More

  ಜಿಲ್ಲೆಯಲ್ಲಿ 110 ಕರೊನಾ ಪ್ರಕರಣ ಪತ್ತೆ, ವ್ಯಕ್ತಿ ಸಾವು

  ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ 110 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ.

  ಹರಿಹರ ಬೆಂಕಿನಗರದ 65 ವರ್ಷದ ವ್ಯಕ್ತಿಯು ಸಕ್ಕರೆ ಕಾಯಿಲೆ, ಹೃದ್ರೋಗ ಮತ್ತು ರಕ್ತದೊತ್ತಡ ಹಿನ್ನೆಲೆಯಲ್ಲಿ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು, ಶನಿವಾರ ಕೊನೆಯುಸಿರೆಳೆದರು. ಇದರೊಂದಿಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 37ಕ್ಕೇರಿದೆ.

  ದಾವಣಗೆರೆ ತಾಲೂಕಿನಲ್ಲಿ 73 ಪ್ರಕರಣ, ಜಗಳೂರು 16, ಹರಿಹರ ಮತ್ತು ಚನ್ನಗಿರಿ ತಾಲೂಕುಗಳಲ್ಲಿ ತಲಾ 7, ಹೊನ್ನಾಳಿ 3, ಹೊರ ಜಿಲ್ಲೆಯ 4 ಪ್ರಕರಣಗಳು ಕಾಣಿಸಿಕೊಂಡಿವೆ.

  ಸೋಂಕಿತರಲ್ಲಿ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು, ಮೂವರು ಸ್ಟಾಫ್ ನರ್ಸ್‌ಗಳು, ಆಸ್ಪತ್ರೆಗಳ ಮೂವರು ಸಿಬ್ಬಂದಿ, ಇಬ್ಬರು ಪೊಲೀಸರು, ಅಗ್ನಿಶಾಮಕ ದಳದ ಒಬ್ಬ ಸಿಬ್ಬಂದಿ ಸೇರಿದ್ದಾರೆ.

  ಹಾವೇರಿ ಜಿಲ್ಲೆ ರಾಣೇಬೆನ್ನೂರು ಮತ್ತು ಹಲಗೇರಿಯ ತಲಾ ಒಬ್ಬರಿಗೆ, ಬೆಳಗಾವಿ ಜಿಲ್ಲೆ ಹುಲಿ ಸವದತ್ತಿಯ ಒಬ್ಬರಿಗೆ ಪಾಸಿಟಿವ್ ಬಂದಿದೆ.

  ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1533ಕ್ಕೆ ಏರಿದೆ. 60 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು ಚೇತರಿಸಿಕೊಂಡವರ ಸಂಖ್ಯೆ 927 ಆಗಿದೆ. 569 ಸಕ್ರಿಯ ಪ್ರಕರಣಗಳಿವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts