ಮಾಸಾಶನ ಏರಿಕೆಗಾಗಿ ದಾವಣಗೆರೆಯಲ್ಲಿ ಪ್ರತಿಭಟನೆ

ದಾವಣಗೆರೆ: ಮಾಸಾಶನ ಹೆಚ್ಚಳ ಸೇರಿದಂತೆ ವಿವಿಧ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ದೇವದಾಸಿಯರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಸಮಿತಿಯಡಿ ಪ್ರತಿಭಟನೆ ನಡೆಸಿ, ಎಡಿಸಿ ಪದ್ಮಾ ಬಸವಂತಪ್ಪ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

14-15 ಜಿಲ್ಲೆಗಳಲ್ಲಿ ಗಣತಿ ನಡೆದಿದ್ದು, ಅನೇಕರ ಹೆಸರು ಕೈಬಿಟ್ಟುಹೋಗಿದೆ. ದೇವದಾಸಿ ಕುಟುಂಬದವರ ಬಗ್ಗೆ ಮರು ಗಣತಿ ನಡೆಸಬೇಕು. ದೇವದಾಸಿಯರು, ಅವರ ಕುಟುಂಬದ ಪರಿತ್ಯಕ್ತ ಮಹಿಳೆಯರಿಗೂ 5 ಸಾವಿರ ರೂ.ಗಳ ಮಾಸಾಶನ ನೀಡಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ರಾಜ್ಯಾಧ್ಯಕ್ಷೆ ಟಿ.ವಿ.ರೇಣುಕಮ್ಮ, ಜಿಲ್ಲಾಧ್ಯಕ್ಷೆ ಹಿರಿಯಮ್ಮ, ಎನ್.ಮೈಲಮ್ಮ, ಸೀತಮ್ಮ, ಚನ್ನಮ್ಮ, ಹೊನ್ನಮ್ಮ, ಎ.ಕೆ.ಕೆಂಚಮ್ಮ, ಮೈಲಮ್ಮ. ಹುಚ್ಚಮ್ಮ, ಅಂಜಿನಮ್ಮ, ಕೆ.ಎಲ್.ಭಟ್, ಶ್ರೀನಿವಾಸ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.