ದೇಶೀಯ ಉತ್ಪನ್ನ ಬಳಕೆಯಿಂದ ಆರೋಗ್ಯ  

blank

ದಾವಣಗೆರೆ  : ಆರೋಗ್ಯವಂತ ವ್ಯಕ್ತಿ ದೇಶದ ಸಂಪತ್ತು. ದೇಶೀಯ ಉತ್ಪನ್ನಗಳನ್ನು ಬಳಸಿ ಸ್ವಾಸ್ಥೃವನ್ನು ಕಾಪಾಡಿಕೊಳ್ಳಬೇಕು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.  ಸ್ವದೇಶಿ ಜಾಗರಣ ಮಂಚ್-ಕರ್ನಾಟಕ ವತಿಯಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ ಸ್ವದೇಶಿ ಮೇಳದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಬುಧವಾರ ಮಾತನಾಡಿದರು.  ಯೋಗ, ಪ್ರಾಣಾಯಾಮದಿಂದ ಆರೋಗ್ಯ ವೃದ್ಧಿಸುತ್ತದೆ. ಪಾಶ್ಚಾತ್ಯ ಆಹಾರ ಪದ್ಧತಿಯತ್ತ ಯುವಜನರು ಆಕರ್ಷಿತರಾಗುತ್ತಿದ್ದಾರೆ. ಅದರ ಬದಲು ನಮ್ಮ ದೇಶದ ಆಹಾರದ ಮಹತ್ವ ಅರಿಯಬೇಕು ಎಂದು ಕಿವಿಮಾತು ಹೇಳಿದರು.  ಸ್ವದೇಶಿ ಉತ್ಪನ್ನಗಳ ಬಳಕೆ ಹೆಚ್ಚಾಗಬೇಕು ಎಂಬುದು ಮಹಾತ್ಮ ಗಾಂಧೀಜಿ ಅವರ ಕನಸಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತದ ಸಂಕಲ್ಪ ಮಾಡಿದ್ದಾರೆ. ದೇಶದಲ್ಲಿ ಎಥೆನಾಲ್ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ. ನಾವೆಲ್ಲ ಸಾಧ್ಯವಾದಷ್ಟು ಸ್ವದೇಶಿ ಉತ್ಪನ್ನಗಳನ್ನು ಬಳಸಬೇಕು ಎಂದು ತಿಳಿಸಿದರು.  ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ವಿದೇಶದ ವಸ್ತುಗಳನ್ನು ಅಧಿಕ ಬೆಲೆಗೆ ಖರೀದಿಸುವ ಮಂದಿ ನಮ್ಮ ದೇಶದ ವಸ್ತುಗಳನ್ನು ಕೊಳ್ಳುವಾಗ ಚೌಕಾಸಿ ಮಾಡುತ್ತಾರೆ. ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಿದೆ ಎಂದು ಅಭಿಪ್ರಾಯಪಟ್ಟರು.  ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಯುವ ಉದ್ಯಮಿ ಚೇತನ್, ಮೇಳದ ಸಂಚಾಲಕಿ ಮಂಜುಳಾ ಇದ್ದರು. ನವ್ಯಾ ವಾಸುದೇವ ರಾಯ್ಕರ್ ಮತ್ತು ಸಿರಿ ನೃತ್ಯ ಪ್ರದರ್ಶನ ನೀಡಿದರು. ಮೇಳವು ಡಿ. 15 ರ ವರೆಗೆ ನಡೆಯಲಿದ್ದು 250 ಮಳಿಗೆಗಳನ್ನು ಸ್ಥಾಪಿಸಲಾಗಿದೆ.  …  (ಬಾಕ್ಸ್)  ಕುಟುಂಬ ವ್ಯವಸ್ಥೆಯಿಂದ ಆರ್ಥಿಕತೆಗೆ ಶಕ್ತಿ  ದೇಶದ ಆರ್ಥಿಕತೆಯ ಪ್ರಗತಿಗೆ ಕುಟುಂಬಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಸ್ವದೇಶಿ ಚಿಂತಕ ಬಿ.ಎಂ. ಕುಮಾರಸ್ವಾಮಿ ಹೇಳಿದರು.  ನಮ್ಮದು ಕುಟುಂಬ ಆಧಾರಿತ ಆರ್ಥಿಕತೆಯಾಗಿದೆ. ಉಳಿತಾಯ ಮನೋಭಾವ ನಮ್ಮ ಡಿಎನ್‌ಎನಲ್ಲಿದೆ. ದೇಶದಲ್ಲಿ ಶೇ. 98ಕ್ಕಿಂತ ಹೆಚ್ಚಿನ ಹೂಡಿಕೆಗಳು ನಮ್ಮ ಉಳಿತಾಯದಿಂದಲೇ ಆಗುತ್ತದೆ ಎಂದು ತಿಳಿಸಿದರು.  ವಿದೇಶಿ ನೇರ ಬಂಡವಾಳ ಹೂಡಿಕೆಗಿಂತ ಇತರ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಕಾರ್ಮಿಕರು ತಮ್ಮ ಕುಟುಂಬದವರಿಗೆ ಕಳಿಸುತ್ತಿರುವ ಹಣದ ಮೊತ್ತವೇ ಹೆಚ್ಚಾಗಿದೆ ಎಂದು ಹೇಳಿದರು.  ವಿದೇಶಗಳಲ್ಲಿ 2.5 ಕೋಟಿ ಜನ ಭಾರತೀಯ ಕಾರ್ಮಿಕರು ದುಡಿಯುತ್ತಿದ್ದಾರೆ. ಅವರು ಒಂದು ವರ್ಷದಲ್ಲಿ 10 ಲಕ್ಷ ಕೋಟಿ ರೂ.ಗಳನ್ನು ತಮ್ಮ ಕುಟುಂಬದವರಿಗೆ ಕಳಿಸುತ್ತಾರೆ. 2018 ರಲ್ಲಿ 73 ಶತಕೋಟಿ ಡಾಲರ್ ಹಣವನ್ನು ಭಾರತಕ್ಕೆ ಕಳಿಸಿದ್ದರು. 2023 ರಲ್ಲಿ ಆ ಮೊತ್ತ 125 ಶತಕೋಟಿ ಆಗಿತ್ತು. ಎಂದು ವಿವರಿಸಿದರು.

Share This Article

Tips For Men : ಪುರುಷರೇ.. ನೀವು ಚೆನ್ನಾಗಿ ಕಾಣಬೇಕೆಂದರೆ ಹೀಗೆ ಮಾಡಿ ಸಾಕು! ಎಲ್ಲರೂ ನಿಮ್ಮತ್ತ ನೋಡುತ್ತಾರೆ..

Tips For Men : ಹುಡುಗಿಯರಿಗೆ ಹೋಲಿಸಿದರೆ ಹುಡುಗರು ಈ ಸೌಂದರ್ಯದ ಕಡೆ ಗಮನ ಕೊಡುವುದು…

Psychology : ಪ್ಯಾಂಟ್ ಜೇಬಿನಲ್ಲಿ ಕೈ ಹಾಕಿಕೊಂಡು ನಡೆಯುವ ಅಭ್ಯಾಸ ನಿಮಗಿದೆಯೇ? ಇದು ನಿಮ್ಮ ವ್ಯಕ್ತಿತ್ವ

Psychology: ಸಾಮಾನ್ಯವಾಗಿ ನೀವು ಅನೇಕ ಜನರು ತಮ್ಮ ಜೇಬಿನಲ್ಲಿ ಕೈ ಹಾಕಿಕೊಂಡು ತಿರುಗಾಡುವುದನ್ನು ನೋಡುತ್ತೀರಿ. ಇದು…

Health Benefits : ಕೆಮ್ಮು, ನೆಗಡಿ ಕೇವಲ ಎರಡೇ ನಿಮಿಷದಲ್ಲಿ ಗುಣವಾಗುತ್ತದೆ..ಹೀಗೆ ಮಾಡಿ ನೋಡಿ

Health Benefits : ಕೆಲವು ಜನರು ಕೆಮ್ಮು ಮತ್ತು ಶೀತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ವಾರಗಟ್ಟಲೆ…