ದಾವಣಗೆರೆ : ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಶುಕ್ರವಾರ ಆರಂಭವಾಗುತ್ತಿದ್ದು ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಿಲ್ಲೆಯಲ್ಲಿ 81 ಪರೀಕ್ಷಾ ಕೇಂದ್ರಗಳಿದ್ದು 21,704 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ. ಕೊಟ್ರೇಶ್ ಮತ್ತಿತರ ಅಧಿಕಾರಿಗಳು ಗುರುವಾರ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಲ್ಲಿ ಬಾಲಕಿಯರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಒಟ್ಟು 21,704 ಮಂದಿಯಲ್ಲಿ 11,117 ಬಾಲಕಿಯರು, 10,587 ಬಾಲಕರು ಇದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಅತಿಹೆಚ್ಚು 5557 ಅಭ್ಯರ್ಥಿಗಳಿದ್ದಾರೆ (2715 ಬಾಲಕರು, 2842 ಬಾಲಕಿಯರು). ದಾವಣಗೆರೆ ಉತ್ತರದಲ್ಲಿ 3566 ಅಭ್ಯರ್ಥಿಗಳಿದ್ದಾರೆ (1808 ಬಾಲಕರು, 1758 ಬಾಲಕಿಯರು) ಇದ್ದಾರೆ. ಚನ್ನಗಿರಿ ತಾಲೂಕಿನಲ್ಲಿ 3816 ವಿದ್ಯಾರ್ಥಿಗಳಿದ್ದಾರೆ (1812 ಬಾಲಕರು, 2004 ಬಾಲಕಿಯರು). ಹರಿಹರ ತಾಲೂಕಿನಲ್ಲಿ 3234 ಅಭ್ಯರ್ಥಿಗಳಿದ್ದಾರೆ (1617 ಬಾಲಕರು, 1617 ಬಾಲಕಿಯರು). ಹೊನ್ನಾಳಿ ತಾಲೂಕಿನಲ್ಲಿ 2960 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ (1341 ಬಾಲಕರು, 1619 ಬಾಲಕಿಯರು). ಜಗಳೂರು ತಾಲೂಕಿನಲ್ಲಿ 2571 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ (1294 ಬಾಲಕರು, 1277 ಬಾಲಕಿಯರು). ರೆಗ್ಯುಲರ್ ವಿದ್ಯಾರ್ಥಿಗಳಲ್ಲದೇ ರಿಪೀಟರ್‌ಗಳು ಹಾಗೂ ಖಾಸಗಿ ಅಭ್ಯರ್ಥಿಗಳೂ ಪರೀಕ್ಷೆಗೆ ಹಾಜರಾಗಲಿದ್ದು ಅವರೂ ಸೇರಿದರೆ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 22,579 ಆಗಿದೆ.
