ಟೇಕ್ವಾಂಡೋ ಗರ್ಲ್’  30ರಂದು ತೆರೆಗೆ

blank

ದಾವಣಗೆರೆ: ಮಹಿಳಾ ಸ್ವರಕ್ಷಣೆ ಕಲೆ ಕುರಿತ ‘ಟೇಕ್ವಾಂಡೋ ಗರ್ಲ್’ ಚಲನಚಿತ್ರವು ಆ.30 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ರವೀಂದ್ರ ವೆಂಶಿ ಹೇಳಿದರು.  ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಆತ್ರೇಯ ಕ್ರಿಯೇಶನ್ಸ್ ನಿರ್ಮಾಣದ ಡಾ. ಸುಮಿತಾ ಪ್ರವೀಣ್ ನಿರ್ಮಾಣದ ಟೇಕ್ವಾಂಡೋ ಗರ್ಲ್ ಚಿತ್ರದ ಪ್ರಧಾನ ಪಾತ್ರದಲ್ಲಿ ಬಾಲನಟಿ ಋತುಸ್ಪರ್ಶ ಉತ್ತಮವಾಗಿ ಅಭಿನಯಿಸಿದ್ದು, ಹೆಣ್ಣುಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಕಲೆ ಕುರಿತು ಚಿತ್ರಕತೆ ಸಾಗಲಿದೆ ಎಂದು ವಿವರಿಸಿದರು.  ಋತುಸ್ಪರ್ಶ ಕಳೆದ ಎಂಟು ವರ್ಷಗಳಿಂದ ಟೇಕ್ವಾಂಡೋ ಸಮರ ಕಲೆ ಕಲಿತು, ಐದು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಲಾಕ್‌ಬೆಲ್ಟ್ ಪಡೆದಿದ್ದಾರೆ ಎಂದು ಹೇಳಿದರು.   ವಿಯೆಟ್ನಾಂನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಈ ಚಿತ್ರವು ಆಯ್ಕೆಯಾಗಿದ್ದು, ಅತ್ಯುತ್ತಮ ಬಾಲ ಕಲಾವಿದೆ ಪ್ರಶಸ್ತಿಗೆ ಋತುಸ್ಪರ್ಶ ಆಯ್ಕೆಯಾಗಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿದ್ದು, ಬೆಂಗಳೂರು ನಗರದ ರಾಜಾಜಿನಗರ, ಜಾಲಹಳ್ಳಿ, ಸಹಕಾರ ನಗರದಲ್ಲಿ ಚಿತ್ರೀಕರಿಸಿದೆ ಎಂದರು.  ಪಲ್ಲವಿರಾವ್, ಸಹನಾಶ್ರೀ, ವಿಫ ರವಿ, ಸ್ವಾತಿ ಶಿವಮೊಗ್ಗ, ರೇಖಾ ಕೂಡ್ಲಗಿ ತಾರಾಗಣವಿದೆ.   ಶಾಲಾ ಮಕ್ಕಳಿಗೆ ಟಿಕೆಟ್ ದರದಲ್ಲಿ ಶೇ. 50 ರಿಯಾಯಿತಿ ಇದ್ದು, ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ಅವರು ಮನವಿ ಮಾಡಿದರು.  ಸುದ್ದಿಗೋಷ್ಠಿಯಲ್ಲಿ ನಟಿ ಋತುಸ್ಪರ್ಶ, ಪ್ರವೀಣ್ ಬಾನು ಇದ್ದರು.  

Share This Article

ಪ್ರತಿದಿನ ಹಣೆಗೆ ವಿಭೂತಿ ಹಚ್ಚಿಕೊಂಡರೆ ಏನಾಗುತ್ತದೆ ಗೊತ್ತಾ? significance of vibhuti

significance of vibhuti:  ಸಾಮಾನ್ಯವಾಗಿ ಹಿಂದೂಗಳು ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದನ್ನು ನೋಡುತ್ತೇವೆ. ಮಹಿಳೆಯರು  ತಿಲಕವನ್ನು…

ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health

Summer Health: ನೀರು ಮನುಷ್ಯರಿಗೆ ಬಹಳ ಅವಶ್ಯಕ. ನಾವು ಅನ್ನ ತಿನ್ನದೆ ಬದುಕಬಹುದು, ಆದರೆ ನೀರು…

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…