ಸಿನಿಮಾ

ದಾವಣಗೆರೆ ಜಿಲ್ಲೆ ರಾಜಧಾನಿಯಾಗಲಿ: ಹಿರಿಯ ಸಿವಿಲ್ ನ್ಯಾಯಾಧೀಶ ಪ್ರವೀಣ ನಾಯಕ

ದಾವಣಗೆರೆ: ರಾಜ್ಯದ ಭೂಪಟದಲ್ಲಿ ಭೌಗೋಳಿಕವಾಗಿ ಮಧ್ಯದಲ್ಲಿರುವ ದಾವಣಗೆರೆ ಜಿಲ್ಲೆ, ರಾಜಧಾನಿ ಆಗಬೇಕಿತ್ತು ಎಂದು ವರ್ಗಾವಣೆ ಆದೇಶವಾಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರವೀಣ ನಾಯಕ ಹೇಳಿದರು.

ದಾವಣಗೆರೆ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಗುರುವಾರ, ವರ್ಗಾವಣೆಯಾದ ನ್ಯಾಯಾಧೀಶರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಜಿಲ್ಲೆಗೆ ವರ್ಗವಾಗಿ ಬಂದಾಗ ಕೋವಿಡ್ ಸೋಂಕು ಇದ್ದ ಕಾರಣ ಸುಮಾರು ಒಂದು ವರ್ಷ ಕಾಲ ಯಾವ ವಕೀಲರನ್ನು ಗಮನಿಸಲಾಗಲಿಲ್ಲ. ನಂತರದ ದಿನಗಳಲ್ಲಿ ನಾವು ಮನೆಯ ಸದಸ್ಯರ ರೀತಿಯಲ್ಲಿ ನಡೆದುಕೊಂಡಿದ್ದೇವೆ ಎಂದರು.

ವರ್ಗಾವಣೆಗೊಂಡ ಮತ್ತೋರ್ವ ನ್ಯಾಯಾಧೀಶೆ ಪ್ರೀತಿ ಎಸ್. ಸದರಜೋಶಿ ಮಾತನಾಡಿ, ದಾವಣಗೆರೆ ಜಿಲ್ಲೆಯು ನನಗೆ ಹಲವಾರು ಅನುಭವಗಳನ್ನು ನೀಡಿದೆ. ಆ ಮೂಲಕ ನಾನು ಕೆಲವು ಕೆಲಸಗಳನ್ನು ಸಹ ಕಲಿತಿದ್ದೇನೆ. ಯಾವಾಗಲೂ ನಗುನಗುತ್ತಾ ಕಕ್ಷಿದಾರರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಸಾಗೋಣ. ಕಕ್ಷಿದಾರರ ಸಮಸ್ಯೆಗಳಿಗೆ ದನಿಯಾಗಬೇಕು ಎಂದರು.

ಹಿರಿಯ ವಕೀಲರಾದ ಡಿ.ಪಿ. ಬಸವರಾಜ್, ಲೋಕಿಕೆರೆ ಸಿದ್ದಪ್ಪ, ಎನ್.ಎಂ. ಆಂಜನೇಯ, ಲಕ್ಕಪ್ಪ, ರಜ್ವಿಖಾನ್, ಗುಮ್ಮನೂರು ಮಲ್ಲಿಕಾರ್ಜುನ್.ಎಸ್. ಪರಮೇಶ್ ಇತರರು ಮಾತನಾಡಿದರು.

ವಯೋನಿವೃತ್ತರಾದ ಸರ್ಕಾರಿ ಅಭಿಯೋಜಕ ಕೆ. ಕೆಂಚಪ್ಪ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರವೀಣ್‌ಕುಮಾರ್, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಲ್ಲಿಕಾರ್ಜುನ್, 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಜಿಯಾ ಕೌಸರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ್ ಇದ್ದರು.

Latest Posts

ಲೈಫ್‌ಸ್ಟೈಲ್