ದಾವಣಗೆರೆ : ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತಮ್ಮ ಆಡಳಿತದಲ್ಲಿ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಬಡವರ ಪಾಲಿನ ತಾಯಿಯಾಗಿದ್ದರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಸ್ಮರಿಸಿದರು. ಜಿಲ್ಲಾ ಕಾಂಗ್ರೆಸ್ ಇನ್‌ಟೆಕ್ ವಿಭಾಗದಿಂದ ನಗರದ ದೇವರಾಜ ಅರಸು ಬಡಾವಣೆಯಲ್ಲಿ ಗುರುವಾರ ಏರ್ಪಡಿಸಿದ್ದ ಇಂದಿರಾಗಾಂಧಿ ಅವರ 40ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದರು. ಇಂದಿರಾಗಾಂಧಿ ಅವರ ಆಡಳಿತ ಶೈಲಿ ಹೇಗಿತ್ತೆಂದರೆ ಯುದ್ಧಭೂಮಿಗೆ ತೆರಳಿ ಸೈನಿಕರನ್ನು ಖುದ್ದಾಗಿ ಹುರಿದುಂಬಿಸಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಗೆಲುವು ತಂದುಕೊಡುವ ಜತೆಗೆ ಬಾಂಗ್ಲಾ ದೇಶದ ಉದಯಕ್ಕೆ ಕಾರಣರಾಗಿದ್ದರು ಎಂದು ತಿಳಿಸಿದರು. ಪ್ರಧಾನಮಂತ್ರಿಯಾಗಿ ಕೃಷಿ ಆಧುನೀಕರಣಕ್ಕೆ ಒತ್ತು ನೀಡಿ ದೇಶ ಆಹಾರ ಸ್ವಾವಲಂಬನೆ ಹೊಂದಲು ಶ್ರಮಿಸಿದ್ದರು. ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಕ ಭೂ ಸುಧಾರಣೆ ಕಾಯ್ದೆ ಜಾರಿ ಮಾಡಿ ಅನಿಷ್ಟ ಜೀತ ಪದ್ಧತಿಗೆ ಮುಕ್ತಿ ನೀಡಿದ್ದರು. ಬಡವರ ಉದ್ಧಾರಕ್ಕಾಗಿ 20 ಅಂಶಗಳ ಕಾರ್ಯಕ್ರಮ ಜಾರಿಗೊಳಿಸಿದ್ದಲ್ಲದೇ ಗರೀಬಿ ಹಟಾವೋ ಕಾರ್ಯಕ್ರಮ ನೀಡಿದ್ದರು ಎಂದು ವಿವರಿಸಿದರು. ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ಭಾರತ ದೇಶದಲ್ಲಿ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿದ ಇಂದಿರಾಗಾಂಧಿ, ಜನಸಾಮಾನ್ಯರು ಬ್ಯಾಂಕ್‌ಗಳಲ್ಲಿ ಆರ್ಥಿಕ ನೆರವು ಪಡೆದುಕೊಳ್ಳಲು ಶಕ್ತಿ ತುಂಬಿದ್ದರು ಎಂದು ಹೇಳಿದರು. ಬಡಜನರ ಬಗ್ಗೆ ಸದಾ ಬದ್ಧತೆಯಿಂದ ಕೆಲಸ ಮಾಡಿದ್ದಲ್ಲದೇ ದೇಶದ ಏಕತೆ, ಸಮಗ್ರತೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟ ಇಂದಿರಾಗಾಂಧಿಯವರು ಭಾರತಿಯರ ಹೃದಯದಲ್ಲಿ ಗೌರವಯುತ ಸ್ಥಾನ ಹೊಂದಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಇನ್‌ಟೆಕ್ ವಿಭಾಗದ ಅಧ್ಯಕ್ಷ ಕೆ.ಎಂ. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಕೊಡಪಾನ ದಾದಾಪೀರ್, ಬಿ.ಎಚ್. ಉದಯಕುಮಾರ್, ಡಿ. ಶಿವಕುಮಾರ್, ಬಿ.ಎಸ್. ಸುರೇಶ್, ನವೀನ್‌ಕುಮಾರ್, ಕರಿಬಸಪ್ಪ, ರಮೇಶ್ ಚಲವಾದಿ, ರಿಯಾಜ್, ತಿಪ್ಪೇಸ್ವಾಮಿ ಇತರರು ಹಾಜರಿದ್ದರು.
ಬಡವರ ಪಾಲಿನ ತಾಯಿ ಇಂದಿರಾ ಗಾಂಧಿ

ಈ ಕಾಯಿಲೆಯಿಂದ ಬಳಲುತ್ತಿರುವವರ ತಪ್ಪಾಗಿಯೂ ಬೀಟ್ರೂಟ್ ಸೇವಿಸಬೇಡಿ; ನಿಮಗಾಗಿ ಹೆಲ್ತಿ ಟಿಪ್ಸ್ | Health Tips
ಬೀಟ್ರೂಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾದ ತರಕಾರಿಯಾಗಿದೆ. ಇದು ಜೀವಸತ್ವಗಳು, ಖನಿಜಾಂಶಗಳು ಮತ್ತು ಉತ್ಕರ್ಷಣ…
ಗರ್ಭನಿರೋಧಕ ಮಾತ್ರೆಗಳಿಂದ ಅಪಾಯ ತಪ್ಪಿದ್ದಲ್ಲ; ಇಲ್ಲಿದೆ ಸಂಶೋಧನೆಯಲ್ಲಿ ಬಹಿರಂಗವಾದ ಅಸಲಿ ಸಂಗತಿ |Health Tips
ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡು ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟುವುದು ಅತ್ಯಂತ ಜನಪ್ರಿಯ ವಿಧಾನವಾಗಿದೆ. ಪ್ರಪಂಚದಾದ್ಯಂತ ಅಂದಾಜು 250…
palmistry : ಅಂಗೈಯಲ್ಲಿರುವ ಈ ಗುರುತುಗಳು ಶಿವನ ಆಶೀರ್ವಾದದ ಸಂಕೇತ! ಈ ಚಿಹ್ನೆಗಳು ನಿಮ್ಮ ಕೈಯಲ್ಲಿದ್ಯಾ? ನೋಡಿ…
ಹಸ್ತಸಾಮುದ್ರಿಕ ಶಾಸ್ತ್ರ: ( palmistry ) ಅಂಗೈಯಲ್ಲಿರುವ ರೇಖೆಗಳ ಜೊತೆಗೆ, ಕೆಲವು ವಿಶೇಷ ಚಿಹ್ನೆಗಳನ್ನು ಸಹ…