ವಿದ್ಯಾರ್ಥಿಗಳಿಗೆ ಪೂರಕ ಕೌಶಲ ಅಗತ್ಯ

ದಾವಣಗೆರೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮೂಲ ಕೌಶಲದ ಜತೆಗೆ ಪೂರಕ ಕೌಶಲಗಳನ್ನು ಕಲಿಯಬೇಕು ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವೆ (ಆಡಳಿತಾಂಗ) ಡಾ.ಬಿ.ಕೆ. ತುಳಸಿಮಾಲಾ ಹೇಳಿದರು.

ಎಸ್.ಬಿ.ಸಿ. ಪ್ರಥಮದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದಿಂದ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ, 2018-19ನೇ ಸಾಲಿನ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಹಾಗೂ ರ‌್ಯಾಂಕ್ ವಿಜೇತರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಕೇವಲ ಪದವಿ ಪಡೆಯುವುದು ಮುಖ್ಯವಲ್ಲ, ಕಲಿತ ವಿಷಯದಲ್ಲಿ ಶ್ರೇಷ್ಠತೆ ಹೊಂದಬೇಕು. ಉದ್ಯೋಗವಕಾಶಗಳು ಸಾಕಷ್ಟಿವೆ, ನಮ್ಮಲ್ಲಿ ಉದ್ಯೋಗಾರ್ಹತೆ ಇದ್ದರೆ ಕೆಲಸ ಸಿಗುತ್ತದೆ ಎಂದರು.

ದಾವಣಗೆರೆ ವಿವಿ ಕುಲಸಚಿವ (ಪರೀಕ್ಷಾಂಗ) ಡಾ.ಬಸವರಾಜ್ ಬಣಕಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಾಧಿಸುವ ಛಲವಿರಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು. ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದರು.

ಎಸ್.ಬಿ.ಸಿ. ಕಾಲೇಜು ಪ್ರಾಂಶುಪಾಲ ಡಾ.ಕೆ. ಷಣ್ಮುಖ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜು ಅಧ್ಯಕ್ಷ ಬಿ.ಸಿ. ಉಮಾಪತಿ, ವಿನಾಯಕ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಎಂ.ಎಚ್. ನಿಜಾನಂದ, ಪ್ರಾಂಶುಪಾಲರಾದ ಬೇತೂರುಮಠ, ರಾಜಶೇಖರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *