ದಾವಣಗೆರೆ : ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಸಂಭ್ರಮಿಸಬೇಕಿದ್ದ ಜಿಲ್ಲೆಯ ರೈತರೊಬ್ಬರು ಮುಂಗಾರು ಹಂಗಾಮಿನಲ್ಲಿ ಬೆಳೆದ ತೊಗರಿ ಕೈಕೊಟ್ಟಿದ್ದರಿಂದ ಕಣ್ಣೀರಿಟ್ಟಿದ್ದಾರೆ. ತಾಲೂಕಿನ ಈಚಘಟ್ಟ ಗ್ರಾಮದ ಬಿ.ಆರ್. ಪ್ರಭು ಕುಮಾರ್ ನೊಂದ ರೈತ. ಬೇರೆಯವರ ಜಮೀನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದಾರೆ. ಪ್ರತಿ ವರ್ಷ ಮೆಕ್ಕೆಜೋಳ ಬೆಳೆಯುತ್ತಿದ್ದ ಇವರು, ಮುಳ್ಳು ಸಜ್ಜೆಯ ಹಾವಳಿಯಿಂದಾಗಿ ಈ ಬಾರಿ ಬೆಳೆ ಬದಲಾವಣೆ ಮಾಡಿ 18 ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದರು. ಮಾಯಕೊಂಡದಲ್ಲಿರುವ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸಿದ್ದರು. ಇದು ದೀರ್ಘಾವಧಿಯ ತಳಿಯಾಗಿದ್ದು ನವೆಂಬರ್ ವೇಳೆಗೆ ತೊಗರಿ ಬೆಳೆ ಹೂವಾಡಬೇಕಿತ್ತು, ಹಾಗೆ ಆಗಲಿಲ್ಲ. ಅಲ್ಲದೇ ನವೆಂಬರ್-ಡಿಸೆಂಬರ್‌ನಲ್ಲಿ ಮಳೆಯೂ ಜಾಸ್ತಿ ಆಯಿತು. ಪರಿಣಾಮವಾಗಿ ಇಳುವರಿ ಕುಸಿತವಾಗಿದೆ. ಎಕರೆಗೆ ಕನಿಷ್ಠ 6 ಕ್ವಿಂಟಾಲ್‌ನಷ್ಟಾದರೂ ಬರಬೇಕಿತ್ತು, ಆದರೆ 18 ಎಕರೆಯಿಂದ ಒಟ್ಟಾರೆ ಕೇವಲ 6 ರಿಂದ 8 ಕ್ವಿಂಟಾಲ್‌ನಷ್ಟು ಮಾತ್ರ ಫಸಲು ಬಂದಿದೆ. ಎಕರೆಗೆ 22 ರಿಂದ 26 ಸಾವಿರ ರೂ.ಗಳಷ್ಟು ಖರ್ಚು ಮಾಡಿರುವ ಆ ರೈತನಿಗೆ ದಿಕ್ಕು ತೋಚದಂತಾಗಿದೆ. ರೈತ ಸಂಪರ್ಕ ಕೇಂದ್ರದಿಂದ ಪಡೆದಿರುವ ಬೀಜದ ಗುಣಮಟ್ಟವೇ ಕಳಪೆಯಾಗಿದೆ ಎನ್ನುವುದು ರೈತ ಪ್ರಭು ಕುಮಾರ್ ಅವರ ವಾದ. ಇತರ ರೈತರು ಮಾರುಕಟ್ಟೆಯಲ್ಲಿ ಖಾಸಗಿ ವರ್ತಕರಿಂದ ಬೀಜ ಖರೀದಿಸಿ ತಂದಿದ್ದಾರೆ, ಅವರಿಗೆ ಸಮಸ್ಯೆಯಾಗಿಲ್ಲ ಎಂದು ಅವರು ತಿಳಿಸಿದರು. ಆದರೆ ಕೃಷಿ ಇಲಾಖೆಯ ಅಧಿಕಾರಿಗಳು ಹೇಳುವುದೇ ಬೇರೆ. ಬೀಜಗಳು ಕಳಪೆಯಾಗಿಲ್ಲ, ಆ ಭಾಗದಲ್ಲಿ ಮಳೆ ಜಾಸ್ತಿ ಆಗಿದ್ದರಿಂದ ಇಳುವರಿ ಕಡಿಮೆಯಾಗಿದೆ ಎಂಬುದು ಅವರ ವಾದ.
ಕೈಕೊಟ್ಟ ಬೆಳೆ, ಸುಗ್ಗಿ ಹಬ್ಬದಂದು ಕಣ್ಣೀರಿಟ್ಟ ರೈತ

ಕ್ಯಾರೆಟ್ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್ ವಿಧಾನ | Recipe
ಕ್ಯಾರೆಟ್ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…
ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…
ಕಣ್ಣಿನಪೊರೆ ಸಮಸ್ಯೆಗೆ ಪರಿಹಾರ ಏನೆಂದು ಆಲೋಚಿಸುತ್ತಿದ್ದೀರಾ?; ಇಲ್ಲಿದೆ ಸೂಕ್ತ ಮನೆಮದ್ದಿನ ಮಾಹಿತಿ | Health Tips
ಪ್ರಸ್ತುತ ಕಾರ್ಯನಿರತ ಜೀವನ ಮತ್ತು ಕಳಪೆ ಜೀವನಶೈಲಿಯಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಅದರಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ…