ಜಿಲ್ಲೆಯಲ್ಲಿ ಅಭಿವೃದ್ಧಿ ಗೆರೆ ಎಳೆದ ಅಧಿಕಾರಿ

blank

ದಾವಣಗೆರೆ : ಒಬ್ಬ ಜಿಲ್ಲಾಧಿಕಾರಿ ಹೇಗೆ ಆಡಳಿತ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟವರು ಕೆ. ಶಿವರಾಮ್. 2 ಸಾವಿರ ಇಸವಿಯಿಂದ 2002 ರ ವರೆಗೆ ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಅವರು ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದರು.
 ಆಗ ಎಸ್.ಎಸ್. ಮಲ್ಲಿಕಾರ್ಜುನ್ ಮೊದಲ ಬಾರಿಗೆ ಸಚಿವರಾಗಿದ್ದರು. ಎಸ್ಸೆಸ್ಸೆಂ ಮತ್ತು ಶಿವರಾಮ್ ಅವರ ಜೋಡಿಯು ಜನಮಾನಸದಲ್ಲಿ ಉಳಿಯುವಂಥ ಅನೇಕ ಸಾಧನೆಗಳನ್ನು ಮಾಡಿದ್ದು ಇತಿಹಾಸ.
 ಎಸ್ಸೆಸ್ಸೆಂ ಅವರ ಪರಿಕಲ್ಪನೆಯ ಯೋಜನೆಗಳಿಗೆ ಶಿವರಾಮ್ ಜೀವ ತುಂಬುತ್ತಿದ್ದರು. ಸಚಿವರ ಕೆಲಸದ ವೇಗಕ್ಕೆ ತಕ್ಕನಾಗಿ ಕೆಲಸ ಮಾಡುತ್ತಿದ್ದರು. ನಗರದಲ್ಲಿ ಸಹಸ್ರಾರು ಆಶ್ರಯ ಮನೆಗಳು ನಿರ್ಮಾಣವಾಗುವುದಕ್ಕೆ ಸಚಿವರಿಗೆ ಸಾಥ್ ನೀಡಿದರು. ಕುಂದುವಾಡ ಕೆರೆ ನಿರ್ಮಾಣ, ಹೈಸ್ಕೂಲ್ ಮೈದಾನದಲ್ಲಿ ಟೆನಿಸ್ ಕ್ರೀಡಾಂಗಣ ನಿರ್ಮಿಸಿದ್ದು ಸೇರಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆದರು.
 …
 * ಗ್ರಾಮ ವಾಸ್ತವ್ಯ
 ಎಲ್ಲ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ಜಿಲ್ಲೆಗೆ ಆಗಬೇಕಿರುವ ಕೆಲಸಗಳನ್ನು ಅಧೀನ ಅಧಿಕಾರಿಗಳಿಂದ ಮಾಡಿಸುತ್ತಿದ್ದ ಶಿವರಾಮ್, ತಮ್ಮ ಅವಧಿಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜಿಲ್ಲಾಡಳಿತವನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋದರು.
 ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಒಂದೇ ಬಸ್‌ನಲ್ಲಿ ಹೋಗಿ ಒಂದು ಹಳ್ಳಿಯಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಅಲ್ಲಿನ ಸಮಸ್ಯೆಗಳ ಬಗ್ಗೆ ಜನರಿಂದ ಅಹವಾಲು ಆಲಿಸುತ್ತಿದ್ದರು. ಇದರಿಂದ ಅವರು ಜನಾನುರಾಗಿ ಅಧಿಕಾರಿ ಎನಿಸಿದರು. ಅವರ ಅವಧಿಯಲ್ಲಾದ ಕೆಲಸಗಳನ್ನು ಜನರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ.
 ಸರ್ಕಾರದ ಹಂತದಲ್ಲಿ ಪ್ರಯತ್ನಿಸಿ ಯೋಜನೆಗಳನ್ನು ಜಿಲ್ಲೆಗೆ ತರುವುದು ಹೇಗೆ ಎನ್ನುವ ಜಾಣ್ಮೆ ಅವರಿಗಿತ್ತು. ಕೇಂದ್ರದ ಅನೇಕ ಯೋಜನೆಗಳನ್ನು ಅವರು ಹುಡುಕಿ ತಂದರು.
 ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದರೆ, ಮಳೆಯಿಂದ ಮನೆಗಳು ಕುಸಿದರೆ ತಕ್ಷಣ ಸ್ಥಳಕ್ಕೆ ಧಾವಿಸಿ ಸಂತ್ರಸ್ತರಿಗೆ ನೆರವಿನ ಚೆಕ್ ವಿತರಿಸುತ್ತಿದ್ದರು. ಸಂಬಂಧಿಸಿದ ದಾಖಲೆಗಳನ್ನು ನಂತರ ಪಡೆಯುವಂತೆ ಸಿಬ್ಬಂದಿಗೆ ಸೂಚನೆ ನೀಡುತ್ತಿದ್ದರು ಎಂದು ಅವರನ್ನು ಹತ್ತಿರದಿಂದ ನೋಡಿದ ಅಧಿಕಾರಿಗಳು ಹೇಳುತ್ತಾರೆ.
 …
 
