ದಾವಣಗೆರೆ ಡಿಸಿಗೆ ಸಾಲು ಸಾಲು ಅಹವಾಲು ಸಲ್ಲಿಕೆ

ದಾವಣಗೆರೆ: ಸ್ಕಾೃವೆಂಜರ್‌ಗಳಿಗೆ ಪುನರ್ವಸತಿ, ರಸ್ತೆ ನಿರ್ಮಾಣ, ನೀರಿನ ಸೋರಿಕೆ ತಡೆ, ಹಾಸ್ಟೆಲ್ ಸೌಲಭ್ಯ ಮತ್ತಿತರ ಬೇಡಿಕೆಗಳ ಅಹವಾಲುಗಳು ಜಿಲ್ಲಾಧಿಕಾರಿಗೆ ಸಲ್ಲಿಕೆಯಾದವು.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಜನಸ್ಪಂದನ ಸಭೆ ನಡೆಯಿತು.

2016ರಲ್ಲಿ ಹರಿಹರ ತಾಲೂಕಿನಲ್ಲಿ 156 ಸ್ಕಾೃವೆಂಜರ್‌ಗಳು ಸ್ವಯಂ ದೃಢೀಕರಿಸಿಕೊಂಡಿದ್ದು ಮೂರು ವರ್ಷವಾದರೂ ಗುರುತಿನ ಚೀಟಿ, ಪುನರ್ವಸತಿ ಕಲ್ಪಿಸಿಲ್ಲ. ಕೆಲಸವೂ ಇಲ್ಲದೆ ಅನಾನುಕೂಲವಾಗಿದೆ ಎಂದು ತಾಲ್ಲೂಕು ಮ್ಯಾನುವೆಲ್ ಸ್ಕ್ಯಾವೆಂಜರ್ ಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಈ ಸಂಬಂಧ ಸಭೆ ನಡೆಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಡಿಸಿ ಹೇಳಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇವಣ್ಣ, ಪಾಲಿಕೆ ಆಯುಕ್ತ ಮಂಜುನಾಥ್ ಭಂಡಾರಿ, ಡಿಎಚ್‌ಒ ಡಾ.ತ್ರಿಪುಲಾಂಭ, ಮೀನುಗಾರಿಕೆ ಇಲಾಖೆ ಡಿಡಿ ಉಮೇಶ್, ಉದ್ಯೋಗಾಧಿಕಾರಿ ರುದ್ರೇಗೌಡ, ವಿಕಲಚೇತನಾಧಿಕಾರಿ ಶಶಿಧರ್ ಇದ್ದರು.