ದಾವಣಗೆರೆ: ಜಿಲ್ಲೆಯಲ್ಲಿ ಶನಿವಾರ 56 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿನಿಂದ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.
ಇಲ್ಲಿನ ಜಾಲಿನಗರದ 35 ವರ್ಷದ ಮಹಿಳೆ ಜುಲೈ 13ರಂದು, ಇಮಾಮ್ ನಗರದ 45 ವರ್ಷದ ಮಹಿಳೆ ಶುಕ್ರವಾರ ಹಾಗೂ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ 48 ವರ್ಷದ ಮಹಿಳೆ ಗುರುವಾರ ಮೃತಪಟ್ಟಿದ್ದಾರೆ. ಅವರಿಗೆ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಇತ್ತು.
ದಾವಣಗೆರೆ ತಾಲೂಕಿನಲ್ಲಿ 41, ಜಗಳೂರು 5, ಹರಿಹರ ಮತ್ತು ಹೊನ್ನಾಳಿ ತಾಲೂಕುಗಳಲ್ಲಿ ತಲಾ 2, ಚನ್ನಗಿರಿ ತಾಲೂಕಿನಲ್ಲಿ 1 ಹಾಗೂ ಹೊರ ಜಿಲ್ಲೆಯ 5 ಪ್ರಕರಣಗಳು ಪತ್ತೆಯಾಗಿವೆ.
ನಗರದ ಬಟ್ಟೆ ಅಂಗಡಿಯೊಂದರ ಸಿಬ್ಬಂದಿ ಹಾಗೂ ಡಿಸಿಸಿ ಬ್ಯಾಂಕ್ ಉದ್ಯೋಗಿಯಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರಿನಿಂದ ಬಂದ ದೀಕ್ಷಿತ್ ರಸ್ತೆಯ ಒಂದೇ ಕುಟುಂಬದ ನಾಲ್ವರಿಗೆ ಪಾಸಿಟಿವ್ ಬಂದಿದೆ.
ಸೇವಾದಳ ಕ್ವಾರ್ಟರ್ಸ್, ಕೆ.ಆರ್. ರಸ್ತೆ, ಡಿಸಿಎಂ ಟೌನ್‌ಷಿಪ್, ಜಯನಗರ, ಕುಂದುವಾಡ, ಬಸಾಪುರ, ದೇವರಾಜ ಅರಸ್ ಲೇಔಟ್ ಪ್ರದೇಶಗಳಲ್ಲೂ ಸೋಂಕಿತರು ಪತ್ತೆಯಾಗಿದ್ದಾರೆ.
ಆಸ್ಪತ್ರೆಯಿಂದ 16 ಮಂದಿಯನ್ನು ಬಿಡುಗಡೆ ಮಾಡಲಾಗಿದ್ದು ಚೇತರಿಸಿಕೊಂಡವರ ಸಂಖ್ಯೆ 560ಕ್ಕೆ ಏರಿದೆ. 158 ಸಕ್ರಿಯ ಪ್ರಕರಣಗಳಿವೆ.