾರ್ಥದಿಂದ ಹೊರ ಬರಬೇಕಿದೆ. ತ್ಯಾಗ ನಮ್ಮ ಆದರ್ಶವಾಗಬೇಕು. ದೇಶದ ಬಗ್ಗೆ ಚಿಂತನೆ ನಡೆಸಬೇಕು, ಮಾನವ ಕಲ್ಯಾಣವೇ ಧ್ಯೇಯವಾಗಬೇಕು. ಈ ವಿಚಾರಗಳೇ ಸಾಹಿತ್ಯದ ಆದ್ಯತೆಯಾಗಬೇಕು. ಪ್ರಧಾನಿ ಮೋದಿ ಅವರು ತ್ಯಾಗ ಮನೋಭಾವದಿಂದ ದೇಶ ಸೇವೆ ಮಾಡುತ್ತಿದ್ದಾರೆ. ಆದರೂ ಅವರ ಬಗ್ಗೆ ಹಲವರು ಟೀಕೆ ಮಾಡುತ್ತಾರೆ, ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. * ಭಯೋತ್ಪಾದನೆ, ಯುದ್ಧದ ಸನ್ನಿವೇಶ, ದೇಶವಿರೋಧಿ ಚಟುವಟಿಕೆಗಳು ವಿಜೃಂಭಿಸುತ್ತಿರುವುದಕ್ಕೆ ಏನು ಹೇಳುತ್ತೀರಿ? – ಪರಸ್ಪರರಲ್ಲಿ ನಂಬಿಕೆ, ವಿಶ್ವಾಸ, ನೆರೆಹೊರೆಯವರಲ್ಲಿ ಹೊಂದಾಣಿಕೆ ಇರಬೇಕು. ಈ ಅಂಶಗಳು ಕಡಿಮೆ ಆಗಿರುವುದರಿಂದಲೇ ಭಯೋತ್ಪಾದನೆ, ನಕ್ಸಲ್‌ವಾದಗಳು ಬೆಳೆದಿವೆ. ಜನಾಂಗಗಳ ನಡುವೆ ದ್ವೇಷ ಸೃಷ್ಟಿಯಾಗಿದೆ. * ಕನ್ನಡ ಭಾಷೆಯ ಬಗ್ಗೆ ತಮಿಳು ಚಿತ್ರನಟ ಕಮಲ್ ಹಾಸನ್ ಇತ್ತೀಚೆಗೆ ನೀಡಿದ ವಿವಾದಾಸ್ಪದ ಹೇಳಿಕೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? – ಕ್ರಿ.ಪೂ. 4ನೇ ಶತಮಾನದಲ್ಲೇ ಗ್ರೀಕ್ ನಾಟಕಗಳಲ್ಲಿ ಕನ್ನಡದ ಪದಗಳ ಬಳಕೆಯಾಗಿದೆ. ಕವಿರಾಜಮಾರ್ಗ ಕೃತಿ ಪ್ರಾಚೀನವಾದುದು. ಆದರೆ ಅದಕ್ಕಿಂತ ಮುಂಚೆಯೇ ಸಾಕಷ್ಟು ಸಾಹಿತ್ಯ ಕೃಷಿ ಆಗಿತ್ತು. ಬಹಳ ಹಿಂದಿನಿಂದಲೂ ಗ್ರೀಕರ ಜತೆಗೆ ಕನ್ನಡಿಗರ ವ್ಯಾಪಾರ ಸಂಬಂಧವಿತ್ತು. ಕಮಲ್ ಹಾಸನ್ ಅವರ ಹೇಳಿಕೆ ಕಿಚ್ಚು ಹಚ್ಚುವ ಪ್ರಯತ್ನವಾಗಿದೆ. ತಮಿಳು ಭಾಷೆಯ ಗೌಡಕಿ ಮಾಡುವ ಅಗತ್ಯವಿಲ್ಲ. * ಯುವಜನರಲ್ಲಿ ಓದುವ ಅಭಿರುಚಿ, ಸಾಹಿತ್ಯ ಪ್ರೀತಿ ಮೂಡಿಸುವ ಅಗತ್ಯವಿದೆಯಲ್ಲವೆ? – ಓದುವುದು ಹೆಚ್ಚಾದಷ್ಟೂ ಸ್ವತಂತ್ರ ಆಲೋಚನೆ ಮಾಡುವ ಶಕ್ತಿ ಬೆಳೆಯುತ್ತದೆ. ಯುವಜನರು ಬರೆಯುವುದಕ್ಕೆ ಮುನ್ನ ಆಳವಾಗಿ ಓದುವುದನ್ನು ರೂಢಿ ಮಾಡಿಕೊಳ್ಳಬೇಕು. ಊಟ, ನಿದ್ದೆಯ ರೀತಿಯಲ್ಲಿ ಓದುವುದನ್ನೂ ದಿನಚರಿಯಾಗಿಸಿಕೊಳ್ಳಬೇಕು.
ದೇಶದ ಸ್ವತ್ವವನ್ನು ಜಗತ್ತಿಗೆ ಪರಿಚಯಿಸಬೇಕು

ಚಿಕ್ಕ ಮಕ್ಕಳು ಹಗಲಲ್ಲಿ ಅಧಿಕ ನಿದ್ರಿಸಲು ಇದೇ ಕಾರಣವಂತೆ! ವೈದ್ಯರು ಹೇಳೊದೇನು? | Children Sleep
Children Sleep: ಸಾಮಾನ್ಯವಾಗಿ ಹುಟ್ಟಿನಿಂದ 6 ತಿಂಗಳವರೆಗೆ, ಮಕ್ಕಳು ಯಾವಾಗ ಮಲಗುತ್ತಾರೆ ಮತ್ತು ಯಾವಾಗ ಎಚ್ಚರಗೊಳ್ಳುತ್ತಾರೆ…
ಇವುಗಳ ಜೊತೆ ಮುಲ್ತಾನಿ ಮೆಟ್ಟಿ ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿ, ರಿಸಲ್ಟ್ ನೀವೇ ನೋಡಿ! Skin Care
Skin Care : ತ್ವಚೆಯ ಆರೈಕೆಯಲ್ಲಿ ನಾವು ನೈಸರ್ಗಿಕವಾಗಿ ಬಳಸುವ ಮುಲ್ತಾನಿ ಮಿಟ್ಟಿ ಕೂಡ ಒಂದು.…