ದಾವಣಗೆರೆ : ಕಾವೇರಿ-2 ತಂತ್ರಾಂಶದಲ್ಲಿ ಉಂಟಾಗಿರುವ ದೋಷದಿಂದ ಆಸ್ತಿ ನೋಂದಣಿಗಾಗಿ ಜನರು ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಬುಧವಾರ ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ವಸ್ತುಸ್ಥಿತಿ ಅಧ್ಯಯನ ಮತ್ತು ಸಾರ್ವಜನಿಕರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಉಪ ನೋಂದಣಾಧಿಕಾರಿ ಆರ್.ಎಲ್. ವೀಣಾ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದರು. ಶೀಘ್ರ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದಾಗಿ ರಾಜ್ಯದಲ್ಲಿ ಆಸ್ತಿ ನೋಂದಣಿ ಕಾರ್ಯ ಬಹುತೇಕ ಸ್ಥಗಿತಗೊಂಡಿದೆ. ಇದರಿಂದ ಜನರಿಗೆ ತೀವ್ರ ತೊಂದರೆಯಾಗಿದೆ. ಕಾವೇರಿ ತಂತ್ರಾಂಶ ನಿರ್ವಹಿಸುತ್ತಿರುವ ಸಂಸ್ಥೆಗೆ ನೀಡಬೇಕಾದ ಹಣವನ್ನು ಸರ್ಕಾರ ಕೊಟ್ಟಿಲ್ಲ. ಇದರಿಂದಾಗಿ ಸಮಸ್ಯೆಯಾಗಿದೆ ಎಂದು ದೂರಿದರು. ಕಚೇರಿಯಲ್ಲಿದ್ದ ಸಾರ್ವಜನಿಕರು, ಪತ್ರ ಬರಹಗಾರರಿಂದ ಮಾಹಿತಿ ಪಡೆದ ಮುಖಂಡರು ತಕ್ಷಣವೇ ವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಸಿಟಿಜನ್ ಲಾಗಿನ್ ಮಂಗಳವಾರ ಕಾರ್ಯ ನಿರ್ವಹಿಸಲಿಲ್ಲ. ಇದರಿಂದ ಕೊಂಚ ಸಮಸ್ಯೆಯಾಗಿತ್ತು. ಈಗ ಸರಿಯಾಗಿದೆ. ಕಾವೇರಿ-2 ತಂತ್ರಾಂಶದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇರುವುದು ಸಾಮಾನ್ಯ. ಅದನ್ನು ಇಲಾಖೆ ಮಟ್ಟದಲ್ಲಿ ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ. ಇನ್ನು ಮುಂದೆ ಸರ್ವರ್ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಆರ್.ಎಲ್. ವೀಣಾ ಹೇಳಿದರು. ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ.ಎಂ. ಸತೀಶ್ ಮಾತನಾಡಿ, ಸಿಟಿಜನ್ ಲಾಗಿನ್ ಕೆಲಸ ಮಾಡಿದರೆ ಸಬ್ ರಿಜಿಸ್ಟ್ರಾರ್ ಲಾಗಿನ್ ಕೆಲಸ ಮಾಡುವುದಿಲ್ಲ. ವಿಳಂಬದ ಕಾರಣ ಸಾರ್ವಜನಿಕರು ಪರದಾಡುವಂತಾಗಿದೆ ಲೋಪ ಸರಿಪಡಿಸಬೇಕು. ಕಂದಾಯ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳ್, ಮುಖಂಡರಾದ ಪಿ.ಸಿ. ಶ್ರೀನಿವಾಸ ಭಟ್, ಕಡ್ಲೆಬಾಳ್ ಬಸಣ್ಣ, ಪ್ರವೀಣ್ ಜಾಧವ್, ಎಚ್.ಪಿ. ವಿಶ್ವಾಸ್, ಜಯರುದ್ರಪ್ಪ ಇದ್ದರು. … (ಕೋಟ್) ರಾಜ್ಯ ಸರ್ಕಾರ ದಿವಾಳಿ ಆಗಿದೆ. ಖಜಾನೆಯಲ್ಲಿ ಹಣವಿಲ್ಲ. ಕಾವೇರಿ-2 ತಂತ್ರಾಂಶ ನಿರ್ವಹಿಸುವ ಸಂಸ್ಥೆಗೆ 460 ಕೋಟಿ ರೂ. ಬಾಕಿ ಇದೆ. ರಾಜ್ಯದಲ್ಲಿ ದಿನಕ್ಕೆ 7 ರಿಂದ 8 ಸಾವಿರ ನೋಂದಣಿಗಳು ರಾಜ್ಯದಲ್ಲಿ ಆಗಬೇಕು, ಆದರೆ ಕಳೆದ ಶನಿವಾರದಿಂದ ಇಲ್ಲಿಯ ವರೆಗೆ ಕೇವಲ 600 ನೋಂದಣಿಗಳಾಗಿವೆ. ಜನರು ಬಂದು ಕೆಲಸವಾಗದೇ
