ಮನೆಗಳ್ಳತನದ ಆರೋಪಿ ಸೆರೆ

ದಾವಣಗೆರೆ: ಮನೆಗಳ್ಳತನದ ಅಂತರಜಿಲ್ಲಾ ಆರೋಪಿಯನ್ನು ಜಿಲ್ಲಾ ಅಪರಾಧ ತನಿಖಾ ದಳದ ಪೊಲೀಸರು ಬಂಧಿಸಿದ್ದು, ಒಟ್ಟು 17.20 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬಾಡಾ ಕ್ರಾಸ್ ಬಳಿ ಗಸ್ತು ಪೊಲೀಸರನ್ನು ಕಂಡು ಓಡಲೆತ್ನಿಸಿದ್ದ ಆರೋಪಿ, ಚನ್ನಗಿರಿಯ ಗಾರೆ ಕೆಲಸದ ಅ್ರೆೆಜ್ ಪೊಲೀಸರ ಸೆರೆಯಾಗಿದ್ದಾನೆ ಎಂದು ಎಸ್ಪಿ ಆರ್.ಚೇತನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಗಲು ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ. ಸಂತೆಬೆನ್ನೂರು, ಮಾಯಕೊಂಡ, ನ್ಯಾಮತಿ, ಹೊಸದುರ್ಗ, ಶಿವಮೊಗ್ಗ, ಚಿಕ್ಕಜಾಜೂರು, ಹೊಳಲ್ಕೆರೆ, ಹೊಳೆಹೊನ್ನೂರು ಠಾಣೆ ವ್ಯಾಪ್ತಿಯ 13 ಮನೆಗಳ್ಳತನದಲ್ಲಿ ಆರೋಪಿ ಭಾಗಿಯಾಗಿದ್ದಾನೆ.

ಆರೋಪಿಯಿಂದ 519 ಗ್ರಾಂ. ಚಿನ್ನ, 2800 ಗ್ರಾಂ ಬೆಳ್ಳಿ ಆಭರಣ, 2 ಕಬ್ಬಿಣದ ರಾಡ್, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಡಿಸಿಐಬಿ ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮಣನಾಯ್ಕ, ಗ್ರಾಮಾಂತರ ಸಿಪಿಐ ಎಚ್.ಗುರುಬಸವರಾಜ ಮತ್ತವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದೆ.