ಅಗೋಚರವಾದ ಅಸ್ಪಶ್ಯತೆ ಇನ್ನೂ ಜೀವಂತ  

blank

ದಾವಣಗೆರೆ : ಸಮಾಜದಲ್ಲಿ ಕಣ್ಣಿಗೆ ಕಾಣುವ ಅಸ್ಪಶ್ಯತೆ ಕಡಿಮೆಯಾಗಿದೆ, ಆದರೆ ಅಗೋಚರವಾದ ಅಸ್ಪಶ್ಯತೆ ಇನ್ನೂ ಜೀವಂತವಾಗಿದೆ ಎಂದು ಹಿರಿಯ ಪತ್ರಕರ್ತ, ಚಿಂತಕ ದಿನೇಶ ಅಮೀನಮಟ್ಟು ಹೇಳಿದರು.  ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶನಿವಾರ, ಲೇಖಕಿ ಬಿ.ಟಿ. ಜಾಹ್ನವಿ ಸಂಪಾದಿಸಿರುವ ‘ಮುಟ್ಟಿಸಿಕೊಂಡವರು’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.  ಅಸ್ಪಶ್ಯತೆಯ ವ್ಯಾಖ್ಯಾನ ಬದಲಾಗಿದೆ. ಅದು ಬಹಿರಂಗವಾಗಿ ಕಾಣದೇ ಇದ್ದರೂ ಮನಸ್ಸಿನ ಒಳಗೆ ಆ ಭಾವನೆ ಈಗಲೂ ಹಲವರಲ್ಲಿದೆ. ಈ ನಿಟ್ಟಿನಲ್ಲಿ ಮನ ಪರಿವರ್ತನೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.  ದಲಿತರ ಆತ್ಮಕತೆಗಳು ಹೊಸ ಅನುಭವ ಲೋಕವನ್ನು ಸೃಷ್ಟಿಸುತ್ತವೆ. ಜನಾನುರಾಗಿ ನೇತ್ರ ತಜ್ಞರಾಗಿದ್ದ ಡಾ. ಬಿ.ಎಂ. ತಿಪ್ಪೇಸ್ವಾಮಿ ಅವರ ಆತ್ಮಚರಿತ್ರೆ ಬರೆಯುವಂತೆ ಬಿ.ಟಿ. ಜಾಹ್ನವಿ ಅವರಿಗೆ ಸಲಹೆ ನೀಡಿದರು.  ತಿಪ್ಪೇಸ್ವಾಮಿ ಅವರು ಅಂಬೇಡ್ಕರ್ ಅವರಂತೆಯೇ ಅವಮಾನ, ನಿರ್ಲಕ್ಷೃವನ್ನು ಅನುಭವಿಸಿದರು. ಅದನ್ನು ಸಹಿಸಿಕೊಂಡು ಬೆಳೆದರು. ಅವರು ವಿಭಿನ್ನ ವ್ಯಕ್ತಿತ್ವ ಹೊಂದಿದ್ದರು. ಸಂಧಾನದ ಮೂಲಕ ಸಮಾಜವನ್ನು ಬದಲಿಸುವ ವಿಶಾಲ ಮನೋಭಾವ ಅವರಲ್ಲಿತ್ತು. ಯಾರ ಬಗ್ಗೆಯೂ ಅಸಹನೆ, ದ್ವೇಷ ಇರಲಿಲ್ಲ. ಅವರು ವೃತ್ತಿ ಧರ್ಮವನ್ನು ಪಾಲಿಸಿದ ರೀತಿ ಅನುಕರಣೀಯ ಎಂದರು.  ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಇರಬೇಕು. ಇಂದಿಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪ್ರಾತಿನಿಧ್ಯ ಇಲ್ಲ ಎಂದು ಹೇಳಿದರು.  ಪತ್ರಕರ್ತೆ ಪ್ರೀತಿ ನಾಗರಾಜ್ ಮಾತನಾಡಿ, ತಿಪ್ಪೇಸ್ವಾಮಿ ಅವರಿಗೆ ರಾಷ್ಟ್ರಮಟ್ಟದ ನಾಯಕರಾಗುವ ಅರ್ಹತೆ ಇತ್ತು. ಅವರು ಸರಳ ಸ್ವಭಾವದ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿಕೊಂಡರು.  ಲೇಖಕಿ ಬಿ.ಟಿ. ಜಾಹ್ನವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೇತ್ರ ತಜ್ಞ ಡಾ. ಆರ್. ರಂಗನಾಥ್, ಎಸ್. ವಿಷ್ಣು ಕುಮಾರ್ ಇದ್ದರು. ಡಾ. ಮುರುಗೇಶ ಬಾಬು ಪ್ರಾರ್ಥಿಸಿದರು. ಲಾವಣ್ಯಾ ಸ್ವಾಗತಿಸಿದರು.

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…