More

  ಮದುವೆಗೆ ಹೊರಟಿದ್ದ ಲಾರಿ ಪಲ್ಟಿ: ಸ್ಥಳದಲ್ಲೇ ಮೂವರು ಸಾವು 17ಕ್ಕೂ ಹೆಚ್ಚು ಜನರಿಗೆ ಗಂಭಿರ ಗಾಯ

  ದಾವಣಗೆರೆ: ಮದುವೆಗೆ ಹೊರಟಿದ್ದ ಕ್ಯಾಂಟರ್ ಲಾರಿ ಪಲ್ಟಿಯಾಗಿ ಸ್ಥಳದಲ್ಲೇ ಮೂವರು ಮಹಿಳೆಯರು ಮೃತಪಟ್ಟಿದ್ದು, 17ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.

  ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಮತ್ತು ಹಂಚಿನಸಿದ್ದಾಪುರದ ಮಧ್ಯೆ ಘಡನೆ ನಡೆದಿದೆ. ಆಂಧ್ರಪ್ರದೇಶದ ಇಂದೂಪುರದ ನಾಗರತ್ನಮ್ಮ (70), ಶಿವಮೊಗ್ಗದ ವರಲಕ್ಷ್ಮೀ (60), ಅನುಷಾ (25) ಮೃತಪಟ್ಟವರು,

  ಆಂಧ್ರಪ್ರದೇಶದ ಇಂದೂಪುರದಿಂದ ಶಿವಮೊಗ್ಗಕ್ಕೆ ಮದುವೆ ದಿಬ್ಬಣ ಹೋಗುತ್ತಿತ್ತು. ದಿಬ್ಬಣದ ಲಾರಿ ನಿಯಂತ್ರಣ ತಪ್ಪಿ ಮೈಲುಗಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಅವಘಡ ಸಂಭವಿಸಿದೆ.

  ಘಟನಾ ಸ್ಥಳಕ್ಕೆ ಚನ್ನಗಿರಿ ಪೊಲೀಸರ ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶವಗಳನ್ನು ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. (ದಿಗ್ವಿಜಯ ನ್ಯೂಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts