ದಾವಣಗೆರೆ : ನಗರದ ಎಸ್.ಎಸ್. ಲೇಔಟ್ ‘ಎ’ ಬ್ಲಾಕ್‌ನ (ಶಾಮನೂರು ರಸ್ತೆ) ಮನೆಯೊಂದಕ್ಕೆ ಶುಕ್ರವಾರ ಮಧ್ಯಾಹ್ನ ನುಗ್ಗಿದ ಆರೋಪಿಯೊಬ್ಬ, ವೃದ್ಧೆಯ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂ. ಬೆಲೆಯ ಚಿನ್ನ, ಬೆಳ್ಳಿ ಆಭರಣಗಳನ್ನು ದೋಚಿದ್ದಾನೆ. ರಂಗಮ್ಮ ಹಲ್ಲೆಗೆ ಒಳಗಾದವರು. ವೃದ್ಧೆ ಒಬ್ಬರೇ ಇದ್ದಾಗ ಮನೆಯೊಳಗೆ ಪ್ರವೇಶಿಸಿದ ಆ ವ್ಯಕ್ತಿ, ವೃದ್ಧೆಯ ಮೇಲೆ ಹಲ್ಲೆ ನಡೆಸಿ ಆಭರಣಗಳನ್ನು ದೋಚಿದ್ದಾನೆ. ಗಾಯಗೊಂಡ ರಂಗಮ್ಮ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
