ದಾವಣಗೆರೆ : ಯುವಕರು ಡಿಜೆ ಬೇಕೆಂದು ಬಿಗಿ ಪಟ್ಟು ಹಿಡಿದ ಕಾರಣ ಒಂದು ಗಂಟೆ ತಡವಾಗಿ ಆರಂಭವಾದ ಶೋಭಾಯಾತ್ರೆಯು, ಆಕರ್ಷಕ ಕಲಾ ತಂಡಗಳು ಹಾಗೂ ಸ್ತಬ್ಧಚಿತ್ರಗಳೊಂದಿಗೆ ಕಳೆಗಟ್ಟಿತ್ತು. ವಿಶ್ವ ಹಿಂದು ಪರಿಷತ್ ಮತ್ತು ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಶೋಭಾಯಾತ್ರೆಯು ದಸರಾ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಯಿತು. ನಗರದ ಬೇತೂರು ರಸ್ತೆಯ ಶ್ರೀ ವೆಂಕಟೇಶ್ವರ ವೃತ್ತದಲ್ಲಿ ಜಡೇಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ದೇವಿಯ ಮೂರ್ತಿಗೆ ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಲಾಯಿತು. ಹಿಂದು ಸಮಾಜದ ಹಿರಿಯ ಮುಖಂಡ ಕೆ.ಬಿ. ಶಂಕರನಾರಾಯಣ, ಮೇಯರ್ ಕೆ. ಚಮನ್ ಸಾಬ್, ವಿಧಾನ ಪರಿಷತ್ ವಿಪಕ್ಷದ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಪಾಲಿಕೆ ಸದಸ್ಯರಾದ ಎಸ್.ಟಿ. ವೀರೇಶ್, ಕೆ.ಎಂ. ವೀರೇಶ್ ಭಾಗವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಮುಖಂಡರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಬಿ.ಜಿ. ಅಜಯ ಕುಮಾರ್, ಲೋಕಿಕೆರೆ ನಾಗರಾಜ, ಮಾಡಾಳು ಮಲ್ಲಿಕಾರ್ಜುನ್, ವೈ. ಮಲ್ಲೇಶ್, ಮಹಾಬಲೇಶ್ವರ, ಕೆ.ಎಂ. ಸುರೇಶ್, ಚಂದ್ರಶೇಖರ ಸಂಕೋಳ್, ಶಿವನಗೌಡ ಪಾಟೀಲ್ ಇದ್ದರು. * ‘ಬೇಕೇ ಬೇಕು, ಡಿಜೆ ಬೇಕು’ ತಾಂತ್ರಿಕ ಸಮಸ್ಯೆಯಿಂದಾಗಿ ಶೋಭಾಯಾತ್ರೆಗೆ ಡಿಜೆ ಬಂದಿರಲಿಲ್ಲ. ಮೆರವಣಿಗೆಗೆ ಚಾಲನೆ ದೊರೆಯುತ್ತಿದ್ದಂತೆ ಯುವಕರು ‘ಬೇಕೇ ಬೇಕು, ಡಿಜೆ ಬೇಕು’ ಎಂದು ಕೂಗತೊಡಗಿದರು. ‘ಜೈ ಶ್ರೀರಾಮ್’ ಘೋಷಣೆ ಮೊಳಗಿದವು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಧಾವಿಸಿದರು. ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಮುಖಂಡ ರಾಜನಹಳ್ಳಿ ಶಿವಕುಮಾರ್ ಅವರು ಮನವೊಲಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಎಸ್ಪಿ ಉಮಾ ಪ್ರಶಾಂತ್ ಆಗಮಿಸಿ ಯುವಕರ ಬೇಡಿಕೆ ಆಲಿಸಿದರು. ಡಿಜೆ ಬರಲಿದೆ, ಸದ್ಯಕ್ಕೆ ಮೆರವಣಿಗೆ ಮುಂದೆ ಸಾಗಲಿ ಎಂದು ಕೇಳಿಕೊಂಡರು. ಸ್ವಲ್ಪ ಹೊತ್ತು ಚಂಡೆ ವಾದ್ಯದ ಕಲಾವಿದರನ್ನು ಮುಂದೆ ಕರೆದು ಚಂಡೆ ವಾದನ ಮಾಡಿಸಲಾಯಿತು. ಆದರೆ ಡಿಜೆ ಬೇಕೆಂಬ ಬೇಡಿಕೆ ಕಡಿಮೆಯಾಗಲಿಲ್ಲ. ಈ ನಡುವೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರಯಾಸಪಡಬೇಕಾಯಿತು, ಆಗಾಗ ನೂಕುನುಗ್ಗಲು ಉಂಟಾಯಿತು. ಎಷ್ಟೇ ಪ್ರಯತ್ನಿಸಿದರೂ ಮೆರವಣಿಗೆ ಮುಂದೆ ಸಾಗಲಿಲ್ಲ. ಇದೇ ವಿಚಾರಕ್ಕೆ ಒಂದು ಗಂಟೆ ವಿಳಂಬವಾಯಿತು. ಮಧ್ಯಾಹ್ನ 2.30 ಕ್ಕೆ ಡಿಜೆ ಆಗಮನವಾಗುತ್ತಿದ್ದಂತೆ ಜನಸಮೂಹದಲ್ಲಿ ಉತ್ಸಾಹ ಮೂಡಿತು. ಡಿಜೆ ಸದ್ದಿಗೆ ಯುವಕರು ಹೆಜ್ಜೆ ಹಾಕಿದರು. … * ಎಲ್ಲೆಲ್ಲೂ ಖಾಕಿ ಪಡೆ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಹೆಜ್ಜೆ ಹೆಜ್ಜೆಗೆ ಪೊಲೀಸರು ಕಂಡುಬಂದರು. ಮೆರವಣಿಗೆ ಆರಂಭಕ್ಕೂ ಮುನ್ನ ಶ್ವಾನದಳದಿಂದ ತಪಾಸಣೆ ನಡೆಸಲಾಯಿತು. ಎಸ್ಪಿ ಉಮಾ ಪ್ರಶಾಂತ್ ಹಾಗೂ ಇತರ ಅಧಿಕಾರಿಗಳು ಶೋಭಾಯಾತ್ರೆಯುದ್ದಕ್ಕೂ ಹಾಜರಿದ್ದು ನಿಗಾ ವಹಿಸಿದ್ದರು. ದುರ್ಗಾ ಪಡೆಯೂ ಕಾರ್ಯ ನಿರ್ವಹಿಸಿತು. ಡ್ರೋನ್ ಕ್ಯಾಮೆರಾ ಕಣ್ಗಾವಲಿತ್ತು.
ಡಿಜೆಗೆ ಬಿಗಿ ಪಟ್ಟು, ಸಂಭ್ರಮದ ಶೋಭಾಯಾತ್ರೆ
ಗಂಡ, ಹೆಂಡತಿ ಜಗಳದಿಂದ ಮನೆಯಲ್ಲಿ ನೆಮ್ಮದಿ ಇಲ್ಲವೇ? ಈ Vastu Tips ಪಾಲಿಸಿ..!
Vastu Tips: ಪ್ರತಿಯೊಬ್ಬ ವ್ಯಕ್ತಿಯು ತನ್ನ ವೈವಾಹಿಕ ಜೀವನ ಯಾವಾಗಲೂ ಸಂತೋಷವಾಗಿರಬೇಕೆಂದು ಬಯಸುತ್ತಾನೆ. ಆದಾಗ್ಯೂ, ಸ್ವಲ್ಪ…
ದಪ್ಪ ಹೊಟ್ಟೆಯಿಂದ ತೊಂದರೆ ಆಗ್ತಿದೆಯೇ? ಇವುಗಳನ್ನು ಸೇವಿಸಿದ್ರೆ ಸಾಕು ಬೆಣ್ಣೆಯಂತೆ ಕರಗುತ್ತೆ ಕೊಬ್ಬು | Stomach trouble
Stomach trouble : ಅನೇಕರು ಹೊಟ್ಟೆಯ ಸಮಸ್ಯೆಗಳಿಂದ ಪ್ರತಿ ನಿತ್ಯ ಬಳಲುತ್ತಿದ್ದಾರೆ. ನಿಮಗೂ ದಪ್ಪ ಹೊಟ್ಟೆ…
ಆಯಾ ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ದೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಪಟ್ಟಿ… Sleep
Sleep : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗೆ ಸಾಕಷ್ಟು ನಿದ್ರೆ ಬೇಕೇ ಬೇಕು.…