ದಾವಣಗೆರೆ : ಜಿಲ್ಲೆಯಲ್ಲಿ ದೀಪಾವಳಿಯ ಸಂಭ್ರಮ ಗರಿಗೆದರಿದೆ. ಮಾರುಕಟ್ಟೆಯಲ್ಲಿ ಬೆಳಕಿನ ಹಬ್ಬದ ವಸ್ತುಗಳ ಖರೀದಿ ಜೋರಾಗಿದೆ. ಪೂಜೆ ಮತ್ತು ಅಲಂಕಾರದ ಸಾಮಗ್ರಿಗಳು, ಮಣ್ಣಿನ ಹಣತೆ ಹಾಗೂ ದೀಪಗಳು ಗ್ರಾಹಕರನ್ನು ಸೆಳೆಯುತ್ತಿವೆ. ಹಣ್ಣು, ಹೂವುಗಳಿಗಂತೂ ಸಹಜವಾಗಿಯೇ ಬೇಡಿಕೆ ಬಂದಿದೆ. ಇದೆಲ್ಲದರ ಜತೆಗೆ ಪಟಾಕಿಗಳ ಮಾರಾಟ ಭರ್ಜರಿಯಾಗಿದೆ. ಶಾಮನೂರು ರಸ್ತೆ, ಚಿಗಟೇರಿ ಜಿಲ್ಲಾಸ್ಪತ್ರೆ ರಸ್ತೆಯ ಇಕ್ಕೆಲಗಳಲ್ಲಿ ಹಬ್ಬದ ಪರಿಕರಗಳು ರಾಶಿ ರಾಶಿಯಾಗಿ ಕಂಡುಬಂದವು. ಬಾಳೆ ಕಂದು ಹಾಗೂ ಮಾವಿನ ಎಲೆಗಳ ಕಂಪು ಆವರಿಸಿತ್ತು. ಬಣ್ಣ ಬಣ್ಣದ ಹೂವುಗಳ ಲೋಕವೇ ಅನಾವರಣಗೊಂಡಿತ್ತು. ಚೆಂಡು ಹೂವು ಮತ್ತು ಸೇವಂತಿಯ ಬಿಡಿ ಹೂವುಗಳನ್ನು ಕಟ್ಟುವ ಕೆಲಸದಲ್ಲಿ ಮಹಿಳೆಯರು ನಿರತರಾಗಿದ್ದರು. ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದ್ದುದರಿಂದ ಅವರ ನಡುವೆಯೇ ಸ್ಪರ್ಧೆಯ ವಾತಾವರಣ ಸೃಷ್ಟಿಯಾಗಿತ್ತು. ಸಾರ್ವಜನಿಕರು ಬೆಳಗ್ಗೆಯಿಂದಲೇ ಮಾರುಕಟ್ಟೆಯತ್ತ ಧಾವಿಸಿ ಹಬ್ಬಕ್ಕೆ ಬೇಕಾದ ಪರಿಕರಗಳ ಖರೀದಿಯಲ್ಲಿ ತೊಡಗಿದ್ದರು. ಮಹಿಳೆಯರು, ಮಕ್ಕಳೂ ಇದ್ದರು. ಚೌಕಾಸಿ ಮಾಡುವುದು, ಕಡಿಮೆ ಬೆಲೆಗೆ ಎಲ್ಲಿ ಸಿಗುತ್ತವೆ ಎಂದು ನೋಡುವ ಪ್ರವೃತ್ತಿ ಸಾಮಾನ್ಯವಾಗಿತ್ತು. ಗ್ರಾಹಕರನ್ನು ಕರೆದು ಮಾತನಾಡಿಸಿ ವಸ್ತುಗಳನ್ನು ಕೊಳ್ಳುವಂತೆ ಮನವೊಲಿಸಲಾಗುತ್ತಿತ್ತು. ಕಾಚಿಹುಲ್ಲು, ಕಬ್ಬಿನ ತೊಂಡೆ, ಬಾಳೆ ಕಂದು, ಉತ್ತರಾಣಿ ಕಡ್ಡಿ, ಬೂದುಗುಂಬಳ, ತಾವರಿಕೆ ಹೂವು, ಶಿವಲಿಂಗನಬಳ್ಳಿ, ಜತೆಗೆ ಸಗಣಿಯನ್ನೂ ಮಾರಾಟಕ್ಕೆ ಇಡಲಾಗಿತ್ತು. ವಿವಿಧ ಬಣ್ಣ, ವಿನ್ಯಾಸದ ಆಕಾಶಬುಟ್ಟಿಗಳು ಆಕರ್ಷಿಸಿದವು. ಕಾಚಿಹುಲ್ಲು 5 ರೂ.ಗೆ ಒಂದು ಪೆಂಡಿ, ಬಾಳೆಕಂದು 30 ರೂ.