ದಾವಣಗೆರೆ : ಎಲ್ಲೋ ಕುಳಿತ ಕೆಲವರು, ಸಾಮಾಜಿಕ ಜಾಲತಾಣಗಳ ಮೂಲಕ ಯುವಜನರ ಮನಸ್ಸಿನ ಮೇಲೆ ತಮ್ಮ ಅಭಿಪ್ರಾಯಗಳನ್ನು ಹೇರುವ, ಅದನ್ನೇ ಅನುಮೋದಿಸುವ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದು ಪೂರ್ವ ವಲಯ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಕಳವಳ ವ್ಯಕ್ತಪಡಿಸಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ 2024-25ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳ ಸಮಾರೋಪ ಹಾಗೂ ‘ಸಬಲೆ’ ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಕೆಲ ಪ್ರಭಾವಿಗಳು ತಮಗೆ ಬೇಕಾದ ಅಭಿಪ್ರಾಯಗಳನ್ನು ನಿಮ್ಮಲ್ಲಿ ರೂಪಿಸಿಕೊಳ್ಳುವ ಅಥವಾ ನಿಮ್ಮ ಮೂಲಕ ಹೊರಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಇದು ಎಷ್ಟು ಅಪಾಯಕಾರಿ ಎಂದರೆ, ಒಂದು ದಿನ ನೀವೇ ನಿಮ್ಮನ್ನು ಅಲ್ಲಗಳೆಯುವಂತಹ, ಕಡೆಗೆ ನಿಮ್ಮನ್ನು ನೀವೇ ನಾಶ ಮಾಡಿಕೊಳ್ಳುವಂತ ಸಂದರ್ಭ ಬರಬಹುದಾದ ಸಾಧ್ಯತೆಗಳಿವೆ. ಹೀಗಾಗಿ ಸಾಮಾಜಿಕ ಮಾಧ್ಯಮಗಳನ್ನು ನೋಡುವಾಗ, ಅಲ್ಲಿನ ಯಾವುದೇ ವಿಷಯ-ವಸ್ತುವಿನ ಬಗ್ಗೆ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳುವಾಗ ಬಹಳ ಎಚ್ಚರದಿಂದ ಇರಬೇಕು ಎಂದರು. ಯುದ್ಧ, ಹಿಂಸೆ, ಜಾತಿ, ಮತೀಯವಾದ ಹಾಗೂ ವಿಘಟನೆಗಳ ಪರವಾಗಿರುವ ವಾತಾವರಣವನ್ನು ಸಾಮಾಜಿಕ ಮಾಧ್ಯಮಗಳು ರೂಪಿಸುತ್ತಿವೆ. ಅದನ್ನು ನಾವೆಲ್ಲರೂ ನಿಧಾನವಾಗಿ ಸಹಿಸಿಕೊಳ್ಳುತ್ತಿದ್ದೇವೆ. ಮುಂದೆ ಅದನ್ನು ನಾವು ಒಪ್ಪಿಕೊಳ್ಳಬಹುದು, ಅವುಗಳ ಪರವಾಗಿ ಕೆಲಸವನ್ನೂ ಮಾಡಬಹುದು, ಇದು ದೊಡ್ಡ ಅಪಾಯ ಎಂದು ಅಭಿಪ್ರಾಯಪಟ್ಟರು. ಫೇಸ್‌ಬುಕ್, ಇನ್‌ಸ್ಟಾಗ್ರಾಂ ರೀತಿಯ ಸಾಮಾಜಿಕ ಜಾಲತಾಣ ಹಾಗೂ ಕೃತಕ ಬುದ್ಧಿಮತ್ತೆ(ಎಐ)ಯುವಜನರನ್ನು ಪ್ರಪಂಚದ ಮುಂದೆ ತೆರೆದಿಟ್ಟಿವೆ. ಬಹು ಸಂಖ್ಯಾತರ ಅಭಿಪ್ರಾಯದ ಪರವಾಗಿರುವ ಚಿಂತನಾ ಕ್ರಮವನ್ನು ಎಐ ರೂಪಿಸುತ್ತದೆ. ನೀವು ಏನಾದರೂ ಪ್ರಶ್ನೆ ಕೇಳಿದರೆ, ಬಹುಪಾಲು ಜನರಿಗೆ ಒಪ್ಪಿತವಾದ ಉತ್ತರವನ್ನು ಅದು ನೀಡುತ್ತದೆ. ಅದನ್ನು ವಿರೋಧಿಸಲು, ಚರ್ಚಿಸಲು ನಿಮಗೆ ಅವಕಾಶವೇ ಇರುವುದಿಲ್ಲ. ಇಲ್ಲಿ ಅಭಿಪ್ರಾಯಕ್ಕೆ, ಪ್ರಜಾಪ್ರಭುತ್ವಕ್ಕೆ ಜಾಗವಿಲ್ಲ. ಹೀಗಾಗಿ ಎಐನ್ನು ಬಹಳ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಲೇಖಕಿ ಬಿ. ಚಂದ್ರಿಕಾ ‘ಸಬಲೆ’ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿ, ಮಾತನಾಡಿದರು. ಪ್ರಾಚಾರ್ಯ ಡಾ. ಎಂ. ಮಂಜಣ್ಣ, ಡಾ.ಜಿ. ಕಾವ್ಯಶ್ರೀ, ಎಲ್ಲ ಘಟಕಗಳ ಸಂಚಾಲಕರು, ವಿದ್ಯಾರ್ಥಿನಿಯರು ಇದ್ದರು.
ಸಾಮಾಜಿಕ ಜಾಲತಾಣ ಮೂಲಕ ಅಭಿಪ್ರಾಯ ಹೇರಿಕೆ

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits
Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…
ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್! Cardiac Arrest
Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…