ಭದ್ರಾ ನಾಲೆಗಳ ಹೂಳು ತೆರವುಗೊಳಿಸಲು ಆಗ್ರಹ

ದಾವಣಗೆರೆ  ಭದ್ರಾ ನಾಲೆಗಳಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಜಿಲ್ಲಾ ಸಮಿತಿ ಆಗ್ರಹಿಸಿದೆ.  ಸಂಘದ ಜಿಲ್ಲಾ ಸಮಿತಿಯ ಮುಖಂಡರು ಗುರುವಾರ ಈ ಕುರಿತು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.  ಕುರ್ಕಿ ಗ್ರಾಮದಿಂದ ಮುತ್ತಪ್ಪನ ಕ್ಯಾಂಪ್‌ವರೆಗೆ ನಾಲೆಗಳಲ್ಲಿ ಹೂಳು ತುಂಬಿದೆ. ಇದರಿಂದ ರೈತರಿಗೆ ಬಹಳ ತೊಂದರೆಯಾಗುತ್ತಿದೆ. ಸತತ 2 ವರ್ಷಗಳಿಂದ ಬರಗಾಲವಿದ್ದ ಕಾರಣ ಹೂಳು ಶೇಖರಣೆಯಾಗಿದೆ. ಆದ್ದರಿಂದ ಸರಿಯಾದ ಪ್ರಮಾಣದಲ್ಲಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಕೆಳ ಭಾಗಗಳಿಗೂ ನೀರು ತಲುಪುತ್ತಿಲ್ಲ. ಕುರ್ಕಿಯಿಂದ ಮುತ್ತಪ್ಪನ ಕ್ಯಾಂಪ್ ವರೆಗೆ 4 ಪೈಪ್ ಹಾಳಾಗಿ ನೀರು ಸೋರಿಕೆಯಾಗುತ್ತಿದೆ ಎಂದು ತಿಳಿಸಿದರು.  ಲೋಕಿಕೆರೆ ಮತ್ತು ಗೋಪನಾಳ್ ಭಾಗದಲ್ಲಿ 3 ಟ್ಯೂಬ್ ಗೇಟ್ ಹಾಳಾಗಿವೆ. ಇದರಿಂದಾಗಿ ಕೋಲ್ಕುಂಟೆ ಗ್ರಾಮಕ್ಕೆ ನೀರಿನ ತೊಂದರೆಯಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.  ಚಿಕ್ಕತೊಗಲೇರಿ ಕ್ಯಾಂಪ್‌ನಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕು. ಈ ಸೌಲಭ್ಯ ಇಲ್ಲದ ಕಾರಣ ರೈತರು, ಶಾಲಾ ಮಕ್ಕಳಿಗೆ ತೊಂದರೆಯಾಗಿದೆ. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ದಾವಣಗೆರೆಯಿಂದ ಸಂತೇಬೆನ್ನೂರಿಗೆ ಹೋಗುವ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.  ಸಂಘಟನೆಯ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ, ಮುಖಂಡರಾದ ಭಗತ್ ಸಿಂಹ, ಹನುಮಂತಪ್ಪ, ಹುಚ್ಚಂಗೆಪ್ಪ, ಮಲ್ಲಿಕಾರ್ಜುನ, ತಿಪ್ಪೇಶ್, ಪರಶುರಾಮ, ರಂಗಸ್ವಾಮಿ, ಹಾಲೇಶ, ತಿಪ್ಪೇಸ್ವಾಮಿ, ಸುನೀಲ್ ಕುಮಾರ್, ಬಸವರಾಜಪ್ಪ ಪಾಲ್ಗೊಂಡಿದ್ದರು.  

Share This Article

ಈರುಳ್ಳಿ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡಬೇಡಿ! ಸಿಪ್ಪೆ ವೇಸ್ಟ್​ ಎಂದು ಬಿಸಾಡೋ ಬದಲು ಹೀಗೆ ಮಾಡಿ

ಯಾವುದೇ ಅಡುಗೆ ಮಾಡಿದ್ರು ಈರುಳ್ಳಿ ಬೇಕೆ... ಬೇಕು. ಈರುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಆದರೆ…

ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ಅಪ್ಪಿತಪ್ಪಿಯೂ ಭಾನುವಾರದಂದು ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ! ದೇವರ ಕೋಪಕ್ಕೆ ಗುರಿಯಾಗ್ತೀರ ಹುಷಾರ್​

ಬೆಂಗಳೂರು: ಭಾನುವಾರ ಸಾಮಾನ್ಯವಾಗಿ ರಜಾ ದಿನ. ಇದು ಎಲ್ಲರಿಗೂ ತಿಳಿದಿದೆ. ಆದ್ದರಿಂದಲೇ ಇಂದು ಬಹುತೇಕ ಎಲ್ಲರೂ…