More

  ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಮುತ್ತಿಗೆ ಯತ್ನ

  ದಾವಣಗೆರೆ : ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
   ನಗರದ ಅಮರ್ ಜವಾನ್ ಉದ್ಯಾನದಲ್ಲಿ ಸೇರಿದ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ನಂತರ ಸಮೀಪದ ಜಿಲ್ಲಾ ಕಾಂಗ್ರೆಸ್ ಭವನದ ಕಡೆಗೆ ನಡೆದುಕೊಂಡು ಬರುತ್ತಿರುವಾಗ ರಸ್ತೆಯಲ್ಲೇ ಅವರನ್ನು ಸುತ್ತುವರಿದ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದರು.
   ಬಿಜೆಪಿ ಮುಖಂಡ ಸತೀಶ್ ಕೊಳೇನಹಳ್ಳಿ ಮಾತನಾಡಿ, ಪಾಕ್ ಪರ ಘೋಷಣೆ ಕೂಗಿರುವುದು ದೇಶದ್ರೋಹಿ ಕೃತ್ಯ. ಅವರು ದೇಶದಲ್ಲಿ ಇರಬಾರದು. ಸರ್ಕಾರ ಅವರನ್ನು ಮಟ್ಟ ಹಾಕಬೇಕು. ಮಾಧ್ಯಮದವರೊಂದಿಗೂ ಉದ್ಧಟತನ ಪ್ರದರ್ಶಿಸಿದ್ದಾರೆ ಎಂದು ಹೇಳಿದರು.
   ಕಾಂಗ್ರೆಸ್ ಸರ್ಕಾರವಿದ್ದಾಗ ಪಾಕ್ ಪರ ಘೋಷಣೆ ಕೂಗುವುದು ಸಾಮಾನ್ಯವಾಗಿದೆ. ಸಂಸದ ಡಿ.ಕೆ. ಸುರೇಶ್ ದೇಶ ವಿಭಜನೆಯ ಹೇಳಿಕೆ ನೀಡುತ್ತಾರೆ. ಈ ರೀತಿ ದೇಶದ್ರೋಹದ ಹೇಳಿಕೆಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ಗೆ ಮುಂದೊಂದು ದಿನ ಗಂಡಾಂತರ ಕಾದಿದೆ ಎಂದು ಎಚ್ಚರಿಸಿದರು.
   ಪಾಕಿಸ್ತಾನದ ಪರ ಮಾತನಾಡುವವರನ್ನು ಆ ದೇಶಕ್ಕೇ ಕಳುಹಿಸಲಿ. ಹಿಂದುಸ್ತಾನ್ ಜಿಂದಾಬಾದ್. ಪ್ರಪಂಚ ಇರುವ ತನಕ ಅದು ಇರುತ್ತದೆ ಎಂದು ಮುಖಂಡ ನಸೀರ್ ಅಹಮದ್ ತಿಳಿಸಿದರು.
   ಜನರು ಭ್ರಷ್ಟಾಚಾರ, ಜಾತಿ ರಾಜಕಾರಣವನ್ನು ಸಹಿಸಬಹುದು. ಆದರೆ ದೇಶದ್ರೋಹದ ಹೇಳಿಕೆಯನ್ನು ಎಂದೂ ಸಹಿಸಲಾರರು. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಘೋಷಣೆ ಪರ, ವಿರೋಧವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಒತ್ತಾಯಿಸಿದರು.
   ಮುಖಂಡರಾದ ಟಿಪ್ಪು ಸುಲ್ತಾನ್, ಧನುಷ್ ಮಾತನಾಡಿದರು. ಶ್ರೀನಿವಾಸ್ ದಾಸಕರಿಯಪ್ಪ, ಪಿ.ಸಿ.ಶ್ರೀನಿವಾಸ್, ಸಚಿನ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts