ಜಾಗತಿಕ ಸವಾಲುಗಳಿಗೆ ಸಾಹಿತ್ಯ ಎದೆಗೊಟ್ಟು ನಿಲ್ಲಲಿ

ದಾವಣಗೆರೆ : ಜಾಗತಿಕ ತಲ್ಲಣ ಹಾಗೂ ಸವಾಲುಗಳಿಗೆ ಸಾಹಿತ್ಯ ಮತ್ತು ಕಲೆ ತಕ್ಕ ಉತ್ತರ ನೀಡುವ ಜತೆಗೆ ಎದೆಗೊಟ್ಟು ನಿಲ್ಲಬೇಕು ಎಂದು ಹಿರಿಯ ಕವಿ, ವಿಚಾರವಾದಿ ಚಂದ್ರಶೇಖರ್ ತಾಳ್ಯ ಹೇಳಿದರು.  ಬಾಗಲಕೋಟೆ ಜಿಲ್ಲೆ ರಂಜಣಗಿಯ ಪರಿಸರ ಪುಸ್ತಕ ಪ್ರಕಾಶನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕವಿ ಮಹಾಂತೇಶ ಪಾಟೀಲರ ‘ಚಲಿಸುವ ಗೋಡೆಗಳು’ ಕವನ ಸಂಕಲನ ಹಾಗೂ ‘ಬೆಳಕು ಬೆಳೆಯುವ ಹೊತ್ತು’ ವಿಮರ್ಶಾ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಸಮಸ್ತ ಭೂ ಮಂಡಲವೇ ಇಂದು ರಾಗ ದ್ವೇಷಗಳಿಂದ ತುಂಬಿದ ಕುದಿಯುವ ಪಾತ್ರೆಯಂತಾಗಿದೆ. ಕೋಮುವಾದ ವಿಜೃಂಭಿಸುತ್ತಿದ್ದು, ಸಂಬಂಧಗಳು ಸಂಪೂರ್ಣ ಹಳಸಿವೆ. ಜಾಗತಿಕ ಸಮುದಾಯ ಸೂಕ್ಷ್ಮತೆ ಕಳೆದುಕೊಂಡಿದೆ. ಇಂತಹ ಎಲ್ಲ ತಲ್ಲಣಗಳಿಗೆ ಸಾಹಿತ್ಯ ಮಾರುತ್ತರ ನೀಡಬೇಕು ಎಂದು ತಿಳಿಸಿದರು.  ಕವಿರಾಜಮಾರ್ಗದಿಂದ ಹಿಡಿದು ಕುವೆಂಪುರವರೆಗೂ ಕನ್ನಡ ಸಾಹಿತ್ಯವು ಸಮಾಜದ ಎಲ್ಲ ಬಿಕ್ಕಟ್ಟುಗಳಿಗೆ ಜವಾಬ್ದಾರಿಯುತ ಉತ್ತರ ನೀಡುವ  ಕೆಲಸ ಮಾಡುತ್ತಾ ಬಂದಿದೆ. ಪಂಪನು ಮಾನವ ಜಾತಿ ತಾನೊಂದೆ ವಲಂ ಎಂದರೆ, ಬಸವಣ್ಣನವರು ದಯವೇ ಧರ್ಮದ ಮೂಲ ಎಂದು ಸಾರಿದರು. ವಚನ ಪರಂಪರೆ ಪ್ರಭುತ್ವದ ವಿರುದ್ಧ ದೊಡ್ಡ ಹೋರಾಟವನ್ನೇ ನಡೆಸಿತು ಎಂದರು.  ಸಾಹಿತ್ಯ ಯಾವಾಗಲೂ ಶಾಂತಿ, ಸಾಮರಸ್ಯ ಹಾಗೂ ಸೌಹಾರ್ದ ಬಯಸಲಿದ್ದು, ಸಾಮಾಜಿಕ ಸವಾಲುಗಳನ್ನು ದಿಟ್ಟವಾಗಿ ಸ್ವೀಕರಿಸಿದಾಗ ಮಾತ್ರ ಸಾಹಿತ್ಯವು ಸಮಸಮಾಜದ ಜತೆಗೆ ಸೌಹಾರ್ದಯುತ ಸಮಾಜ ಕಟ್ಟಲು ಸಾಧ್ಯ. ಇಂದಿನ ಕಾಲಕ್ಕೆ ಮಂಟೇಸ್ವಾಮಿಯವರ ಕಾವ್ಯ ಹೆಚ್ಚು ಪ್ರಸ್ತುತ ಎಂದು ಹೇಳಿದರು.  ಕನ್ನಡ ಪ್ರಕಾಶನ ಸಂಸ್ಥೆ ಎನ್ನುವುದೇ ದೊಡ್ಡ ಲಾಬಿ. ಇವು ಹೊಸ ಸಾಹಿತ್ಯ ಪುಸ್ತಕಗಳನ್ನು ಪ್ರಕಟಿಸುವುದು ಬಹಳ ಕಷ್ಟ. ಸ್ವಂತ ಪ್ರಕಾಶನ ಪ್ರಾರಂಭಿಸಿ ಪುಸ್ತಕ ಪ್ರಕಟಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.  ಹಂಪಿಯ ಕವಿ ಹಾಗೂ ವಿಮರ್ಶಕ ಪ್ರೊ. ವೆಂಕಟಗಿರಿ ದಳವಾಯಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ಇಂದು ನಿರ್ವಾತ ಸ್ಥಿತಿ ಉಂಟಾಗಿದೆ. ನಮ್ಮ ಕಾಲಘಟ್ಟದಲ್ಲಿ ಮಾತ್ರ ಒಬ್ಬ ಕವಿ, ನಾಟಕಕಾರ ಹಾಗೂ ವಿಮರ್ಶಕ ಇಲ್ಲದ ವಿವಿಗಳನ್ನು ಕಾಣುತ್ತಿದ್ದೇವೆ. ಇವರಿದ್ದಾಗಲೇ ವಿವಿಗಳಿಗೆ ಒಂದು ಗೌರವ ಎಂದರು.  ವಿಮರ್ಶಕರಾದ ಡಾ.ರಂಗನಾಥ್ ಕಂಟನಕುಂಟೆ ಕವನ ಸಂಕಲನ ಕುರಿತು, ಪ್ರೊ.ಮೇಟಿ ಮಲ್ಲಿಕಾರ್ಜುನ್ ವಿಮರ್ಶಾ ಸಂಕಲನ ಕುರಿತು ಮಾತನಾಡಿದರು. ಪತ್ರಕರ್ತ ಸದಾನಂದ ಹೆಗಡೆ, ದಾವಣಗೆರೆ ವಿವಿ ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ವಿ.ಜಯರಾಮಯ್ಯ, ಪ್ರಕಾಶಕಿ ಡಾ.ಸುಮಾ ಪಾಟೀಲ್ ಇದ್ದರು. ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಕವಿ ಡಾ.ಮಹಾಂತೇಶ ಪಾಟೀಲ ಸ್ವಾಗತಿಸಿದರು.  

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…