ಸಂವಿಧಾನ, ಐಕ್ಯತೆ ಉಳಿಸಲು ಬೇಕು ಸಂಘಟಿತ ಹೋರಾಟ

blank

ದಾವಣಗೆರೆ : ದೇಶದ ಸಂವಿಧಾನ, ಐಕ್ಯತೆ ಉಳಿಸಲು ಕಾರ್ಮಿಕರು, ದಲಿತರು,ರೈತರು ಒಂದಾಗಿ ಹೋರಾಟ ನಡೆಸಬೇಕು ಎಂದು ಪ್ರಗತಿಪರ ಚಿಂತಕ ಡಾ. ಸಿದ್ದನಗೌಡ ಪಾಟೀಲ್ ಹೇಳಿದರು.  ನಗರದ ಜಯದೇವ ವೃತ್ತದ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ  ಪ್ರಥಮ ರಾಜ್ಯ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.  ಪ್ರಸ್ತುತ ದೇಶ ಆಳುತ್ತಿರುವ ತತ್ವ ಬಹಳ ಅಪಾಯಕಾರಿಯಾಗಿದೆ. ಸಂವಿಧಾನದಲ್ಲಿನ ಜಾತ್ಯತೀತತೆ  ತೆಗೆದು ಹಾಕುವ ಹಾಗೂ ಮತ್ತೊಮ್ಮೆ ಹಿಂದು ರಾಷ್ಟ್ರ ನಿರ್ಮಿಸುವ ಪಿತೂರಿ ನಡೆದಿದೆ ಎಂದು ದೂರಿದರು.  ಸಂವಿಧಾನದ ಪ್ರಮುಖ ಉದ್ದೇಶವೇ ಪ್ರಭುತ್ವ ಸಮಾಜವಾದ.ಅಂದರೆ ಎಲ್ಲರೂ ಸಮಾನವಿರಬೇಕು.  ಅದು ಪ್ರಭುತ್ವದಿಂದಲೇ ಬರಬೇಕು ಎಂಬುದು. ಆದರೆ ಸಮಾಜವಾದ ಎಂಬ ಹೆಸರಿಗೆ ಆರ್‌ಎಸ್‌ಎಸ್  ಬಿಜೆಪಿಯಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದರು.  ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗಳಿಸಿದ್ದರೆ ಭಾರತದ ಸಂವಿಧಾನ ಕಿತ್ತುಹಾಕುವ ಮೂಲಕ ಮನು ಸಂವಿಧಾನ ಸ್ಥಾಪಿಸಿ ಹಿಂದು ದೇಶ ಘೋಷಣೆ ಮಾಡುವ ಅಪಾಯವಿತ್ತು. ಆದರೆ, ಜನತೆ ಇದಕ್ಕೆ ಅವಕಾಶ ನೀಡದೆ ದೇಶ ರಕ್ಷಿಸಿದರು ಎಂದು ತಿಳಿಸಿದರು.  ಶಿಕ್ಷಣ, ಆರೋಗ್ಯ, ರೈಲ್ವೇ, ವಿದ್ಯುತ್, ಕೈಗಾರಿಕೆ ಎಲ್ಲವನ್ನೂ ಖಾಸಗೀಕರಣಗೊಳಿಸುತ್ತಿದ್ದು ಕೃಷಿ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ನೀಡುತ್ತಿದೆ. ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಎಲ್ಲ ಕ್ಷೇತ್ರಗಳು ರಾಷ್ಟ್ರೀಕರಣದ ಬದಲು ಖಾಸಗೀಕರಣಗೊಂಡರೆ ಮೀಸಲಾತಿ ಕೈತಪ್ಪಲಿದೆ. ಹಾಗಾಗಿ, ಹೋರಾಟದ ಮೂಲಕ ಸಂವಿಧಾನ, ಮೀಸಲು ಹಾಗೂ ರೈತರ ಭೂಮಿ ಉಳಿಸಿಕೊಳ್ಳಬೇಕಾಗಿದೆ ಎಂದರು.  ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ  ಮಾತನಾಡಿ, ಸನಾತನತೆ ಎಂಬುದು ದಲಿತರ ಹಕ್ಕುಗಳಿಗೆ ಮೊದಲ ತಡೆಗೋಡೆಯಾಗಿದ್ದು, ಧರ್ಮ, ದೇವರು, ಪರಂಪರೆ, ಸಂಸ್ಕೃತಿ ಈ ಎಲ್ಲದರ ಹೆಸರಿನಲ್ಲಿ ದಲಿತರನ್ನು ದಮನಿಸುತ್ತ ಬರಲಾಗಿದೆ ಎಂದು ಹೇಳಿದರು.  ದಲಿತ ರಾಜಕಾರಣಿಗಳು ದೇಶದ ಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಅಸಮಾನತೆ ಪ್ರಶ್ನಿಸಬೇಕು. ಸಮಾನತೆ ಪ್ರತಿಪಾದಿಸುವುದು  ದೇಶ ಕಟ್ಟುವ ಹಾಗೂ ಸುಭದ್ರಗೊಳಿಸುವ ಕೆಲಸವಾಗಿದೆ ಎಂದು ತಿಳಿಸಿದರು.  ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ದೇಶದ ಬದಲಾವಣೆಯ ಮೂಲಮಂತ್ರ ಶಿಕ್ಷಣ. ಶಿಕ್ಷಣದಿಂದ ಮಾತ್ರ ಅನಾಗರೀಕತೆ ಮತ್ತು ಅಸಮಾನತೆ ದೂರವಾಗಿ ಸಹಬಾಳ್ವೆ ಮೂಡಲಿದೆ. ಮಕ್ಕಳಿಗೆ ಶಿಕ್ಷಣದ ಹಕ್ಕು ದೊರಕಿಸುವ ಕೆಲಸ ಮಾಡಿದಾಗ ಮಾತ್ರ ಆಂದೋಲನಗಳಿಗೆ ಅರ್ಥ ಬರಲಿದೆ ಎಂದರು.  ಸರ್ಕಾರಗಳಿಗೆ ಚಾಟಿ ಬೀಸಲು ಆಂದೋಲನಗಳು ಬಹಳ ಮುಖ್ಯ. ಹಿಂದಿನ ದಿನಗಳಲ್ಲಿ ಯಾವುದೇ ಹೋರಾಟಗಳಿಗೆ ಲಕ್ಷಾಂತರ ಜನ ಸೇರುತ್ತಿದ್ದರು. ಇಂದು ಚಳವಳಿಗಳು ಕ್ಷೀಣಿಸುತ್ತಿವೆ. ಯಾವುದೇ ಹೋರಾಟ ನಡೆಸಿದರೆ ಸರ್ಕಾರಗಳು ನಡುಗುವಂತಿರಬೇಕು ಎಂದು ಹೇಳಿದರು.  ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಸ್ವಾಗತ ಸಮಿತಿ ಸದಸ್ಯ ಡಾ. ಸದಾಶಿವ ಮರ್ಜಿ ಅಧ್ಯ ಕ್ಷತೆ ವಹಿಸಿದ್ದರು. ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಎ.ರಾಮಮೂರ್ತಿ, ಮಂಜುಳಾ ಮರ್ಜಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಎಐವೈಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಂ. ಸಂತೋಷ್, ಎನ್‌ಎಫ್‌ಐಡಬ್ಲುೃ ಪ್ರಧಾನ ಕಾರ್ಯದರ್ಶಿ ರೇಣುಕಮ್ಮ, ಷಣ್ಮುಖಸ್ವಾಮಿ, ಎಐಎಸ್‌ಎಫ್ ರಾಜ್ಯ ಅಧ್ಯಕ್ಷೆ ವೀಣಾ ನಾಯಕ್, ಹೆಗ್ಗೆರೆ ರಂಗಪ್ಪ, ಗುಡಿಹಳ್ಳಿ ಹಾಲೇಶ್ ಇದ್ದರು. ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಚ್.ಜಿ. ಉಮೇಶ್ ಸ್ವಾಗತಿಸಿದರು. ಆಂದೋಲನದ ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ಕುಮಾರ್ ರಾಠೋಡ್ ಮಾತನಾಡಿದರು.

Share This Article

ಕೂದಲು ಬಿಳಿಯಾಗುವುದನ್ನು ತಡೆಯುವುದೇಗೆ ಎಂಬ ಚಿಂತೆಯೇ?; ಇಲ್ಲಿದೆ ಸಿಂಪಲ್​ ವಿಧಾನ | Health Tips

10 ವರ್ಷದಿಂದ 25 ರಿಂದ 30 ರವರೆಗೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಕಾಲಿಕ ಬಿಳಿ ಕೂದಲಿನಿಂದ…

ನೀವು ಈ ನಕ್ಷತ್ರದಲ್ಲಿ ಹುಟ್ಟಿದ್ದೀರಾ? ಹಾಗಾದ್ರೆ ಈ ಡಿಸೆಂಬರ್​ ತಿಂಗಳಲ್ಲಿ ನಿಮ್ಮ ಅದೃಷ್ಟ ಖುಲಾಯಿಸಲಿದೆ! Birth of Stars

Birth of Stars : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ…

ರಾಗಿಮುದ್ದೆಯಿಂದ ಇಷ್ಟೆಲ್ಲಾ ಪ್ರಯೋಜನ ಇದ್ಯಾ!; ತಿಳಿದ್ರೆ ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಮಿಸ್​ ಮಾಡೋದೆ ಇಲ್ಲ | Health Tips

ಚಳಿಗಾಲವು ಆರಂಭವಾಗಿದ್ದು ಭವಿಷ್ಯದಲ್ಲಿ ಈ ಬಾರಿ ಹಿಂದಿನ ವರ್ಷಗಳಿಗಿಂತ ತೀವ್ರ ಚಳಿ ಇರುತ್ತದೆ. ಇತ್ತೀಚಿನ ದಿನಗಳಲ್ಲಿ…