More

    ಕಣ್ಮನ ಸೆಳೆಯುವ ವಿಶೇಷ ಮತಗಟ್ಟೆಗಳು


     ವಿಜಯವಾಣಿ ಸುದ್ದಿಜಾಲ ದಾವಣಗೆರೆ
     ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ ವಿಶೇಷ ಮತಗಟ್ಟೆಗಳು ಮತದಾರರ ಕಣ್ಮನ ಸೆಳೆಯುವಂತಿವೆ. ಪರಿಕಲ್ಪನೆ, ವಿನ್ಯಾಸ, ಬಣ್ಣ ಮತ್ತು ಅಲಂಕಾರದಿಂದಾಗಿ ಈ ಬೂತ್‌ಗಳು ಆಕರ್ಷಕವಾಗಿವೆ.
     ಜಿಲ್ಲೆಯಲ್ಲಿ ಒಟ್ಟು 7 ಸಖಿ ಬೂತ್‌ಗಳು, ಅಂಗವಿಕಲರ 7 ಮತಗಟ್ಟೆಗಳು, 2 ವಿಷಯಾಧಾರಿತ (ಥೀಮ್ ಬೇಸ್ಡ್), 1 ಪಾರಂಪರಿಕ ಹಾಗೂ ಯುವ ಅಧಿಕಾರಿಗಳೇ ಇರುವ ಒಂದು ಬೂತ್ ಗಮನ ಸೆಳೆಯುತ್ತಿವೆ.
     ಸಖಿ ಬೂತ್‌ಗಳು ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿವೆ. ಬಲೂನುಗಳು, ಮ್ಯಾಟ್, ಕುರ್ಚಿ ಮತ್ತು ಮೇಜುಗಳ ಮೇಲಿನ ಬಟ್ಟೆ ಎಲ್ಲವೂ ಗುಲಾಬಿ.
     ಸಖಿ ಬೂತ್‌ಗಳ ವಿಶೇಷತೆಯೆಂದರೆ ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯೆಲ್ಲ ಮಹಿಳೆಯರೇ ಇರುತ್ತಾರೆ. ಮಕ್ಕಳು ಆಟವಾಡುವ ಕಾರ್ನರ್, ಸೆಲ್ಫಿ ಪಾಯಿಂಟ್ ಮಾಡಲಾಗಿರುತ್ತದೆ.
     ದಾವಣಗೆರೆಯ ಡಿಆರ್‌ಆರ್ ಶಾಲೆಯ ಮತಗಟ್ಟೆಯಲ್ಲಿ ಯುವ ಅಧಿಕಾರಿಗಳೇ ಕಾರ್ಯ ನಿರ್ವಹಿಸಲಿದ್ದಾರೆ. ಯುವಜನ ಕ್ರೀಡೆಗಳು, ಯೋಗಕ್ಕೆ ಸಂಬಂಧಿಸಿದ ಚಿತ್ರಗಳನ್ನು ಅಲ್ಲಿ ಬಿಡಿಸಲಾಗಿದೆ.
     ಅಂಗವಿಕಲರೇ ಕಾರ್ಯ ನಿರ್ವಹಿಸುವ  ಬೂತ್‌ಗಳೂ ಇವೆ. ಕೊಂಡಜ್ಜಿಯ ಗ್ರಾಮ ಪಂಚಾಯಿತಿ ಕಚೇರಿಯ ಮತಗಟ್ಟೆಯ ವ್ಯಾಪ್ತಿಯಲ್ಲಿ 28 ಮಂದಿ ಅಂಗವಿಕಲ ಮತದಾರರಿದ್ದು ಅವರನ್ನೆಲ್ಲ ಒಟ್ಟಿಗೇ ಕರೆತಂದು ಮತದಾನ ಮಾಡಿಸುವ ಉದ್ದೇಶವನ್ನು ಅಧಿಕಾರಿಗಳು ಹೊಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts