ಜೋಡಿ ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

blank

Lದಾವಣಗೆರೆ :  ಜೋಡಿ ಕೊಲೆ ಮಾಡಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಮೂವರು ಕೊಲೆ ಅಪರಾಧಿಗಳಿಗೆ ಇಲ್ಲಿನ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ಹಾಗೂ ತಲಾ 35 ಸಾವಿರ ರೂ. ದಂಡ ವಿಧಿಸಿದೆ.  ಬೆಂಗಳೂರು ನಗರದ ದೊಡ್ಡಬಿದರ ಕಲ್ಲಿನ ಕುಮಾರ, ಹರಪನಹಳ್ಳಿ ತಾಲೂಕು ಹಳ್ಳಿಕೇರೆ ಗ್ರಾಮದ ಪರಶುರಾಮ, ಕೊಟ್ಟೂರು ತಾಲೂಕು ಕಳಪೂರ ಗ್ರಾಮದ ಮರಿಸ್ವಾಮಿ ಶಿಕ್ಷೆಗೆ ಗುರಿಯಾದವರು.  ಅಪರಾಧಿಗಳು 2022ರ ಜ. 24ರಂದು ರಾತ್ರಿ ಬೇತೂರು ಗ್ರಾಮದ ಮಠದ ಮನೆ ಗುರುಸಿದ್ದಯ್ಯ ಹಾಗೂ ಅವರ ಪತ್ನಿ ಸರೋಜಮ್ಮ ಎಂಬುವರ ಮನೆಗೆ ನುಗ್ಗಿ, ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು. ಮನೆಯಲ್ಲಿ ವಾಸವಿದ್ದ ದಂಪತಿಯನ್ನು ಹತ್ಯೆ ಮಾಡಿದ ಘಟನೆ ಜಿಲ್ಲೆಯಲ್ಲಿ ತಲ್ಲಣ ಉಂಟು ಮಾಡಿತ್ತು.  ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಡಿವೈಎಸ್ಪಿ ಬಿ.ಎಸ್. ಬಸವರಾಜ್ ಮತ್ತು ತಂಡ ಆರೋಪಿಗಳನ್ನು ಬಂಧಿಸಿದ್ದರು. ಅಂದಿನ ಪ್ರಭಾರ ಡಿವೈಎಸ್ಪಿ ಆಗಿದ್ದ ಐಪಿಎಸ್ ಅಧಿಕಾರಿ ಮಿಥುನ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.  ಕುಮಾರ ಇದೇ ಗ್ರಾಮದವನಾಗಿದ್ದು, ಮಠದ ಗುರುಸಿದ್ದಯ್ಯ ಅವರ ಮನೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಕೂಲಿ ಕೆಲಸ ಮಾಡುತ್ತಿದ್ದನು. ನಂತರ ಈತ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಹೋದವನು ಕುಡಿತ, ಜೂಜಾಟದಿಂದ ಸಾಲ ಮಾಡಿಕೊಂಡಿದ್ದನು.  ಮಠದ ಗುರುಸಿದ್ದಯ್ಯ ಮತ್ತು ಪತ್ನಿ ಸರೋಜಮ್ಮ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಮದುವೆಯಾಗಿ ಗಂಡನ ಮನೆಯಲ್ಲಿ ವಾಸಿಸುತ್ತಿದ್ದರು. ಈ ಮಾಹಿತಿ ತಿಳಿದಿದ್ದ ಕುಮಾರ ಪರಿಚಯದ ಹಿನ್ನೆಲೆಯಲ್ಲಿ ಸಂಚು ರೂಪಿಸಿ, ಸಾಲ ಕೇಳುವ ನೆಪದಲ್ಲಿ ಮನೆಗೆ ಇನ್ನಿಬ್ಬರೊಂದಿಗೆ ಹೋಗಿದ್ದ.  ಪರಿಚಯ ಇದ್ದ ಕಾರಣಕ್ಕೆ ಗುರುಸಿದ್ದಯ್ಯ ರಾತ್ರಿ ನಡು ಮನೆ ಒಳಗೆ ಕೂರಿಸಿಕೊಂಡು ಮಾತನಾಡಿಸುತ್ತಿದ್ದರು. ಸರೋಜಮ್ಮ ಅವರು ಟೀ ಮಾಡಿಕೊಡಲು ಅಡುಗೆ ಮನೆಗೆ ಹೋದಾಗ ಮೊದಲು ಗುರುಸಿದ್ದಯ್ಯ ಅವರಿಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದರು. ಗುರುಸಿದ್ದಯ್ಯ ಅವರ ಕೂಗಾಟ ಕೇಳಿ ಅಡುಗೆ ಮನೆಯಿಂದ ಬಂದ ಸರೋಜಮ್ಮ ಅವರನ್ನು ಸಹ ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.  ಅಂದಿನ ಎಸ್ಪಿ ಸಿ.ಬಿ. ರಿಷ್ಯಂತ್, ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಪ್ರಭಾರ ಡಿವೈಎಸ್ಪಿ ಆಗಿದ್ದ ಐಪಿಎಸ್ ಅಧಿಕಾರಿ ಮಿಥುನ್ ಅವರಿಗೆ ವಹಿಸಿದ್ದರು. ಸರ್ಕಾರಿ ಅಭಿಯೋಜಕ ಕೆ.ಎಸ್. ಸತೀಶ್ ಅವರು ವಾದ ಮಂಡಿಸಿದ್ದರು. ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯನವರ್ ತೀರ್ಪು ನೀಡಿದರು.    

Share This Article

ಯಾರಾದರೂ ನಿಮ್ಮ ಮುಂದೆ ಹಠಾತ್​ ಕುಸಿದುಬಿದ್ರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ… Suddenly Collapsed

Suddenly Collapsed : ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರಾದರು ಒಬ್ಬರು ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು…

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…