More

    ಪ್ರತಿಪಕ್ಷಗಳ ನಿಲುವಿಗೆ ರಾಜಶೇಖರ್ ಟೀಕೆ

    ದಾವಣಗೆರೆ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಪ್ರತಿಪಕ್ಷಗಳಿಗೆ ಎಂದೂ ಇಲ್ಲದ ಕಳಕಳಿ, ಮಮಕಾರ ಈಗ ಬಂದಿದೆ ಎಂದು ಬಿಜೆಪಿ ಕಾರ್ಯಕರ್ತ ಎನ್. ರಾಜಶೇಖರ ಹೇಳಿದ್ದಾರೆ.
     ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೇ 28ರಂದು ನಿಗದಿಯಾಗಿರುವ ನೂತನ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ಪ್ರತಿಪಕ್ಷಗಳು ಬಹಿಷ್ಕರಿಸುತ್ತಿರುವ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
     ಈ ಹಿಂದೆ ಸಂಸತ್ ಭವನದ ಶಿಲಾನ್ಯಾಸದ ಸಮಯದಲ್ಲಿ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಅಡಿಗಲ್ಲು ಸಮಾರಂಭಕ್ಕೆ ಏಕೆ ಕರೆಯಲಿಲ್ಲ ಎಂದು ಚಕಾರ ಎತ್ತಲಿಲ್ಲ, ಅಂದು ಪ್ರತಿಪಕ್ಷಗಳ ಅಜೆಂಡಾ ಬೇರೆಯೆ ಇತ್ತು. ನೂತನ ಸಂಸತ್ ಭವನದ ಕಟ್ಟಡವೇ ಬೇಡ ಎಂದು ಹಠ ಹಿಡಿದಿದ್ದವು ಎಂದು ತಿಳಿಸಿದ್ದಾರೆ.
     ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಆಗುವ ಸಂದರ್ಭದಲ್ಲಿ ಅವರಿಗೆ ಅವಿರೋಧವಾಗಿ ಆಯ್ಕೆ ಮಾಡದಿರುವ ಕಾಂಗ್ರೆಸ್ ಪಕ್ಷಕ್ಕೆ ಇದ್ದಕ್ಕಿದ್ದ ಹಾಗೆ ಏಕಿಷ್ಟು ಮಮಕಾರ?, ದಾವಣಗೆರೆಯ ಕಾಂಗ್ರೆಸ್‌ನ ನಾಯಕರು ಕೂಡ ದ್ರೌಪದಿ ಮುರ್ಮು ಅವರು ಕೇವಲ ಉತ್ಸವ ಮೂರ್ತಿ, ರಬ್ಬರ್ ಸ್ಟ್ಯಾಂಪ್ ಎಂದು ಗೇಲಿ ಮಾಡಿದ್ದರು ಎಂದು ನೆನಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts