ಸಾಂಪ್ರದಾಯಿಕ ಕೌಶಲಕ್ಕೆ ಕೃತಕ ಬುದ್ಧಿಮತ್ತೆ ಸಾಟಿಯಲ್ಲ

ದಾವಣಗೆರೆ : ಕೃತಕ ಬುದ್ಧಿಮತ್ತೆಯು ಎಷ್ಟೇ ಪ್ರಬಲವಾಗಿ ಬಂದರೂ ನಮ್ಮ ಸಾಂಪ್ರದಾಯಿಕ ಕೌಶಲಗಳಿಗೆ ಅವು ಸಾಟಿಯಲ್ಲ. ಸಾಮಾಜಿಕ ಸಂಪರ್ಕ ಹಾಗೂ ನಿರಂತರ ಅಧ್ಯಯನದಿಂದ  ಸಾಂಪ್ರದಾಯಿಕ ಕೌಶಲ ಬರುತ್ತದೆ ಎಂದು ದಾವಣಗೆರೆ ವಿವಿ ವಾಣಿಜ್ಯ ವಿಭಾಗದ ಡೀನ್ ಡಾ. ಆರ್.ಶಶಿಧರ್ ಹೇಳಿದರು.  ಬಾಪೂಜಿ ಇನ್ಸ್‌ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್‌ನ ವಾಣಿಜ್ಯ ವಿಭಾಗದಿಂದ ಅಂತಿಮ ಬಿಕಾಂ ವಿದ್ಯಾರ್ಥಿಗಳಿಗೆ ವಿದಾಯ ಹೇಳುವ ‘ಬೀ ಐ ಹ್ಯಾವ್ 2024’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ತೊಂದರೆ ತೆಗೆದುಕೊಳ್ಳದೆ ಸಾಧನೆ ಸಾಧ್ಯವಿಲ್ಲ, ಜೇನುಹುಳುಗಳ ನಿರಂತರ ಕ್ರಿಯಾಶೀಲತೆ ಹಾಗೂ ತಾಳ್ಮೆ ಇದಕ್ಕೆ ಸಂಕೇತವಾಗಿದೆ. ಎಷ್ಟು ಚಟುವಟಿಕೆಯಿಂದ ಇರುತ್ತೇವೋ ಅಷ್ಟು ಸಮೃದ್ಧಿಯೂ ಜೀವನದಲ್ಲಿ ಸಾಧ್ಯ ಎಂದು ತಿಳಿಸಿದರು.  ಸೆಮಿಕಂಡಕ್ಟರ್ ಮುಂತಾದ ಕ್ಷೇತ್ರಗಳಲ್ಲಿ ಭಾರತದ ಸಾಧನೆ ವಿಶ್ವವನ್ನೇ ಬೆರಗುಗೊಳಿಸುತ್ತಿದೆ. 2030ರ ವೇಳೆಗೆ ಭಾರತವು 10 ಟ್ರಿಲಿಯನ್ ಡಾಲರ್‌ಗಳ ವಿಶ್ವದ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ, ವಾಣಿಜ್ಯ ಪದವೀಧರರಿಗೆ ಅವಕಾಶಗಳು ವಿಫುಲವಾಗಿವೆ. ಪೈಪೋಟಿ ದಟ್ಟಣೆಯ ವಿಶ್ವದಲ್ಲಿ ಸಾಮಾಜಿಕ ಸಂಪರ್ಕವೇ ಪರಿಹಾರವಾಗಬಲ್ಲದು ಎಂದರು.                              ಕಾಲೇಜಿನ ನಿರ್ದೇಶಕ ಡಾ. ಎಚ್.ವಿ. ಸ್ವಾಮಿ ತ್ರಿಭುವನಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನ ಕಟ್ಟಿಕೊಳ್ಳಲು ಕಾಲೇಜು ಶಿಕ್ಷಣ ಶಿಕ್ಷಣ ಮುಖ್ಯವಲ್ಲ ಎಂಬ ಕಾಲ ಹೋಯಿತು. ಶಿಕ್ಷಣವೂ ಮುಖ್ಯವಾಗಿದೆ, ಶಿಕ್ಷಣದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಾಮರಸ್ಯ ಅವಶ್ಯ ಎಂದರು.  ಅಧ್ಯಾಪಕ ಜ್ಞಾನೇಶ್ವರ ಇದ್ದರು. ಕ್ರೀಡಾ ಮತ್ತು ಶೈಕ್ಷಣಿಕ ಸಾಧಕರಿಗೆ ಬಹುಮಾನ ಮತ್ತು ಟ್ರೋಫಿ ವಿತರಿಸಲಾಯಿತು. ಅದಿಲ್ ಮತ್ತು ಅಲ್ಫೀಸಾ ನಿರೂಪಿಸಿದರು. ನಿತ್ಯಶ್ರೀ ಸ್ವಾಗತಿಸಿದರು. ಮಮತಾ ಮೆಹ್ತಾ  ವಂದಿಸಿದರು.      

Share This Article

ಕರಗಿದ ಮೇಣದಬತ್ತಿಯಿಂದ ಏನೆಲ್ಲಾ ಉಪಯೋಗ; ಬಿಸಾಡುವ ಬದಲು ಮರುಬಳಕೆ ಮಾಡಿ..

ಮನೆಯಲ್ಲಿ ಉಪಯೋಗಿಸುವ ಎಷ್ಟೋ ವಸ್ತುಗಳು ಕೆಲಕಾಲದ ನಂತರ ಹಳೆಯದಾಗುತ್ತದೆ. ಮತ್ತೆ ಕೆಲವು ಬಳಸಿದ ನಂತರ ನಾಶವಾಗುತ್ತದೆ.…

ಈರುಳ್ಳಿ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡಬೇಡಿ! ಸಿಪ್ಪೆ ವೇಸ್ಟ್​ ಎಂದು ಬಿಸಾಡೋ ಬದಲು ಹೀಗೆ ಮಾಡಿ

ಯಾವುದೇ ಅಡುಗೆ ಮಾಡಿದ್ರು ಈರುಳ್ಳಿ ಬೇಕೆ... ಬೇಕು. ಈರುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಆದರೆ…

ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…