 * ಬಾಲಕಾರ್ಮಿಕತೆ ತಡೆಗಟ್ಟಲು ಕ್ರಮ
 ಶಿವರಾಮ್ ಡಿಸಿ ಆಗಿದ್ದ ಸಂದರ್ಭದಲ್ಲಿ ಹಲವು ಕಾರ್ಯಾಚರಣೆಗಳನ್ನು ನಡೆಸಿ ಬಾಲಕಾರ್ಮಿಕರನ್ನು ರಕ್ಷಿಸಿ ಮುಖ್ಯವಾಹಿನಿಗೆ ತಂದರು.
 ನಗರದಲ್ಲಿ ಸಿಹಿ ತಿನಿಸುಗಳನ್ನು ತಯಾರಿಸುವ ಘಟಕದಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಮಕ್ಕಳು, ಚಿನ್ನ, ಬೆಳ್ಳಿ ಆಭರಣ ತಯಾರಿಸುವ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಬಾಲಕರನ್ನು ರಕ್ಷಿಸಿದರು. ಮಂಡಕ್ಕಿಭಟ್ಟಿ, ಹೋಟೆಲ್, ಬಾರ್‌ಗಳ ಮೇಲೆ ದಾಳಿ ನಡೆಸಿ ಅಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕರನ್ನು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿದರು. ಬಾಲ ಕಾರ್ಮಿಕರ ಪುನರ್ವಸತಿಗಾಗಿ ಜಿಲ್ಲೆಯಲ್ಲಿ 5 ಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಂಡರು.
 ಟ್ಯೂಷನ್ ಹಾವಳಿಯನ್ನು ತಡೆಯಲು ಪ್ರಮುಖ ಪಾತ್ರ ವಹಿಸಿದರು.
 …
 
 (((ಕೋಟ್)))
 ಕೆ. ಶಿವರಾಮ್, ನಾಯಕತ್ವದ ಗುಣವುಳ್ಳ ಆಡಳಿತಗಾರರಾಗಿದ್ದರು. ಅವರಿಗೆ ಸಾಮಾಜಿಕ ಕಳಕಳಿ ಇತ್ತು. ಹೊಸ ಜಿಲ್ಲೆಯಾಗಿದ್ದ ದಾವಣಗೆರೆಯಲ್ಲಿ ತಮ್ಮ ಕಾರ್ಯ ವೈಖರಿಯ ಮೂಲಕ ಅವರು ಅನೇಕ ಬದಲಾವಣೆ ತಂದರು. ಕಚೇರಿಯೊಳಗೆ ಕೂಡುವುದಕ್ಕಿಂತ ಜನರ ಬಳಿಗೇ ಹೋಗಿ ಅಹವಾಲು ಆಲಿಸುತ್ತಿದ್ದರು. ಬಾಲ ಕಾರ್ಮಿಕರ ಪುನರ್ವಸತಿ ಶಾಲೆಗಳ ಬಗ್ಗೆ ಅಧ್ಯಯನ ನಡೆಸಲು ನಮ್ಮನ್ನು ಆಂಧ್ರ ಪ್ರದೇಶಕ್ಕೆ ಕಳಿಸಿದ್ದರು. ಬಡವರ ಬಗ್ಗೆ ಅವರಿಗೆ ಕಾಳಜಿ ಇತ್ತು.
  ರವಿನಾರಾಯಣ್, ನಿವೃತ್ತ ಪೊಲೀಸ್ ಅಧಿಕಾರಿ

TAGGED:
Share This Article

Tea….ಒಂದು ತಿಂಗಳು ಟೀ ಕುಡಿಯುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?

Tea: ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಟೀ ಕುಡಿದರೆ ಸಿಗುವ ಸಂತೋಷ ಅಷ್ಟಿಷ್ಟಲ್ಲ. ಹಾಗಿದ್ದರೂ,…

ಈ ಅಭ್ಯಾಸಗಳಿಂದ ನೀವು ಶ್ವಾಸಕೋಶ ಕ್ಯಾನ್ಸರ್​ಗೆ​ ತುತ್ತಾಗಬಹುದು ಎಚ್ಚರ! ತಡೆಗಟ್ಟದ್ದಿದ್ರೆ ಸಾವು ಕಟ್ಟಿಟ್ಟಬುತ್ತಿ | Lung Cancer

Lung Cancer: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ತುತ್ತಾದವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ವಯಸ್ಸಿನ…

ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡುವುದೇಕೆ?; ಇಲ್ಲಿದೆ ಈ ಮಾತಿನ ಹಿಂದಿನ ಅಸಲಿ ಕಾರಣ | Health Tips

ಪೂಜೆ ಮಾಡುವಾಗ ಹೇಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆಯೋ ಅದೇ ರೀತಿಯಲ್ಲಿ ದಿಕ್ಕನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳುವುದು…