More

  ಸಾಹಿತ್ಯದ ಅಭಿವ್ಯಕ್ತಿಗೆ ಸಾಮಾಜಿಕ ಜಾಲತಾಣ ಪೂರಕವಾಗಲಿ

  ದಾವಣಗೆರೆ : ಸಾಮಾಜಿಕ ಜಾಲತಾಣಗಳಲ್ಲಿ ಆಗುವ ಅಭಿವ್ಯಕ್ತಿಯು ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಲೇಖಕ ಜಿ.ಪಿ. ಬಸವರಾಜು ಹೇಳಿದರು.
   ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ, ಪಲ್ಲವ ಪ್ರಕಾಶನ, ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, ಲೇಖಕ ಮಲ್ಲಿಕಾರ್ಜುನ ಗೌಡ ತೂಲಹಳ್ಳಿ ಅವರ ‘ಅಗಸ್ತ್ಯ ನಕ್ಷತ್ರ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
   ಫೇಸ್‌ಬುಕ್, ವಾಟ್ಸಾಪ್‌ನಂಥ ತೆರೆದ ವೇದಿಕೆಗಳನ್ನು ಸರಿಯಾಗಿ ಬಳಸಬೇಕಿದೆ. ಇವು ಸಾಹಿತ್ಯಕ್ಕೆ ಪ್ರಯೋಜನ ಎನಿಸಿದರೂ ಅಲ್ಲಿ ಕೃತಿಯನ್ನು ಓದದೆಯೇ ಪ್ರತಿಕ್ರಿಯೆ ನೀಡುವ ವರ್ಗವೇ ಇದೆ. ಇದು ಸಾಹಿತ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ವಿಶ್ಲೇಷಿಸಿದರು.
   ಕನ್ನಡ ಕಥಾ ಪ್ರಪಂಚ ಸಮೃದ್ಧವಾಗಿದೆ. ಪಂಜೆ ಮಂಗೇಶರಾಯರು, ಮಾಸ್ತಿ ಅವರಿಂದ ಆರಂಭವಾಗಿ ಕನ್ನಡದ ಕತೆಗಳಿಗೆ ದೊಡ್ಡ ಪರಂಪರೆಯಿದೆ ಎಂದರು.
   ಪತ್ರಕರ್ತ ರವೀಂದ್ರ ಭಟ್ಟ ಐನಕೈ ಮಾತನಾಡಿ, ಹಿಂದೆ ಸಾಹಿತ್ಯ, ಪತ್ರಿಕೆ ಓದುವ ದೊಡ್ಡ ಒಳಗವೇ ಇತ್ತು. ಅದಕ್ಕೆ ಮುಖ್ಯ ಕಾರಣ ಮಹಿಳಾ ಓದುಗರು. ಆದರೆ ಇಂದು ಮಹಿಳೆಯರು ಓದುವ ಅಭ್ಯಾಸದಿಂದ ವಿಮುಖರಾಗುತ್ತಿದ್ದು, ನೋಡುವ ಸಂಸ್ಕೃತಿ ಹೆಚ್ಚುತ್ತಿದೆ ಎಂದು ಅಭಿಪ್ರಾಯಪಟ್ಟರು.
   ಓದುವ ಸಂಸ್ಕೃತಿಗಿಂತ ನೋಡುವ (ಟಿ.ವಿ ನೋಡುವ) ಸಂಸ್ಕೃತಿ ಹೆಚ್ಚುತ್ತಿರುವುದು ಸಾಹಿತ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.
   ಪ್ರತಿ ಮನುಷ್ಯನಲ್ಲೂ ನಮಗಿಂತ ಯಾರಾದರೂ ಕೆಳಗಿರಬೇಕು ಎಂಬ ಭಾವನೆ ಸಹಜವಾಗಿರುತ್ತದೆ. ಇಂದು ಚಂದ್ರನತ್ತ, ಸೂರ್ಯನತ್ತ ಹೋದರೂ ನಮ್ಮಲ್ಲಿನ ಭಾವನೆ ಮೇಲು, ಕೀಳು ನೆಲೆಗಟ್ಟಿನಲ್ಲೇ ಇದೆ ಎಂದು ವಿಷಾದಿಸಿದರು. ಪುಸ್ತಕ ಕುರಿತು ಅಧ್ಯಾಪಕ ನಿಸಾರ್ ಅಹಮದ್ ಮಾತನಾಡಿದರು.
   ಕೃತಿಯಲ್ಲಿ ಎಲ್ಲ ಪಾತ್ರಗಳನ್ನು ಲೇಖಕರು ಮಾನವೀಯ ನೆಲೆಯಲ್ಲಿ ಚಿತ್ರಿಸಿದ್ದಾರೆ. ದಲಿತ ಸಂವೇದನೆ ಇದೆ. ಎಲ್ಲ ಕತೆಗಳಲ್ಲಿ ನೀಚತನ, ಕ್ರೌರ್ಯ, ವಿಚಿತ್ರ ಸ್ವಭಾವದ ಮನುಷ್ಯ ಇದ್ದಾನೆ. ಲಂಕೇಶ್, ಕುಂವೀ ಅವರ ಪ್ರಭಾವ ಕತೆಗಳಲ್ಲಿ ಕಾಣುತ್ತದೆ ಎಂದು
   ಕಾಲೇಜಿನ ಪ್ರಾಚಾರ್ಯ ಎಂ. ಮಂಜಣ್ಣ ಅಧ್ಯಕ್ಷತೆ ವಹಿಸಿದ್ದರು. ಎಚ್.ಎನ್. ಈಶಕುಮಾರ್ ಕತೆ ಓದಿದರು. ಲೇಖಕ ಮಲ್ಲಿಕಾರ್ಜುನ ಗೌಡ ತೂಲಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಜಿನಪ್ಪ ಡಿ., ಐಕ್ಯುಎಸಿ ಸಂಚಾಲಕ ಭೀಮಣ್ಣ, ಪ್ರಾಧ್ಯಾಪಕ ಸತೀಶ ಸೇರಿ ಸಾಹಿತ್ಯಾಸಕ್ತರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts