ದಾವಣಗೆರೆ : ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯ. ಶಿಕ್ಷಣದಿಂದ ವಿನಯ, ಶ್ರದ್ಧೆ ಮತ್ತು ನಿಷ್ಠೆ ಬೆಳೆಸಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ್ಕರಾದ ಮಂಜಮ್ಮ ಜೋಗತಿ ಹೇಳಿದರು.
ಜಿಎಂಐಟಿ ಕಾಲೇಜಿನಲ್ಲಿ ಮೊದಲ ವರ್ಷದ ಇಂಜಿನಿಯರಿಂಗ್ ಮತ್ತು ಬಿಸಿಎ ವಿದ್ಯಾರ್ಥಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಇಂಡಕ್ಷನ್ ಪ್ರೋಗ್ರಾಮ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಅರಿತ ಯಾವುದೇ ವಿದ್ಯಾರ್ಥಿ ಸಮಯ ವ್ಯರ್ಥ ಮಾಡಲಾರ. ನಿಷ್ಠೆ ಹಾಗೂ ಶ್ರದ್ಧೆಯಿಂದ ಕೆಲಸ ಮಾಡುವ ಹಾಗೂ ಗುರು ಹಿರಿಯರಿಗೆ ಗೌರವ ಕೊಡುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನ ತಲುಪಲು ಸಾಧ್ಯ ಎಂದು ತಿಳಿಸಿದರು.
ಜಿಎಂ ವಿಶ್ವವಿದ್ಯಾಲಯದ ಸಹ ಉಪಕುಲಪತಿ ಡಾ.ಎಚ್.ಡಿ. ಮಹೇಶಪ್ಪ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ. ಸದ್ಬಳಕೆ ಮಾಡಿಕೊಂಡು ಉತ್ತಮ ಅಧ್ಯಯನ ಮಾಡಬೇಕು ಎಂದರು.
ಜಿಎಂ ವಿಶ್ವವಿದ್ಯಾಲಯದ ಡೀನ್ ಫಾರ್ ಫ್ಯಾಕಲ್ಟಿ ಆಫ್ ಇಂಜಿನಿಯರಿಂಗ್ ಡಾ.ಜಿ.ಎಂ. ಪಾಟೀಲ್ ಮಾತನಾಡಿ, ಒಂದು ವಾರಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರದ ಗಣ್ಯರು ಹಾಗೂ ತಜ್ಞರು ಆಗಮಿಸಲಿದ್ದು, ಮೊದಲ ಹೆಜ್ಜೆಯಾಗಿ ವಿದ್ಯಾರ್ಥಿಗಳನ್ನು ಕೈಗಾರಿಕೆಗಳಿಗೆ ತಕ್ಕಂತೆ ತಯಾರು ಮಾಡಲಿದ್ದಾರೆ ಎಂದು ತಿಳಿಸಿದರು.
ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯೆ ಶ್ವೇತಾ ಮರಿಗೌಡರ್, ಜಿಎಂಐಟಿ ಕಾಲೇಜು ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ, ಜಿಎಂ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ.ಬಿ.ಎಸ್. ಸುನಿಲ್ಕುಮಾರ್, ಡೀನ್ ಫಾರ್ ಫ್ಯಾಕಲ್ಟಿ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಡಾ.ಬಸವರಾಜಸ್ವಾಮಿ ಇದ್ದರು. ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಟಿ.ಆರ್. ತೇಜಸ್ವಿ ಕಟ್ಟಿಮನಿ ನಿರೂಪಿಸಿದರು.
ಜಿಎಂಐಟಿಯಲ್ಲಿ ಇಂಡಕ್ಷನ್ ಕಾರ್ಯಕ್ರಮ
Curry Leaf Juice ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಯ ರಸ ಕುಡಿಯಿರಿ..ಬೊಜ್ಜು ಕಡಿಮೆಯಾಗುತ್ತದೆ..
Curry Leaf Juice : ಕರಿಬೇವಿನ ಎಲೆಗಳನ್ನು ಆಯುರ್ವೇದದಲ್ಲಿ ಔಷಧಿ ಎಂದು ಪರಿಗಣಿಸಲಾಗಿದೆ. ವಿಶೇಷವೆಂದರೆ ಇಷ್ಟೆಲ್ಲಾ…
Health Tips : ನೀವು ಮಧ್ಯರಾತ್ರಿ ಎಚ್ಚರಗೊಳ್ಳುತ್ತೀರಾ? ಆರೋಗ್ಯ ಸಮಸ್ಯೆ ಇರೋದು ಪಕ್ಕಾ…
Health Tips : ಮನುಷ್ಯನಿಗೆ ಆಹಾರ ಮತ್ತು ನೀರು ಎಷ್ಟು ಮುಖ್ಯವೋ ನಿದ್ರೆಯೂ ಅಷ್ಟೇ ಮುಖ್ಯ…
‘ಗೋಲ್ಡನ್ ಮಿಲ್ಕ್’ ಮಾಡುವ ಸರಿಯಾದ ವಿಧಾನ ಇಲ್ಲಿದೆ; ಉತ್ತಮ ಆರೋಗ್ಯಕ್ಕಾಗಿ ಈ Recipe
ಒಂದು ಚಮಚ ಅರಿಶಿನವನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಅದು ದೇಹಕ್ಕೆ ವರದಾನವಾಗಿದೆ. ಅರಿಶಿನ ಹಾಲು ಅನೇಕ…