ಗೆ ಜೊತೆ, ಒಂದು ಮಾರು ಚೆಂಡು ಹೂವಿನ ದರ 70 ರೂ. ವರೆಗೂ ಇತ್ತು. … (ಬಾಕ್ಸ್) ದೀಪ ವೈವಿಧ್ಯ ಶಾಮನೂರು ರಸ್ತೆಯಲ್ಲಿ ಮಣ್ಣಿನ ಹಣತೆಗಳು ಮತ್ತು ವೈವಿಧ್ಯಮಯ ದೀಪಗಳನ್ನು ಮಾರಾಟ ಮಾಡುವುದು ಕಂಡುಬಂದಿತು. ಮ್ಯಾಜಿಕ್ ದೀಪ, ಆಮೆ ದೀಪ, ಹಂಸ, ಲಕ್ಷ್ಮೀ, ಗಣಪತಿ ದೀಪ, ಸ್ಟಾೃಂಡ್ ದೀಪ, ಡಬಲ್ ಸ್ಟೆಪ್ ದೀಪ ಹೀಗೆ 20ಕ್ಕೂ ಹೆಚ್ಚು ಪ್ರಕಾರದ ಮಣ್ಣಿನ ದೀಪಗಳನ್ನು ಇಡಲಾಗಿತ್ತು. ಆರೇಳು ಅಳತೆಯ ಹಣತೆಗಳು ಗಮನ ಸೆಳೆದವು. … (ಬಾಕ್ಸ್) ಪಟಾಕಿ ಖರೀದಿ ಜೋರು ನಗರದ ಹೈಸ್ಕೂಲ್ ಮೈದಾನದಲ್ಲಿ ಹಾಕಿರುವ ಮಳಿಗೆಗಳಲ್ಲಿ ಪಟಾಕಿ ಖರೀದಿಸಲು ಜನರು ಮುಗಿಬಿದ್ದರು. ಬೆಳಗ್ಗೆಯಿಂದಲೇ ಗ್ರಾಹಕರು ಬರತೊಡಗಿದರು. ಪಾಲಕರೊಂದಿಗೆ ಬಂದಿದ್ದ ಮಕ್ಕಳು ತಮ್ಮ ಇಷ್ಟದ ಪಟಾಕಿ ಕೊಡಿಸುವಂತೆ ಬೇಡಿಕೆ ಇಟ್ಟರು. ಎಲ್ಲ ವಿಧದ ಪಟಾಕಿಗಳ ಪ್ಯಾಕೇಜ್ ಇರುವ ದೊಡ್ಡ ದೊಡ್ಡ ಗಿಫ್ಟ್ ಬಾಕ್ಸ್‌ಗಳಿಗೆ ಬೇಡಿಕೆ ಕಂಡುಬಂದಿತು. ಹಸಿರು ಪಟಾಕಿಗಳನ್ನು ಮಾರಾಟ ಮಾಡಲಾಯಿತು. ಕೆಲವು ಮಳಿಗೆಗಳಲ್ಲಿ ಬ್ರಾೃಂಡೆಡ್ ಪಟಾಕಿಗಳನ್ನು ಇಡಲಾಗಿತ್ತು. ಸುರಕ್ಷತೆ ದೃಷ್ಟಿಯಿಂದ ಅಗ್ನಿಶಮನ ಉಪಕರಣಗಳನ್ನು ಮಳಿಗೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲೆಯಲ್ಲಿ ಗರಿಗೆದರಿದ ದೀಪಾವಳಿ ಸಂಭ್ರಮ

ರುಚಿಕರ ಟೊಮೆಟೊ ಹಪ್ಪಳ ಮಾಡುವುದೇಗೆ?; ಇಲ್ಲಿದೆ ಸಿಂಪಲ್ ವಿಧಾನ | Recipe
ಭರ್ಜರಿ ಭೋಜನ ಹಪ್ಪಳ ಇಲ್ಲದಿದ್ದರೆ ಸಂಪೂರ್ಣ ಎಂದು ಎನ್ನಿಸುವುದಿಲ್ಲ. ಊಟದ ಎಲೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಈಗ…
ಸಿಹಿ ಮೊಸರು ಅಥವಾ ಉಪ್ಪುಸಹಿತ ಮೊಸರು; ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ | Health Tips
ಭಾರತದ ಪ್ರತಿಯೊಂದು ಮನೆಯಲ್ಲೂ ಮೊಸರನ್ನು ಸೇವಿಸಲಾಗುತ್ತದೆ. ಅದರ ಜೀರ್ಣಕಾರಿ ಪ್ರಯೋಜನಗಳು, ಆರೋಗ್ಯ ವರ್ಧಕ ಗುಣಗಳು ಮತ್ತು…
ಪಿರಿಯಡ್ಸ್ನಲ್ಲಿ ಮಹಿಳೆಯರು ಈ 3 ಆಹಾರವನ್ನು ತಪ್ಪದೆ ಸೇವಿಸಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಆಹಾರ ಪದ್ಧತಿಗೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ನಿವಾರಿಸುವಲ್ಲಿ ಮತ್ತು ಜನರಿಗೆ ಸರಿಯಾದ ಮಾಹಿತಿಯನ್ನು ನೀಡುವುದರಲ್ಲಿ ಅವರು…