ಹೊನ್ನಾಳಿ : ಹೊನ್ನಾಳಿ ಪಟ್ಟಣದ ಪುಟ್ಟ ಮಕ್ಕಳಿಬ್ಬರು ರಚಿಸಿ ಕಳಿಸಿದ್ದ ವಿಶೇಷ ಚಿತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯದಿಂದ ಮೆಚ್ಚುಗೆ ಪತ್ರ ಬಂದಿದೆ. ಪಟ್ಟಣದ ಡಾ.ರಾಜಕುಮಾರ್ ಮಾತನಾಡಿ, ತಮ್ಮ ಮೊಮ್ಮಗ ಅಮೋಘ ಹಾಗೂ ಆದ್ಯ ಇಬ್ಬರೂ ಬಿಡಿಸಿ ಕಳುಹಿಸಿದ ಚಿತ್ರಕ್ಕೆ ಪ್ರಧಾನಿ ಕಾರ್ಯಾಲಯ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಕಳುಹಿಸಿದೆ ಎಂದು ತಿಳಿಸಿದರು. ದೇಶ ಯುದ್ಧದ ಸಂದರ್ಭ ಎದುರಿಸುತ್ತಿದೆ. ಸಾಕಷ್ಟು ಸಭೆಗಳನ್ನು ಮಾಡುತ್ತ ಸೈನ್ಯಕ್ಕೆ ಆತ್ಮಸ್ಥೈರ್ಯ ತುಂಬುತ್ತ ಇರುವ ಇಂತಹ ಸಂದರ್ಭದಲ್ಲೂ ಮಕ್ಕಳ ಪ್ರತಿಭೆಯನ್ನು ಮೆಚ್ಚಿ ಪತ್ರ ಕಳುಹಿಸಿರುವುದು ನಿಜಕ್ಕೂ ಅವರ ಕಾರ್ಯಕ್ಷಮತೆಯನ್ನು ತೋರಿಸುತ್ತದೆ ಎಂದರು.
